ನ್ಯೂಸ್

ಬ್ಯಾಲೆಟ್​ ಪೇಪರ್​ ಚುನಾವಣೆಗೆ​ ಕೋರಿ ಸಲ್ಲಿಸಿದ್ದ ಅರ್ಜಿ ವಜಾ.. ನೀವುಗಳು ಗೆದ್ದಾಗ EVMಗಳು ಉತ್ತಮವಾಗಿವೆ: ಸುಪ್ರಿಂಕೋರ್ಟ್ ಟೀಕೆ

ನವದೆಹಲಿ: ದೇಶಾದ್ಯಂತ ನಡೆಯುವ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು(EVM) ಬ್ಯಾಲೆಟ್​ ಪೇಪರ್​ನೊಂದಿಗೆ ಬದಲಾಯಿಸುವಂತೆ ಕೋರಿದ್ದ ಅರ್ಜಿಯನ್ನು ಸುಪ್ರಿಂಕೋರ್ಟ್​ ಮಂಗಳವಾರ(ನ.26) ವಜಾಗೊಳಿಸಿದೆ.

ಮತದಾರರಿಗೆ ಚುನಾವಣೆ ಸಮಯದಲ್ಲಿ ಹಣ, ಮದ್ಯ ಹಾಗೂ ಇತರೆ ವಸ್ತುಗಳನ್ನು ವಿತರಿಸಿದ ಅಭ್ಯರ್ಥಿಗಳನ್ನು ಅನರ್ಹಗೊಳಿಸುವುದು ಸೇರಿದಂತೆ ಇವಿಎಂ ಯಂತ್ರಗಳ ಅಕ್ಷೇಪದ ಕುರಿತು ಕೆ.ಎಲ್​ ಪಾಲ್​ ಎಂಬುವವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್​ ನಾಥ್​, ಪಿ.ಬಿ ವರಾಳೆ ಅವರಿದ್ದ ಪೀಠ ವಜಾಗೊಳಿಸಿದೆ.

ಅಲ್ಲದೆ, ''ನೀವು ಗೆದ್ದಾಗ ಮಾತ್ರ ಇವಿಎಂಗಳು ಉತ್ತಮವಾಗಿರುತ್ತವೆ. ಸೋತಾಗ ಟ್ಯಾಂಪರಿಂಗ್​ ಮಾಡಲಾಗುತ್ತಿಯೇ ಎಂದು ಕೋರ್ಟ್​ ಖಾರವಾಗಿ ಟೀಕಿಸಿದೆ.

ಅರ್ಜಿದಾರ ಪಾಲ್​ ಬಗ್ಗೆ ಮಾತನಾಡಿರುವ ಪೀಠ, ಮೂರು ಲಕ್ಷಕ್ಕೂ ಅಧಿಕ ಅನಾಥರ ಮತ್ತು 40 ಲಕ್ಷ ವಿಧವೆಯರನ್ನು ರಕ್ಷಿಸಿದ ಒಂದು ಉತ್ತಮವಾದ ಸಂಸ್ಥೆಯ ಅಧ್ಯಕ್ಷರಾದ್ದಿರಿ. ಇಂತಹ ರಾಜಕೀಯ ವಿಷಯಗಳಗೆ ಏಕೆ ಮುಂದಾಗುತ್ತಿದ್ದಿರಿ ಎಂದು ಪ್ರಶ್ನಿಸಿದೆ. ಇದಕ್ಕೆ ಉತ್ತರಿದ ಪಾಲ್​, ನಾನು 150 ಕ್ಕೂ ಅಧಿಕ ದೇಶಗಳಲ್ಲಿ ಓಡಾಡಿದ್ದೇನೆ. ಬಹುಪಾಲು ದೇಶಗಳು ಬ್ಯಾಲೆಟ್​ ಪೇಪರ್​ನೊಂದಿಗೆ ಚುನಾವಣೆ ಮಾಡುತ್ತಿವೆ. ನಾವು ಯಾಕೆ ಇದನ್ನೇ ಮುಂದುವರಿಸಬಾರದು ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಪೀಠವು, ಇತರ ದೇಶಗಳಿಗಿಂತ ನಾವೇಕೆ ಭಿನ್ನವಾಗಿರಬಾರದು? ಎಂದು ಮರು ಪ್ರಶ್ನೆ ಹಾಕಿದೆ.

ಅರ್ಜಿದಾರ ಪಾಲ್, ಜೂ.20214ರ ವರದಿ ಉಲ್ಲೇಖಿಸಿ, ಕಳೆದ ಚುನಾವಣೆಯಲ್ಲಿ 9 ಸಾವಿರ ಕೋಟಿ ರೂ ವಶಪಡಿಸಿಕೊಂಡಿದೆ.ಚುನಾವಣೆಯಲ್ಲಿ ಭ್ರಷ್ಟಾಚಾರ ಅತಿರೇಕವಾಗಿದೆ ಎಂದರು. ಪೀಠವು, ನಾವು ಮತ್ತೆ ಭೌತಿಕ (ಬ್ಯಾಲೆಟ್​) ಮತ ಪೇಪರ್​ಗಳಿಗೆ ಹಿಂತಿರುಗಿದರೆ ಭ್ರಷ್ಟಚಾರ ನಿಲ್ಲುತ್ತದಯೇ? ಎಂದು ಮರು ಪ್ರಶ್ನಿಸಿ, ಅರ್ಜಿಯನ್ನು ತಳ್ಳಿ ಹಾಕಿತು, (ಏಜೆನ್ಸೀಸ್​).