ಹೊನ್ನಾಳಿ: ಕರೊನಾ ಸೋಂಕು ತಡೆಗೆ ಸ್ಯಾನಿಟೈಸರ್ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಗ್ರಾಮೀಣ ಭಾಗದಲ್ಲಿ ಔಷಧ ಅಂಗಡಿಗಳೂ ಇರುವುದಿಲ್ಲ. ಹೀಗಾಗಿ ಜನ ಪ್ರಾಕೃತಿಕವಾಗಿ ಸಿಗುವ ಗೋಮೂತ್ರದ ಮೊರೆ ಹೋಗಿದ್ದಾರೆ.
ಮನೆಯ ಹಸುವಿನ ಗಂಜಲವನ್ನೇ ಬಿಂದಿಗೆ, ಬಕೆಟ್ಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಮನೆಯಿಂದ ಹೊರಗೆ ಹೋಗಿ ಬಂದ ನಂತರ ಗಂಜಲದಿಂದ ಕೈ ಶುದ್ಧಿ ಮಾಡಿಕೊಳ್ಳುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಮನೆಯಲ್ಲಿ ಸೂಕ್ಷ್ಮಾಣು, ಕ್ರಿಮಿಕೀಟಗಳ ನಾಶಕ್ಕೆ ಗಂಜಲ, ಸಗಣಿ ಮಿಶ್ರಣ ಮಾಡಿ ನೆಲ ಸಾರಿಸುತ್ತಿದ್ದರು. ಮನೆ ಮುಂದಿನ ಅಂಗಳ ಹಾಗೂ ಗೋಡೆಗಳಿಗೂ ಸಗಣಿ, ಗಂಜಲ ಬಳಸುತ್ತಿದ್ದರು. ಇದು ವೈರಾಣುಗಳ ವಿರುದ್ಧ ಕೆಲಸ ಮಾಡುತ್ತದೆಂಬ ನಂಬಿಕೆ ಹಿರಿಯರಲ್ಲಿತ್ತು. ಈಗ ಹಳೆಯ ಪದ್ಧತಿ ಪುನರಾವರ್ತನೆಯಾಗುತ್ತಿದೆ ಎಂದು ರೈತರು ಹೇಳುತ್ತಾರೆ.