ನ್ಯೂಸ್

ಮಗು ಬೇಕು ಎಂದು ಕೇಳಿದ ಗಂಡನಿಗೆ 3ನೇ ಮದ್ವೆ ಮಾಡಿಸಿದ ಪತ್ನಿಯರು; ನೀನು ಪುಣ್ಯಾತ್ಮ ಗುರು..ಎಂದ್ರು ನೆಟ್ಟಿಗರು

ಆಂಧ್ರಪ್ರದೇಶ:  ಇಬ್ಬರು ಹೆಂಡತಿಯರು ಸೇರಿ ತನ್ನ ಗಂಡನಿಗೆ ಮೂರನೇ ಮದುವೆಯನ್ನು ಭರ್ಜರಿಯಾಗಿ ಮಾಡಿಸಿದ್ದಾರೆ.  ಈ ಘಟನೆ ಆಂಧ್ರಪ್ರದೇಶದ ಅಲ್ಲೂರಿ ಜಿಲ್ಲೆಯ ಪೆದ್ದಬಯಲು ಗ್ರಾಮದಲ್ಲಿ ನಡೆದಿದೆ.

ಪಂಡನ್ನಾ ಎಂಬ ವ್ಯಕ್ತಿಯು 3ನೇ ಮದುವೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಸದ್ಯ ಪಂಡನ್ನಾ ಮೊದಲ ಮದುವೆ ಮಾಡಿಕೊಂಡಿದ್ದು, ಮಕ್ಕಳಾಗದ ಹಿನ್ನಲೆಯಲ್ಲಿ 2007 ರಲ್ಲಿ ಎರಡನೇ ಮದುವೆ ಮಾಡಿಕೊಂಡಿದ್ದ. ಸದ್ಯ ಎರಡನೇ ಹೆಂಡತಿಗೆ ಒಬ್ಬ ಗಂಡು ಮಗು ಸಹಾ ಇದ್ದಾನೆ. ಆದರೆ ನನಗೆ ಇನ್ನೊಂದು ಮಗು ಬೇಕು ಎಂದು ಪತ್ನಿಯರನ್ನು ಕೇಳಿದ್ದಾಗ ಇಬ್ಬರು ಪತ್ನಿಯರು ಮೂರನೇ ಮದುವೆಯನ್ನು ಮಾಡಿಸಿದ್ದಾರೆ.

ಪಂಡನ್ನಾ ಪತ್ನಿಯರಾದ ಪಾರ್ವತಮ್ಮ ಮತ್ತು ಅಪ್ಪಲಮ್ಮ ಮೂರನೇ ಮದುವೆಗೆ ಭರ್ಜರಿ ತಯಾರಿಯನ್ನು ನಡೆಸಿ ಪೆದ್ದಬಯಲು ಗ್ರಾಮದಲ್ಲಿ ಬ್ಯಾನರ್‌ಗಳನ್ನು ಹಾಕಿಸಿ, ಮದುವೆ ಸಂಭ್ರಮವನ್ನು ಎಲ್ಲೆಡೆ ಹಬ್ಬಿಸಿದ್ದಾರೆ.  ಈ ಮದುವೆ ಕಾರ್ಯವು ಇದೇ ತಿಂಗಳ 25 ರಂದು ವಿಜೃಂಭಣೆಯಿಂದ ನೆರವೇರಿತು. ಈ ಮದುವೆಯ ಮೂಲಕ, ಪಂಡನ್ನಾ, ಪಾರ್ವತಮ್ಮ, ಅಪ್ಪಲಮ್ಮ ಮತ್ತು ಲಕ್ಷ್ಮಿ ಅವರ ಸಂಸಾರವು ಮತ್ತಷ್ಟು ಸಂತೋಷದಿಂದ ಮತ್ತು ಸಮರ್ಪಣೆಯಿಂದ ಸಾಗಲು ಆರಂಭವಾಗಿದೆ.

ಗಂಡನಿಗೆ ಮೂರನೇ ಮದುವೆಯನ್ನು ಮಾಡಿಸಿದ ಘಟನೆಯ ಪರಿ ಇದೀಗ ಎಲ್ಲರ ಗಮನ ಸೆಳೆದಿದೆ. ಸದ್ಯ ಇದೇ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದ್ದು, ನೀನು ಪುಣ್ಯಾತ್ಮ ಗುರು..ಎಂದ್ರು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ.