ನ್ಯೂಸ್

FIRST LOOK; ಫ್ಯಾಂಟಮ್​ ಜಗತ್ತಿನ ವಿಕ್ರಾಂತ್​ ರೋಣನ ಅವತಾರ ಬಹಿರಂಗ!

manjunathktgns

ಈಗಾಗಲೇ ಶೂಟಿಂಗ್ ಮತ್ತು ಸ್ನೀಕ್​ ಪಿಕ್​ಗಳ ಮೂಲಕವೇ ಸದ್ದು ಮಾಡುತ್ತಿರುವ ಫ್ಯಾಂಟಮ್​ ಚಿತ್ರತಂಡ, ಸೋಮವಾರ ಅಭಿಮಾನಿಗಳಿಗೆ ಮತ್ತೊಂದು ಉಡುಗೊರೆ ನೀಡಿದೆ. ಈಗಾಗಲೇ ಶೂಟಿಂಗ್​ ಸೆಟ್​ನಲ್ಲಿ ಕಳೆದ ನಾಲ್ಕು ತಿಂಗಳ ಬಳಿಕ ಕ್ಯಾಮರಾ ಎದುರಿಸಿದ ಅನುಭವ ಹೇಳಿಕೊಂಡು, ಅದರ ಸಣ್ಣ ದೃಶ್ಯಗಳನ್ನು ಹಂಚಿಕೊಂಡಿದ್ದ ಸುದೀಪ್​, ಇದೀಗ ಅವರ ಮಾಸ್​ ಲುಕ್​ ಅನ್ನು ರಿವೀಲ್ ಮಾಡಿದ್ದಾರೆ. ಫ್ಯಾಂಟಮ್ ಜಗತ್ತಿನ ವಿಕ್ರಾಂತ್​ ರೋಣನ ಅವತಾರ ಬಹಿರಂಗವಾಗಿದೆ.

ಹೌದು, ಅನೂಪ್​ ಭಂಡಾರಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಫ್ಯಾಂಟಮ್​ ಚಿತ್ರದಲ್ಲಿ ಕಿಚ್ಚ ಸುದೀಪ್​ ವಿಕ್ರಾಂತ್​ ರೋಣ ಪಾತ್ರದಲ್ಲಿ ಖಡಕ್​ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅವರ ಆ ಗತ್ತು ಗಮ್ಮತ್ತು ಹೇಗಿರಲಿದೆ ಎಂಬುದಕ್ಕೆ ಸಣ್ಣ ಸಣ್ಣ ದೃಶ್ಯಗಳ ಮೂಲಕ ಬಹಿರಂಗವಾಗಿದೆ. ಆದರೆ, ಅವರ ಪೂರ್ತಿ ಲುಕ್​ ಹೇಗಿದೆ ಎಂಬ ಬಗ್ಗೆ ಎಲ್ಲಿಯೂ ಲುಕ್​ ಬಿಡುಗಡೆ ಮಾಡಿರಲಿಲ್ಲ ಚಿತ್ರತಂಡ. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದ್ದು, ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಸದ್ಯ ಹೈದರಾಬಾದ್​ನಲ್ಲಿ ಶೂಟಿಂಗ್​ ನಡೆಯುತ್ತಿದ್ದು, ಕರೊನಾ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತ ಚಿತ್ರೀಕರಣ ಮಾಡಿಕೊಳ್ಳುತ್ತಿದೆ ಫ್ಯಾಂಟಮ್​ ಚಿತ್ರತಂಡ. ಜಾಕ್​ ಮಂಜು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸುತ್ತಿದ್ದಾರೆ.