ಪ್ರೌಢಶಾಲೆಗಳ 17 ವರ್ಷ ವಯೋಮಿತಿಯೊಳಗಿನವರ ಶಿವಮೊಗ್ಗ ತಾಲೂಕಿನ ಎ ಮತ್ತು ಬಿ ವಲಯ ಮಟ್ಟದ ಕ್ರೀಡಾಕೂಟವನ್ನು ಜಿ.ಕೆ.ಮಿಥುನ್‌ಕುಮಾರ್ ಉದ್ಘಾಟಿಸಿದರು. ಶ್ರೀ ಪ್ರಸನ್ನನಾಥ ಸ್ವಾಮೀಜಿ, ಆರ್.ಗಿರೀಶ್, ರಮೇಶ್, ನಿರಂಜನ ಮೂರ್ತಿ, ದಿನೇಶ್, ಶ್ರೀನಿವಾಸ್, ಎಸ್.ಎಚ್.ಸುರೇಶ್ ಮುಂತಾದವರಿದ್ದರು. 
ನ್ಯೂಸ್

ಕ್ರೀಡೆಯಿಂದ ಶಾರೀರಿಕ, ಮಾನಸಿಕ ಸ್ವಾಸ್ತ್ಯ: ಸ್ವಾಮೀಜಿ

ಶಿವಮೊಗ್ಗ: ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸ್ವಾಸ್ಥ್ಯವನ್ನು ಕೊಡುವಂತಹ ಕ್ಷೇತ್ರವೆಂದರೆ ಅದು ಕ್ರೀಡಾ ಕ್ಷೇತ್ರ ಮಾತ್ರ ಎಂದು ಆದಿಚುಂಚನಗಿರಿ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಆಭಿಪ್ರಾಯಪಟ್ಟರು.

ಗುರುಪುರದ ಬಿಜಿಎಸ್ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಅನುದಾನರಹಿತ ಪ್ರೌಢಶಾಲೆಗಳ 17 ವರ್ಷ ವಯೋಮಿತಿಯೊಳಗಿನವರ ಶಿವಮೊಗ್ಗ ತಾಲೂಕಿನ ಎ ಮತ್ತು ಬಿ ವಲಯ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಯಾವುದೇ ಕೆಲಸ ಮಾಡಬೇಕಾದರೆ, ಮನಸ್ಸು ಸ್ವಾಸ್ಥ್ಯವಾಗಿರಬೇಕು. ಮನಸ್ಸು ಸ್ವಾಸ್ಥ್ಯವಾಗಿ, ಆರೋಗ್ಯಕರವಾಗಿ ಇರಲು ಕ್ರೀಡೆ ಸಹಕಾರಿಯಾಗಿದೆ. ತರಗತಿ ಮಧ್ಯದಲ್ಲಿರುವ ಸಂತೋಷಕ್ಕೂ, ಆಟದ ಮೈದಾನದಲ್ಲಿರುವ ಸಂತೋಷಕ್ಕೂ ಇರುವ ವ್ಯತ್ಯಾಸವನ್ನು ವಿದ್ಯಾರ್ಥಿಗಳು ಗುರುತಿಸಬಹುದಾಗಿದೆ ಎಂದರು.
ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಎಸ್ಪಿ ಜಿ.ಕೆ. ಮಿಥುನ್‌ಕುಮಾರ್, ಮೊಬೈಲ್, ಟಿವಿ ಹಾವಳಿಯಿಂದ ಕ್ರೀಡೆಗೆ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ಓದಿಗೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು, ಪಠ್ಯೇತರ ಚಟುವಟಿಕೆಗಳಿಗೂ ಕೊಡಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್, ಅನುದಾನರಹಿತ ಪ್ರೌಢಶಾಲೆಗಳ ಒಕ್ಕೂಟದ ಅಧ್ಯಕ್ಷ ಆರ್.ಗಿರೀಶ್, ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ನಿರಂಜನ ಮೂರ್ತಿ, ಒಕ್ಕೂಟದ ಕಾರ್ಯದರ್ಶಿ ಶ್ರೀನಿವಾಸ್, ದಿನೇಶ್, ಪ್ರಾಚಾರ್ಯ ಎಸ್.ಎಚ್.ಸುರೇಶ್ ಮುಂತಾದವರಿದ್ದರು.