ನ್ಯೂಸ್

ರಸ್ತೆಯ ತಗ್ಗು-ಗುಂಡಿಗಳನ್ನು ಮುಚ್ಚಿಸಲು ಜನರ ಆಗ್ರಹ

Haveri - Kariyappa Aralikatti

ರಾಣೆಬೆನ್ನೂರ: ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ಬಿದ್ದಿರುವ ತಗ್ಗು&ಗುಂಡಿಗಳನ್ನು ಕೂಡಲೇ ಮುಚ್ಚಿಸಬೇಕು. ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರ ನೇತೃತ್ವದಲ್ಲಿ ಸಾರ್ವಜನಿಕರು ಸೋಮವಾರ ನಗರಸಭೆ ಅಧ್ಯೆ ಚಂಪಕ್ಕ ಬಿಸಲಹಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ನಗರದ ಸಂಗಮ ಸರ್ಕಲ್​, ಪೋಸ್ಟ್​ ಆಫೀಸ್​ ಹಿಂಭಾಗ, ಅಶೋಕ ಸರ್ಕಲ್​, ದುರ್ಗಾ ವೃತ್ತ, ಶಿವಾ ಕಾಲೇಜ್​ ಹಿಂಭಾಗದ ಮಂಡಕ್ಕಿ ಭಟ್ಟೆ ಹತ್ತಿರ, ಚಿದಂಬರ ನಗರ ಸೇರಿ ಸುತ್ತಲಿನ ಪ್ರದೇಶದಲ್ಲಿ ಮಳೆಯಿಂದಾಗಿ ಬೃಹತ್​ ಗುಂಡಿಗಳು ಬಿದ್ದಿವೆ. ಬೈಕ್​ ಸವಾರರು, ಆಟೋರಿಾ ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆ ಬಂದಾಗ ರಸ್ತೆಗಳು ಕೆಸರು ಗದ್ದೆಗಳಾಗುತ್ತಿದ್ದು ಬೈಕ್​ ಸವಾರರು ಬಿದ್ದು ಆಸ್ಪತ್ರೆ ಸೇರುವ ದುಸ್ಥಿತಿ ಎದುರಾಗಿದೆ. ಮಳೆ ಇಲ್ಲವಾದರೆ ಧೂಳು ಎದ್ದು ಜನರು ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿಯಿದೆ. ಆದ್ದರಿಂದ ಕೂಡಲೇ ರಸ್ತೆಗಳನ್ನು ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಹನುಮಂತಪ್ಪ ಕಬ್ಬಾರ, ರಾಜೇಶ ಅಂಗಡಿ, ಮಂಜುನಾಥ ಸಂಭೊಜಿ, ಹನುಮಂತಪ್ಪ ಅಂಗಡಿ, ಮೋಹನ ಇಂಗೋಳಿ, ಬಾನಾಬಾಯಿ ಡೌರಿ, ಕಾವೇರಮ್ಮ ಹೂಗಾರ, ಯಮನಮ್ಮ ಮಾಳಿ ಮತ್ತಿತರರು ಉಪಸ್ಥಿತರಿದ್ದರು.