ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡು ಹೈರಾಣಾಗಿದ್ದ ವಾಹನ ಸವಾರರಿಗೆ ಇದು ಶುಭ ಬುಧವಾರ ಎನ್ನಬಹುದು. ಸತತ ಏರಿಕೆ ಕಂಡಿದ್ದ ಇಂಧನ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದೆ.
ರಾಷ್ಟ್ರ ರಾಜಧಾನಿ ನವದೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 18 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 17 ಪೈಸೆ ಇಳಿಕೆ ಕಂಡುಬಂದಿದೆ. ಇದೀಗ ಒಂದು ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 90.99 ರೂಪಾಯಿ ಹಾಗೂ 81.30 ರೂಪಾಯಿಯಾಗಿದೆ. ಬೆಂಗಳೂರಿನಲ್ಲೂ 18 ಪೈಸೆ ಇಳಿಕೆಯಾಗಿದ್ದು, ಒಂದು ಲೀಟರ್ ಪೆಟ್ರೋಲ್ ಬೆಲೆ 94.04 ರೂಪಾಯಿಯಾಗಿದೆ. ಡೀಸೆಲ್ ಬೆಲೆ 86.21 ರೂಪಾಯಿಯಾಗಿದೆ.
ಕಳೆದ 15 ದಿನಗಳಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲದ ದರದಲ್ಲಿ ಸತತ ಇಳಿಕೆ ಕಂಡುಬಂದಿದೆ. ಕೇವಲ 15 ದಿನಗಳಲ್ಲಿ ಬ್ಯಾರೆಲ್ಗೆ 71 ಡಾಲರ್ ಇದ್ದ ಕಚ್ಚಾ ತೈಲದ ದರ 64 ಡಾಲರ್ಗೆ ಇಳಿದಿದೆ. ಇದರಿಂದಾಗಿ ಸಾರ್ವಜನಿಕ ವಲಯದ ತೈಲ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಸಲು ಹೆಚ್ಚಿನ ಅವಕಾಶ ಸಿಕ್ಕಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್)