ನ್ಯೂಸ್

ಅರೆಬೆತ್ತಲೆ ಫೋಟೋ ವೆಬ್​ಸೈಟ್​​ಗೆ ಅಪ್ಲೋಡ್ ಮಾಡಿದ ಶಿಕ್ಷಕಿ; ಫಿಸಿಕ್ಸ್​ ಟೀಚರ್​​​ನ ಅವಾಂತರವನ್ನು ಎಲ್ಲೆಡೆ ಹೇಳಿಕೊಂಡು ಬಂದ ವಿದ್ಯಾರ್ಥಿ!

ಎಡಿನ್​ಬರ್ಗ್​: ಫಿಸಿಕ್ಸ್​​ ಟೀಚರ್ ಒಬ್ಬರು ಮಾಡಬಾರದ ಅವಾಂತರ ಮಾಡಿಕೊಂಡು ಕೆಲಸ ಕಳೆದುಕೊಂಡಿದ್ದಾರೆ. ಕಿರ್ಸ್ಟಿ ಬುಕಾನ್ ಎಂಬ ಸ್ಕಾಟ್​ಲ್ಯಾಂಡ್​ನ ಶಿಕ್ಷಕಿಯೊಬ್ಬರು ಅರೆಬೆತ್ತಲೆ ಫೋಟೋವನ್ನು ವೆಬ್​ಸೈಟ್​​ನಲ್ಲಿ ಅಪ್ಲೋಡ್​ ಮಾಡಿ ತನ್ನ ವಿದ್ಯಾರ್ಥಿಯೊಬ್ಬನಿಗೆ ಸಿಕ್ಕಿ ಬಿದ್ದಿದ್ದಾಳೆ. ಆ ವಿದ್ಯಾರ್ಥಿ ಶಿಕ್ಷಕಿಯ ಅರೆಬೆತ್ತಲೆ ಫೋಟೋ ವಿಚಾರವನ್ನು ಶಾಲೆಯಲ್ಲಿ ಹೇಳಿಕೊಂಡು ಬಂದಿದ್ದಾನೆ. ಇದು ಆಡಳಿತ ಮಂಡಳಿಯ ಗಮನಕ್ಕೆ ಬಂದು, ಶಿಕ್ಷಕಿಯನ್ನು ಅಮಾನತು ಮಾಡಿ ಮನೆಗೆ ಕಳುಹಿಸಿದ್ದಾರೆ.

ವರದಿಯ ಪ್ರಕಾರ, ಕಿರ್ಸ್ಟಿ ಬುಕಾನ್ ಸ್ಕಾಟ್​​ಲ್ಯಾಂಡ್​​ನ ಬ್ಯಾನರ್ಮನ್ ಹೈಸ್ಕೂಲ್​ನಲ್ಲಿ ಫಿಸಕ್ಸ್​ ಟೀಚರ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು. ಹಗಲು ಹೊತ್ತಿನಲ್ಲಿನ ಈಕೆಯ ಕೆಲಸಕ್ಕೂ, ರಾತ್ರಿಯ ಕೆಲಸಕ್ಕೂ ಹೊಂದಿಕೆಯಾಗುತ್ತಿರಲಿಲ್ಲ. ಇಡೀ ಸಮೂಹವೇ ತಲೆ ತಗ್ಗಿಸುವಂತಹ ಕೆಲಸ ಮಾಡುತ್ತಿದ್ದಳು ಈ ಶಿಕ್ಷಕಿ. ಪ್ರತಿದಿನ ರಾತ್ರಿ ತನ್ನ ಬೆತ್ತಲೆ ಫೋಟೋವನ್ನು ವಿವಿಧ ವೆಬ್​ಸೈಟ್​​ಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಳು. ಇದಲ್ಲದೇ ವಿವಿಧ ವೆಬ್​ಸೈಟ್​ಗಳಿಗಾಗಿ ಅರೆಬೆತ್ತಲೆ ಅವತಾರದಲ್ಲಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಳು. ಇದರಿಂದ ದೊಡ್ಡ ಮೊತ್ತದ ಆದಾಯ ಗಳಿಸುತ್ತಿದ್ದಳು.

ಆದರೆ ಅದೃಷ್ಟ ಮಾತ್ರ ಎಲ್ಲಾ ದಿನವೂ ಒಂದೇ ರೀತಿ ಇರುವುದಿಲ್ಲ. ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ. ಎಂದಿನಂತೆ ಶಿಕ್ಷಕಿ ತನ್ನ ಅರೆಬೆತ್ತಲೆ ಫೋಟೋ ಅಪ್ಲೋಡ್ ಮಾಡಿದ್ದಳು. ಈ ವೇಳೆ ವಿದ್ಯಾರ್ಥಿಯೊಬ್ಬ ಶಿಕ್ಷಕಿಯ ಫೋಟೋ ನೋಡಿದ್ದಾನೆ. ನಂತರ ಶಾಲೆಗೆ ಬಂದು ತಾನು ನೋಡಿರುವ ಫೋಟೋದ ಬಗ್ಗೆ ಎಲ್ಲರಲ್ಲಿ ಹೇಳಿಕೊಂಡು ಬಂದಿದ್ದಾನೆ. ಇದರಿಂದ ಮುಜುಗರಕ್ಕೀಡಾಗ ಶಾಲಾ ಆಡಳಿತ ಮಂಡಳಿ, ವಿಚಾರಣೆ ನಡೆಸಿ ಶಿಕ್ಷಕಿಯ ಮೇಲೆ ಕ್ರಮ ಜರುಗಿಸಿದೆ.

ಸದ್ಯ ಕೆಲಸ ಕಳೆದುಕೊಂಡಿರುವ ಶಿಕ್ಷಕಿ, ನನಗೆ 11 ವರ್ಷ ವಯಸ್ಸಿನ ಮಗನಿದ್ದಾನೆ. ಅವನು ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಅವನ ಚಿಕಿತ್ಸೆಗಾಗಿ ಹೆಚ್ಚಿನ ಹಣ ಬೇಕಾಗುತ್ತದೆ. ಹೀಗಾಗಿ ನನ್ನ ಖಾಸಗಿ ಫೋಟೋಗಳನ್ನು ಮಾರಿಕೊಳ್ಳುತ್ತಿದ್ದೆ ಎಂದು ಹೇಳಿರುವುದು ವರದಿಯಾಗಿದೆ. (ಏಜೆನ್ಸೀಸ್)