ನ್ಯೂಸ್

ದಾರಿ ಮಧ್ಯ ನೋಟು ನೋಡಿದ ಸ್ಥಳೀಯರಿಗೆ ಭಯ..ಅದರ ಮೇಲೆ ಮತ್ತೊಂದು ವಸ್ತು ಇದ್ದಿದ್ದರಿಂದ ಉದ್ದೇಶಪೂರ್ವಕವಾಗಿಯೇ ಇಟ್ಟಿದ್ದಾರೆಂಬ ಶಂಕೆ

ಕೊಪ್ಪಳ: ಕರೊನಾ ಆತಂಕ ಶುರುವಾದಾಗಿನಿಂದ ಕೆಲವು ವಿಚಿತ್ರಗಳೂ ನಡೆಯುತ್ತಿವೆ. ರಸ್ತೆ ಮೇಲೆ ನೋಟುಗಳು ಕಂಡುಬರುವ ಪ್ರಮಾಣವೂ ಹೆಚ್ಚಾಗಿದೆ. ಮೊದಲೆಲ್ಲ ರಸ್ತೆ ಮೇಲೆ ಬಿದ್ದಿರುವ 10 ರೂಪಾಯಿಯನ್ನೂ ಹಿಂದೆ ಮುಂದೆ ನೋಡದೆ ಸಿಕ್ಕವರು ಎತ್ತಿಕೊಳ್ಳುತ್ತಿದ್ದರು. ಆದರೆ ಈಗ ಹಾಗಲ್ಲ...500 ರೂ.ಬಿದ್ದದ್ದರೂ ಅದನ್ನು ಮುಟ್ಟಲೂ ಹೋಗುತ್ತಿಲ್ಲ.

ನಗರದ ಕಲ್ಯಾಣನಗರ 1ನೇ ಕ್ರಾಸ್​​ನಲ್ಲಿ 500 ರೂ.ಬೆಲೆಯ ನೋಟು ಪತ್ತೆಯಾಗಿದ್ದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆ ನೋಟಿನ ಮೇಲೆ ಕಲ್ಲನ್ನೂ ಇಡಲಾಗಿತ್ತು. ಹಾಗಾಗಿ ಯಾರೋ ಉದ್ದೇಶಪೂರ್ವಕವಾಗಿಯೇ ಅದನ್ನಲ್ಲಿಟ್ಟಿದ್ದಾರೆ ಎಂದು ಭಾವಿಸಿದ ಜನರು ಕೂಡಲೇ ಪೊಲೀಸರಿಗೆ ಫೋನ್ ಮಾಡಿದ್ದಾರೆ.

ಇನ್ನು ಪೊಲೀಸರು ಕೂಡ ಹ್ಯಾಂಡ್​ ಗ್ಲೌಸ್​ ಹಾಕಿಕೊಂಡು, ಅದಕ್ಕೆ ಸ್ಯಾನಿಟೈಸರ್​ ಬಳಸಿ ನೋಟನ್ನು ವಶಕ್ಕೆ ಪಡೆದಿದ್ದಾರೆ. (ದಿಗ್ವಿಜಯ ನ್ಯೂಸ್​)