ಶಿವಮೊಗ್ಗದ ವಾಣಿಜ್ಯ ಸಂಕೀರ್ಣಗಳನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಅವರಿಗೆ ಮನವಿ ಸಲ್ಲಿಸಿದರು. ಎಚ್.ಸಿ.ಯೋಗೇಶ್, ಎಂ.ಎಸ್.ಶಿವಕುಮಾರ್, ರಮೇಶ್ ಹೆಗ್ಡೆ, ನಾಗರಾಜ್ ಕಂಕಾರಿ, ವಿಶ್ವನಾಥ್ ಕಾಶಿ, ಕೆ.ರಂಗನಾಥ್, ಚಂದ್ರು, ಗಂಗಾಧರ್, ಬಾಲಾಜಿ, ವಿನಯ್ ಇದ್ದರು. 
ನ್ಯೂಸ್

ವಾಣಿಜ್ಯ ಸಂಕೀರ್ಣ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಆಗ್ರಹಿಸಿ ಪಾಲಿಕೆ ಆಯುಕ್ತೆಗೆ ಮನವಿ

ಶಿವಮೊಗ್ಗ: ನಗರದಲ್ಲಿ ಪೂರ್ಣಗೊಂಡಿರುವ ವಾಣಿಜ್ಯ ಸಂಕೀರ್ಣಗಳನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಮಹಾನಗರ ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಅವರಿಗೆ ಮನವಿ ಸಲ್ಲಿಸಿದರು.

ಬಿ.ಎಚ್.ರಸ್ತೆಯು ವ್ಯಾಪಾರ ವಹಿವಾಟಿನ ಕೇಂದ್ರ ಸ್ಥಳವಾಗಿದೆ. ಇಲ್ಲಿ ಪ್ರತಿನಿತ್ಯ ವಾಹನಗಳ ನಿಲುಗಡೆ ವಿಚಾರದಲ್ಲಿ ಸವಾರರು ಹಾಗೂ ವ್ಯಾಪಾರಸ್ಥರಿಗೆ ಕಿರಿಕಿರಿಯಾಗುತ್ತಿದೆ. ಹಾಗಾಗಿ ಮಲ್ಟಿ ಲೆವೆಲ್ ಪಾರ್ಕಿಂಗ್ ಸಂಕೀರ್ಣದಲ್ಲಿ ವಾಹನಗಳ ನಿಲುಗಡೆಗೆ ತ್ವರಿತವಾಗಿ ಅವಕಾಶ ಕಲ್ಪಿಸಬೇಕು. ಇದರಿಂದ ಬಿ.ಎಚ್.ರಸ್ತೆಯಲ್ಲಿ ಪದೇ ಪದೆ ಆಗುವ ಸಂಚಾರ ಸಿಕ್ಕು ನಿವಾರಣೆ ಆಗಲಿದೆ ಎಂದು ಒತ್ತಾಯಿಸಿದರು.

ಗಾರ್ಡನ್ ಏರಿಯಾದಲ್ಲಿ ಹೂವಿನ ಮಾರುಕಟ್ಟೆ ಮಳಿಗೆಗಳನ್ನು ನಿರ್ಮಾಣ ಮಾಡಿದ್ದು ಈಗಾಗಲೇ ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ. ಮಳಿಗೆಗಳನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು. ಜತೆಗೆ ಗಾಂಧಿನಗರದಲ್ಲಿ ಮಹಾನಗರ ಪಾಲಿಕೆಯಿಂದ ನಿರ್ಮಾಣ ಮಾಡಿರುವ ವಾಣಿಜ್ಯ ಸಂಕೀರ್ಣಕ್ಕೆ ಗಾಂಧಿನಗರ ವಾಣಿಜ್ಯ ಸಂಕೀರ್ಣವೆಂಬ ಹೆಸರಿಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ನೀಡಿದರು. ಪ್ರಮುಖರಾದ ಎಚ್.ಸಿ.ಯೋಗೇಶ್, ಎಂ.ಎಸ್.ಶಿವಕುಮಾರ್, ರಮೇಶ್ ಹೆಗ್ಡೆ, ನಾಗರಾಜ್ ಕಂಕಾರಿ, ವಿಶ್ವನಾಥ್ ಕಾಶಿ, ಕೆ.ರಂಗನಾಥ್, ಚಂದ್ರು, ಗಂಗಾಧರ್, ಬಾಲಾಜಿ, ವಿನಯ್ ಮತ್ತಿತರರಿದ್ದರು.