ನ್ಯೂಸ್

ಪರ್ಫ್ಯೂಮ್ ಆಯಿಲ್ VS ಪರ್ಫ್ಯೂಮ್ ಸ್ಪ್ರೇ: ಈ ಎರಡರಲ್ಲಿ ನಿಮ್ಮ ತ್ವಚೆಗೆ ಯಾವುದು ಉತ್ತಮ? Beauty Tips

Beauty Tips | ನಮಗೆಲ್ಲರಿಗೂ ತಿಳಿದಂತೆ ಯುವಕರಿಂದ ಹಿಡಿದು ವಯಸ್ಸಾದವರು ಕೂಡ ಪರ್ಫ್ಯೂಮ್ ಬಳಸದೆ ಹೊರಗಡೆ ಹೋಗುವುದೇ ಕಡಿಮೆ. ಯಾವುದೇ ಮದುವೆ, ಫಂಕ್ಷನ್​​​ಗಳಿಗೆ ಹೋಗುವಾಗ ಪರ್ಫ್ಯೂಮ್ ಇರಲೇ ಬೇಕು. ಪರ್ಫ್ಯೂಮ್ ಬಳಸುವವರು ಮಾತ್ರ ಈ ಸಮಾಜದಲ್ಲಿ ಶ್ರೀಮಂತರು ಎನ್ನುವ ನಂಬಿಕೆಯೂ ಕೂಡ ಕೆಲ ಜನರಲ್ಲಿದೆ. ಹಾಗಾದರೆ ತ್ವಚೆಗೆ ಪರ್ಫ್ಯೂಮ್ ಆಯಿಲ್ ಮತ್ತು ಪರ್ಫ್ಯೂಮ್ ಸ್ಪ್ರೇಗಳಲ್ಲಿ ಯಾವುದು ಉತ್ತಮ? ಈ ಕುರಿತು ಉಪಯುಕ್ತ ಮಾಹಿತಿ ಇಲ್ಲಿದೆ.

ಪರ್ಫ್ಯೂಮ್ ಆಯಿಲ್: ನಾವು ಬಳಸುವ ಪರ್ಫ್ಯೂಮ್ ಆಯಿಲ್ ದೀರ್ಘಕಾಲ ಉಳಿಯುವುದಿಲ್ಲ. ಆಲ್ಕೋಹಾಲ್ ಮಿಶ್ರಿತವಾದ ಸುಗಂಧ ದ್ರವ್ಯಗಳನ್ನು ಬಳಸಿದಾಗ ಅವು ಗಾಳಿಯಲ್ಲಿ ಸ್ಪ್ರೇ ಆಗುತ್ತವೆ. ಆಲ್ಕೋಹಾಲ್​​ ಪ್ರಮಾಣ ಕಡಿಮೆಯಾದಾಗ ನಿಮ್ಮ ಚರ್ಮ, ಕೂದಲು, ಬಟ್ಟೆಯನ್ನು ಸ್ಪರ್ಶಿಸಿ ಪರಿಮಳ ಸೂಸುತ್ತದೆ.

ನಿಮ್ಮ ಚರ್ಮವು ಸೂಕ್ಷ್ಮತೆಯಂತಹ ಸಮಸ್ಯೆಗಳನ್ನು ಹೊಂದಿದ್ದರೆ, ನೀವು ಪರ್ಫ್ಯೂಮ್ ಆಯಿಲ್ ಬಳಸುವುದು ಉತ್ತಮ. ಅದು ನಿಮ್ಮ ಚರ್ಮದ ಮೇಲೆ ಕೆಂಪು ಕಲೆಗಳು ಮತ್ತು ತುರಿಕೆ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ಸಾಮಾನ್ಯವಾಗಿ, ಸುಗಂಧ ತೈಲಗಳನ್ನು ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಇವು ಯಾವುದೇ ಕಲೆಗಳಿಲ್ಲದೆ ಚರ್ಮ ಮತ್ತು ಬಟ್ಟೆಗಳಿಗೆ ಇಳಿದು ತೊಳೆದ ನಂತರವೂ ಪರಿಮಳವನ್ನು ಬೀರುತ್ತದೆ. ಹೀಗಾಗಿ ಪರ್ಫ್ಯೂಮ್ ಸ್ಪ್ರೇಗಿಂತ ಪರ್ಫ್ಯೂಮ್ ಆಯಿಲ್​​​ ಉತ್ತಮವಾಗಿದೆ.

ಪರ್ಫ್ಯೂಮ್ ಸ್ಪ್ರೇ: ಜನರು ಹೆಚ್ಚಾಗಿ ಪರ್ಫ್ಯೂಮ್ ಸ್ಪ್ರೇಗಳನ್ನೇ ಬಳಸುತ್ತಾರೆ. ಆದರೆ, ಈ ಪರ್ಫ್ಯೂಮ್ ಸ್ಪ್ರೇಗಳು ನಿಧಾನವಾಗಿ ಗಾಳಿಯಲ್ಲಿ ಹರಡುತ್ತವೆ. ನಿಮ್ಮ ಸುತ್ತಮುತ್ತಲಿನ ಜನರಿಗೆ ನೀವು ಹಚ್ಚಿದ ಸ್ಪ್ರೇ ಪರಿಮಳವನ್ನು ಸೂಸುತ್ತದೆ. ಆದರೆ, ಇವುಗಳು ನಾವು ಸ್ಪ್ರೇ ಮಾಡಿದ ಸ್ಥಳಗಳಲ್ಲಿ ಮಾತ್ರ ಸುವಾಸನೆಯನ್ನು ಬೀರುತ್ತದೆ. ಕ್ರಮೇಣ ಅದರ ಪರಿಮಳವೂ ಕೂಡ ಕಡಿಮೆಯಾಗುತ್ತದೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.