ಹುಣಸೂರು: ಜ್ಞಾನವೊಂದೇ ವ್ಯಕ್ತಿಯ ವಿಶ್ವಾಸ ಹಾಗೂ ವ್ಯಕ್ತಿತ್ವ ರೂಪಿಸುವ ಮಾರ್ಗವಾಗಿದೆ ಎಂದು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಷನ್ ಕಾರ್ಯದರ್ಶಿ ರಿಯಾಜ್ ಅಹಮದ್ ರೋಣ್ ಅಭಿಪ್ರಾಯಪಟ್ಟರು.
ನಗರದ ಸುಮನ್ ಫಂಕ್ಷನ್ ಹಾಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಷನ್‌ನ 22ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯೆ ಕಲಿಯಲು ಯಾವುದೇ ನಿಶ್ಚಿತ ಸಮಯ ನಿಗದಿಯಿಲ್ಲ. ಉಸಿರು ನಿಲ್ಲುವವರೆಗೂ ವಿದ್ಯೆ ಕಲಿಯಲು ಅವಕಾಶವಿದೆ. ಮನುಷ್ಯನಿಗೆ ಬೌದ್ಧಿಕ ಜ್ಞಾನ ಮಾತ್ರ ಅಲ್ಲ ಧಾರ್ಮಿಕ ಜ್ಞಾನವೂ ಅಗತ್ಯವಾಗಿದೆ. ಆದ್ದರಿಂದಲೇ ಪ್ರವಾದಿಯವರು ಜ್ಞಾನವನ್ನು ಪಡೆಯುವುದು ಪ್ರತಿಯೊಬ್ಬ ಮುಸಲ್ಮಾನನ ಮೇಲೆ ಕಡ್ಡಾಯ ಮಾಡಿದ್ದಾರೆ ಎಂದರು.
ಜಮಾತೆ ಇಸ್ಲಾಮಿಕ್ ಹಿಂದ್‌ಮ ಜಿಲ್ಲಾ ಸಂಚಾಲಕ ಅಬ್ದುಲ್ ಖಾದಿರ್ ಮಾತನಾಡಿ, ಶಾಲೆಗಳಲ್ಲಿ ಓದುವ ಮಕ್ಕಳಿಗೆ ಬೋರ್ಡ್‌ನಿಂದ ಒಳ್ಳೆಯ ಪ್ರಜೆಯನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ. ಇತ್ತೀಚೆಗೆ ತಂದೆ ತಾಯಿ ಗುರು ಹಿರಿಯರ ಬಾಂಧವ್ಯ ಕಡಿಮೆ ಆಗುತ್ತಿದೆ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ೈನುಲ್ ಆಬೀದ್ದೀನ್, ತಾಲೂಕಿನ ಜಮಾತೆ ಇಸ್ಲಾಮಿಕ್ ಹಿಂದ್ ಸ್ಥಾನಿಯ ಘಟಕದ ಅಧ್ಯಕ್ಷ ಪಿ.ಎ. ಮುಸ್ತಾಫರ್ ಬೋರ್ಡ್‌ನ ಹುಣಸೂರು ಶಾಖೆಯ ಮೇಲ್ವೀಚಾರಕ ರಾಶಿದ್ ಇತರರು ಇದ್ದರು.