ಶಿವಮೊಗ್ಗದ ಶಿವಪ್ಪನಾಯಕ ಅರಮನೆಯಲ್ಲಿ ಏರ್ಪಡಿಸಿದ್ದ ಛಾಯಾಚಿತ್ರ ಪ್ರದರ್ಶನವನ್ನು ಎಸ್.ಎನ್.ಚನ್ನಬಸಪ್ಪ, ಗುರುದತ್ತ ಹೆಗಡೆ, ಪ್ರಸನ್ನಕೃಷ್ಣ ಪಟಗಾರ್ ಮತ್ತಿತರರು ವೀಕ್ಷಿಸಿದರು. 
ನ್ಯೂಸ್

ಶಿವಮೊಗ್ಗ ದಸರಾದಲ್ಲಿ ಛಾಯಾಚಿತ್ರ, ಚಿತ್ರಕಲಾ ಪ್ರದರ್ಶನ

ಶಿವಮೊಗ್ಗ: ಕಲಾ ದಸರಾ ಅಂಗವಾಗಿ ಶಿವಪ್ಪನಾಯಕ ಅರಮನೆಯಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಛಾಯಾಚಿತ್ರ ಹಾಗೂ ಚಿತ್ರಕಲಾ ಪ್ರದರ್ಶನಕ್ಕೆ ಮಂಗಳವಾರ ಚಾಲನೆ ಸಿಕ್ಕಿತು. ಕಲಾ ದಸರಾ ನೋಡುಗರ ಕಣ್ಮನ ಸೆಳೆಯಿತು.

ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ 25 ಕ್ಕೂ ಹೆಚ್ಚು ಕಲಾವಿದರು, ಸ್ಥಳದಲ್ಲಿಯೇ ವಿವಿಧ ಕಲಾ ಕೃತಿಗಳನ್ನು ರಚಿಸಿ, ನೋಡುಗರಲ್ಲಿ ಅಚ್ಚರಿ ಮೂಡಿಸಿದರು. ಚಿತ್ರಕಲಾ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಕಲಾವಿದರೊಬ್ಬರು, ಕಲಾ ದಸರಾ ಉದ್ಘಾಟನೆಗೆ ಬಂದಿದ್ದ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರ ಭಾವಚಿತ್ರವನ್ನು ಸ್ಥಳದಲ್ಲಿಯೇ ರಚಿಸಿ ಅವರಿಗೆ ನೀಡುವ ಮೂಲಕ ಎಲ್ಲರ ಗಮನಸೆಳೆದರು.
ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ಯೋಗರಾಜ್, ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕ ಮಂಡಗದ್ದೆ ನಟರಾಜ್, ಹವ್ಯಾಸಿ ಛಾಯಾಗ್ರಾಹಕರಾದ ಡಾ. ಶ್ರೀಕಾಂತ ಹೆಗಡೆ, ಡಾ. ಪಿ.ಕೆ.ಪೈ, ಡಾ. ಪರಮೇಶ್ವರ ಶಿಗ್ಗಾಂವ್, ಡಾ. ಶೇಖರ್ ಗೌಳೇರ್, ಏಕಲವ್ಯ ಅವರ ಛಾಯಾಚಿತ್ರಗಳು ಆಕರ್ಷಿಸಿದವು.