6 ಪ್ರಕರಣ ಬೆಳಕಿಗೆ, ದೇಶದ ವಿವಿಧೆಡೆ 232 ಪೆಟ್ರೋಲ್ ಬಂಕ್ಗಳ ಪರವಾನಗಿ ರದ್ದು
| ಕೀರ್ತಿನಾರಾಯಣ ಸಿ. ಬೆಂಗಳೂರು
ಅಕ್ಕಿ, ಬೇಳೆ, ಸಕ್ಕರೆಯಂತಹ ದಿನಬಳಕೆ ವಸ್ತುಗಳ ಕಲಬೆರಕೆ ಪ್ರಕರಣ ಹೆಚ್ಚುತ್ತಿರುವ ನಡುವೆಯೇ ಪೆಟ್ರೋಲಿಯಂ ಉತ್ಪನ್ನಗಳಲ್ಲೂ ಕಲಬೆರಕೆ ಮಾಡಿ ಮಾರಾಟ ಮಾಡುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳ (ಒಎಂಸಿ) ಔಟ್ಲೆಟ್ಗಳಲ್ಲಿ ಕಲಬೆರಕೆ ಇಂಧನದ ಜತೆಗೆ ಅವ್ಯವಹಾರ, ಅಕ್ರಮ ಮಾರಾಟ ಮತ್ತು ಖರೀದಿ ಹಾಗೂ ಅಳತೆಯಲ್ಲಿ ಮೋಸ ಮಾಡುತ್ತಿರುವ ಕುರಿತು ದೇಶಾದ್ಯಂತ ಲಕ್ಷಾಂತರ ದೂರುಗಳು ದಾಖಲಾಗಿವೆ.
1955ರ ಅಗತ್ಯ ಸರಕುಗಳ ಕಾಯ್ದೆಯಡಿ ಕೇಂದ್ರ ಸರ್ಕಾರ ಮೋಟಾರ್ ಸ್ಪಿರಿಟ್ ಮತ್ತು ಹೈ ಸ್ಪೀಡ್ ಡೀಸೆಲ್ (ಪೂರೈಕೆ, ವಿತರಣೆ ಮತ್ತು ದುಷ್ಕೃತ್ಯಗಳ ತಡೆಗಟ್ಟುವಿಕೆ ನಿಯಂತ್ರಣ) ನಿಯಮ 2005 ಜಾರಿಗೆ ತಂದಿದೆ. ಇದರನ್ವಯ ಪೆಟ್ರೋಲಿಯಂ ಉತ್ಪನ್ನಗಳ ಕಲಬೆರಕೆ ಸೇರಿ ಇನ್ನಿತರ ದುಷ್ಕೃತ್ಯ ಕಂಡುಬಂದಲ್ಲಿ ಅಂತಹವರ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಳ್ಳುವ ಅಧಿಕಾರ ಒದಗಿಸಲಾಗಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮಾಹಿತಿ ಅನ್ವಯ 2019 ರಿಂದ 2024ರ ಡಿಸೆಂಬರ್ವರೆಗೆ 3,04,264 ದೂರು ದಾಖಲಾಗಿವೆ.
ಒಎಂಸಿ ಅಧಿಕಾರಿಗಳ ತಪಾಸಣೆ ವೇಳೆ ಪೆಟ್ರೋಲ್ ಹಾಗೂ ಡೀಸೆಲ್ ಕಲಬೆರಕೆ ಮಾರಾಟ ದಂಧೆ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 6 ಪೆಟ್ರೋಲಿಯಂ ಉತ್ಪನ್ನ ಔಟ್ಲೆಟ್ ಸೇರಿ ದೇಶಾದ್ಯಂತ 232 ಔಟ್ಲೆಟ್ ಮಾರಾಟ ಪರವಾನಗಿ ರದ್ದುಪಡಿಸಿದೆ. ರಾಜಸ್ಥಾನ ಹಾಗೂ ಉತ್ತರಪ್ರದೇಶದಲ್ಲಿ ಅತಿಹೆಚ್ಚು ತಲಾ 36 ಬಂಕ್ಗಳ ಪರವಾನಗಿ ರದ್ದಾಗಿದೆ. ಒಟ್ಟಾರೆಯಾಗಿ 2,18,166 ಔಟ್ಲೆಟ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಸೀಮೆಎಣ್ಣೆ ಕಲಬೆರಕೆ
ನಿಗದಿತ ಶುಲ್ಕಕ್ಕಿಂತ ಹೆಚ್ಚು ಶುಲ್ಕ ವಸೂಲಿ
ಅನಧಿಕೃತ ಇಂಧನ ಖರೀದಿಸಿ, ಮಾರಾಟ ಮಾಡುವುದು
ಟ್ಯಾಂಕ್ ಟ್ರಕ್ ಸೀಲ್ ಟ್ಯಾಂಪರ್ ಮಾಡಿ ಕಳವು ದಂಧೆ
ಗುಣಮಟ್ಟ, ಪ್ರಮಾಣ ಅಳೆಯಲು ಫಿಲ್ಟರ್ ಪೇಪರ್ ಬಳಕೆ
ಒಎಂಸಿ ಅಧಿಕಾರಿಗಳು ಅನಿರೀಕ್ಷಿತ ಭೇಟಿ ಕೊಟ್ಟು ತಪಾಸಣೆ
ಸ್ಟಾಕ್ ವ್ಯತ್ಯಾಸ, ಅಳತೆ ಮೋಸ, ಟ್ಯಾಂಪರಿಂಗ್ ಬಗ್ಗೆ ಜಾಗೃತಿ
ಕಲಬೆರಕೆ ದೂರು ಬಂದಲ್ಲಿ ಮಾದರಿ ಸಂಗ್ರಹಿಸಿ ಪರೀಕ್ಷೆ ವ್ಯವಸ್ಥೆ
ಅಕ್ರಮ ದೃಢಪಟ್ಟಲ್ಲಿ ಡೀಲರ್ಶಿಪ್ ಒಪ್ಪಂದದ ಪ್ರಕಾರ ಕ್ರಮ
ತಪಾಸಣೆಗಾಗಿ ಪ್ರತ್ಯೇಕ ಗುಣಮಟ್ಟ ಭರವಸೆ ಕೋಶ ರಚನೆ
ಪೆಟ್ರೋಲ್ ಪಂಪ್ನಿಂದ ಮಾದರಿ ಪ್ರಯೋಗಾಲಯಕ್ಕೆ ರವಾನೆ
ಪೆಟ್ರೋಲ್ ಪಂಪ್ ಮಾದರಿ ಪರೀಕ್ಷೆಗೆ ಮೊಬೈಲ್ ಲ್ಯಾಬ್ ವ್ಯವಸ್ಥೆ
ಮಾರ್ಗಮಧ್ಯೆ ಕಳವು ತಡೆಗೆ ಟ್ರಕ್ಗೆ ಟ್ಯಾಂಪರ್ ಪೂ›ಫ್ ಲಾಕ್