ಬೆಂಗಳೂರು: ಅನ್ಲಾಕ್-4ರ ಹಂತದಲ್ಲಿ ಮೆಟ್ರೋ, ಸಾರ್ವಜನಿಕ ಉದ್ಯಾನವನಗಳನ್ನು ಮತ್ತೆ ತೆರೆಯಲಾದ ಬೆನ್ನಲ್ಲೇ ಇದೀಗ ಸಾರ್ವಜನಿಕ ಗ್ರಂಥಾಲಯಗಳನ್ನೂ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಕಂಟೇನ್ಮೆಂಟ್ ವಲಯಗಳನ್ನು ಹೊರತುಪಡಿಸಿ, ಉಳಿದ ಕಡೆ ಇರುವ ಲೈಬ್ರರಿಗಳನ್ನು ತೆರೆಯಬಹದು.ಕೊವಿಡ್-19 ಸೋಂಕು ನಿಯಂತ್ರಣಾ ಕ್ರಮಗಳನ್ನು ಪಾಲಿಸಬೇಕು. ಗ್ರಂಥಾಲಯ ಪ್ರವೇಶಿಸುವವರನ್ನು ಥರ್ಮಲ್ ಟೆಸ್ಟ್ಗೆ ಒಳಪಡಿಸಬೇಕು ಎಂದು ಸರ್ಕಾರದ ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಕೋವಿಡ್ 19 ರೋಗಿಗಳಿಗೆ ಆ್ಯಂಬುಲೆನ್ಸ್ ಶುಲ್ಕ ನಿಗದಿ ಮಾಡಿ- ರಾಜ್ಯಗಳಿಗೆ ಸುಪ್ರೀಂ ನಿರ್ದೇಶನ
ಕರೊನಾ ನಿಮಿತ್ತ ಮಾರ್ಚ್ನಿಂದಲೂ ಲೈಬ್ರರಿಗಳು ಬಾಗಿಲು ಮುಚ್ಚಿವೆ. ಕೇಂದ್ರ ಸರ್ಕಾರದ ಗೃಹ ಮಂತ್ರಾಲಯ ಕಂಟೇನ್ಮೆಂಟ್ ವಲಯಗಳನ್ನು ಹೊರತುಪಡಿಸಿದ ಸ್ಥಳಗಳಲ್ಲಿ ಹೆಚ್ಚಿನ ಕಾರ್ಯಚಟುವಟಿಕೆಗಳನ್ನು ಪುನರಾರಂಭಿಸಲು ಅನುಮತಿ ನೀಡಿದ್ದು, ಅದರ ಅನ್ವಯ ರಾಜ್ಯ ಸರ್ಕಾರ ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಅನುವು ಮಾಡಿಕೊಡುತ್ತಿದೆ. (ಏಜೆನ್ಸೀಸ್)