ನ್ಯೂಸ್

ಪುತಿನ್​ ಆರೋಗ್ಯ ಕ್ಷೀಣ, ದಂಗೆ ಸಾಧ್ಯತೆ!

ಕಿಯೆವ್​/ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾದಿಮರ್​ ಪುತಿನ್​ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವರಿಗೆ ಕಾನ್ಸರ್​ ಮತ್ತು ಇನ್ನಿತರ ಗಂಭೀರ ಕಾಯಿಲೆಗಳು ಇವೆ ಎನ್ನಲಾಗಿದೆ. ರಷ್ಯಾದಲ್ಲಿ ದಂಗೆ ರೂಪುಗೊಳ್ಳುತ್ತಿದ್ದು, ಅವರ ಅಧಿಕಾರದ ಅವಸಾನಕ್ಕೆ ಈ ಯುದ್ಧವೇ ಕಾರಣ ಆಗಲಿದೆ ಯೂಕ್ರೇನ್​ ಆರೋಪಿಸಿದೆ.

ರಷ್ಯಾದಲ್ಲಿ ಜನರು ದಂಗೆಯನ್ನು ತಡೆಯಲು ಯಾರಿದಂಲೂ ಸಾಧ್ಯವಾಗುವುದಿಲ್ಲ. ಇದಕ್ಕೆ ಪುತಿನ್​ ಬಲಿಪಶು ಆಗುವುದು ಮತ್ತು ರಷ್ಯಾ ಪತನ ನಿಶ್ಚಿತ ಎಂದು ಯೂಕ್ರೇನ್​ ಸೇನೆಯ ಬೇಹುಗಾರಿಕಾ ವಿಭಾಗದ ಮುಖ್ಯಸ್ಥ ಮೇಜರ್​ ಜನರಲ್​ ಕಿರಿಲೋ ಬುಡಾ-ನೋವ್​ ಹೇಳಿದ್ದಾರೆ. ಈ ಯುದ್ಧವು ಆಗಸ್ಟ್​ ಎರಡನೇ ವಾರದಲ್ಲಿ ನಿರ್ಣಾಯಕ ಹಂತ ತಲುಪುವ ಸಾಧ್ಯತೆ ಇದೆ. ಈ ವರ್ಷಾಂತ್ಯಕ್ಕೆ ಸಕ್ರಿಯ ಸಮರ ಕೊನೆಯಾಗಲಿದ್ದು, ಡಾನ್​ಬಾಸ್​, ಕ್ರಿಮಿಯಾ ಸೇರಿ ನಮ್ಮೆಲ್ಲ ಪ್ರದೇಶಗಳ ಮೇಲೆ ಪಾರಮ್ಯ ಸಾಧಿಸಲಿದ್ದೇವೆ ಎಂದು ಸ್ಕೆ$ ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಖಾರ್ಕಿವ್​ನಿಂದ ಹಿಂದೆ ಸರಿದ ರಷ್ಯಾ ಪಡೆ

ಯೂಕ್ರೇನ್​ ಎರಡನೇ ಅತಿ ದೊಡ್ಡ ನಗರ ಖಾರ್ಕಿವ್​ ಮೇಲೆ ಒಂದು ವಾರ ಬಾಂಬ್​ ಹಾಕಿ, ಅದನ್ನು ಸುತ್ತುವರಿದಿದ್ದ ರಷ್ಯಾ ಸೇನೆ ಈಗ ಹಿಂದೆ ಸರಿಯುತ್ತಿದೆ. ಅದರ ಲಕ್ಷ$್ಯ ಪೂರ್ವ ಯೂಕ್ರೇನ್​ನ ಕೈಗಾರಿಕಾ ವಸಹಾತುಗಳ ಮೇಲೆ ಬಿದ್ದಿದೆ ಎಂದು ಯೂಕ್ರೇನ್​ ಸೇನೆ ಹೇಳಿದೆ. ಡೊನೆಟ್​ಸ್ಕ್​ ಪ್ರಾಂತ್ಯದ ಕೈಗಾರಿಕಾ ಪ್ರದೇಶಗಳಿಗೆ ಪೂರೈಕೆಯ ಮಾರ್ಗವನ್ನು ನಾಶ ಮಾಡಲು ಮಾರ್ಟರ್​ ದಾಳಿಯನ್ನು ರಷ್ಯಾ ಆರಂಭಿಸಿದೆ ಎಂದು ತಿಳಿಸಿದೆ.