ನ್ಯೂಸ್

ವಿಮಾನದ ಬಾತ್‌ರೂಮ್‌ನಿಂದ ಬಿದ್ದು ಪ್ರಾಣ ಕಳೆದುಕೊಂಡ ಪೈಲೆಟ್​​​

ಅಮೆರಿಕ: ವಿಮಾನದ ಬಾತ್‌ರೂಮ್‌ನಲ್ಲಿ ಪೈಲಟ್ ಕುಸಿದು ಬಿದ್ದು ಪ್ರಾಣ ಬಿಟ್ಟ ಪರಿಣಾಮ ವಿಮಾ ತುರ್ತು ಲ್ಯಾಂಡಿಂಗ್ ಆದ ಘಟನೆ ಅಮೆರಿಕಾದ ಪನಾಮದಲ್ಲಿ ನಡೆದಿದೆ. ಖಾಸಗಿ ಪ್ಲೈಟೊಂದರಲ್ಲಿ ಈ ಘಟನೆ ನಡೆದಿದೆ. ಈ ವಿಮಾನದವೂ ಲಾಟಾಮ್ ಏರ್‌ಲೈನ್ಸ್‌ಗೆ (LATAM Airlines flight)ಸೇರಿದ್ದಾಗಿದ್ದು, ವಿಮಾನವೂ ಮಿಯಾಮಿ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಮೂರು ಗಂಟೆಯ ನಂತರ ಅವರಿಗೆ ಪೈಲಟ್ ಅಸ್ವಸ್ಥಗೊಂಡಿದ್ದು, ವಿಮಾನದ ಬಾತ್‌ರೂಮ್‌ನಲ್ಲೇ ಕುಸಿದು ಬಿದ್ದಿದ್ದಾರೆ.


ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ಈ ಖಾಸಗಿ ಫ್ಲೈಟ್‌ನಲ್ಲಿ 271 ಜನರಿದ್ದರು. ಮೃತ ಪೈಲಟ್‌ನ್ನು ಇವಾನ್ ಅಂದೂರ್ ಎಂದು ಗುರುತಿಸಲಾಗಿದೆ ಎಂದು ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ.
ಮೃತ ಪೈಲಟ್ ಇವಾನ್ ಅಂದೌರ್ ಅವರು 25 ವರ್ಷಗಳ ಅನುಭವ ಹೊಂದಿದ್ದ ಬಹಳ ಅನುಭವಿ ಪೈಲಟ್ ಆಗಿದ್ದರು. ವಿಮಾನವು ಪನಾಮ ಸಿಟಿಯ ಟೊಕುಮೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ವೈದ್ಯಕೀಯ ತಜ್ಷರು ಪೈಲಟ್‌ನ್ನು ಪರಿಶೀಲಿಸಿದ್ದಾರೆ.

ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಾಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
''ನಿನ್ನೆ ಮಿಯಾಮಿಯಿಂದ ಸ್ಯಾಂಟಿಯಾಗೊಗೆ ಹೊರಟಿದ್ದ ಫ್ಲೈಟ್ LA505 ನ ಕಮಾಂಡ್ ಸಿಬ್ಬಂದಿಯ ಮೂವರು ಸದಸ್ಯರಲ್ಲಿ ಒಬ್ಬರಿಗೆ ವೈದ್ಯಕೀಯ ತುರ್ತುಸ್ಥಿತಿ ಉಂಟಾದ ಕಾರಣ ಪನಾಮದ ಟೊಕುಮೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತಾಗಿ ಇಳಿಯುವಂತಾಯ್ತು'' ಎಂದು ಲ್ಯಾಟಮ್ ಏರ್‌ಲೈನ್ಸ್ ಪ್ರಕಟಣೆ ಹೊರಡಿಸಿದೆ.


ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಮೃತರಾದ ಪೈಲಟ್ ಅಂಡೂರ್ ಅವರಿಗೆ 56 ವರ್ಷ ವಯಸ್ಸಾಗಿತ್ತು. ನಡೆದಿರುವ ಈ ದುರಂತದಿಂದ ನಮಗೂ ನೋವಾಗಿದೆ. ಅಕಾಲಿಕವಾಗಿ ಸಾವಿಗೀಡಾದ ನಮ್ಮ ಉದ್ಯೋಗಿಯ ಕುಟುಂಬಕ್ಕೆ ನಾವು ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇವೆ. ಸಮರ್ಪಣೆ, ವೃತ್ತಿಪರತೆ ಮತ್ತು ಸಮರ್ಪಣೆಯಿಂದ ಕೂಡಿದ್ದ ಅವರ 25 ವರ್ಷಗಳ ವೃತ್ತಿಜೀವನ ಹಾಗೂ ಅವರು ನೀಡಿದ ಅಮೂಲ್ಯ ಸೇವೆಗೆ ನಾವು ಕೃತಜ್ಞರಾಗಿರುತ್ತೇವೆ.