ಬೆಂಗಳೂರು: ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರ ಜೀವನಾಧಾರಿತ 'ವಿಜಯಾನಂದ' ಸಿನಿಮಾದ ಟ್ರೇಲರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನಗರ ಒರಾಯನ್ ಮಾಲ್ನಲ್ಲಿ ಬಿಡುಗಡೆ ಮಾಡಿದರು. ವಿಆರ್ಎಲ್ ಫಿಲ್ಮ್ ಪ್ರೊಡಕ್ಷನ್ಸ್ನ ಚೊಚ್ಚಲ ನಿರ್ಮಾಣದ ಈ ಸಿನಿಮಾ ಐದು ಭಾಷೆಗಳಲ್ಲಿ ತೆರೆ ಕಾಣುತ್ತಿದ್ದು, ಐದೂ ಭಾಷೆಗಳಲ್ಲೂ ಇಂದು ಟ್ರೇಲರ್ ಬಿಡುಗಡೆಗೊಂಡಿತು.
ಈ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು, ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ಅವರ ಪತ್ನಿ ವಾಣಿ ಸಂಕೇಶ್ವರ, ಪುತ್ರ ಶಿವ ಸಂಕೇಶ್ವರ, ವಿಜಯ ಸಂಕೇಶ್ವರ ಅವರ ಪತ್ನಿ ಲಲಿತಾ ಸಂಕೇಶ್ವರ ಉಪಸ್ಥಿತರಿದ್ದರು. ಚಿತ್ರದ ನಾಯಕ ನಿಹಾಲ್, ನಿರ್ದೇಶಕಿ ರಿಶಿಕಾ, ನಟಿ ವಿನಯಾಪ್ರಸಾದ್, ವಿತರಕ ಜಾಕ್ ಮಂಜು ಮುಂತಾದವರು ಭಾಗವಹಿಸಿದ್ದರು.
ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಟ್ರೇಲರ್ಗಳು ಭಾರಿ ಸಂಖ್ಯೆಯಲ್ಲಿ ವೀಕ್ಷಣೆಗೆ ಒಳಗಾಗುತ್ತಿದ್ದು, ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಹಾಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನಂತನಾಗ್, ರವಿಚಂದ್ರನ್ ಅವರಂಥ ಘಟಾನುಘಟಿಗಳು ಅಭಿನಯಿಸಿರುವ ಈ ಸಿನಮಾ ಡಿಸೆಂಬರ್ 9ರಂದು ಜಗತ್ತಿನಾದ್ಯಂತ ಏಕಕಾಲದಲ್ಲಿ ಬಿಡುಗಡೆ ಆಗಲಿದೆ.