ನ್ಯೂಸ್

ಮೋದಿ ಭಾವಚಿತ್ರ ಇರುವ ಕಟೌಟ್, ಟೀ-ಶರ್ಟ್‌ ಪಡೆದುಕೊಳ್ಳಲು ಜನರಿಂದ ತಳ್ಳಾಟ!

ಧಾರವಾಡ: ರಾಜ್ಯದ ಮೊದಲ ಐಐಟಿ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಜತೆಗೆ ಏಷ್ಯಾದ ಅತೀ ಉದ್ದದ ರೈಲ್ವೇ ಫ್ಲಾಟ್ ಫಾರಂ ಲೋಕಾರ್ಪಣೆ ಮಾಡಲಿದ್ದು, ಬಳಿಕ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ. ಹೀಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಈಗಾಗಲೇ ಜನ ಸೇರಿದ್ದು, ಪ್ರಧಾನಿ ಆಗಮನಕ್ಕೆ ಕಾತರದಿಂದ ಕಾಯುತ್ತಿದ್ದಾರೆ.

ಈ ನಡುವೆ ಕಾರ್ಯಕ್ರಮಕ್ಕೆ ಆಗಮಿಸಿರುವ ಜನರಿಗೆ ಟೀ-ಶರ್ಟ್ ಹಾಗೂ ಮೋದಿ, ಬೊಮ್ಮಾಯಿ ಭಾವಚಿತ್ರ ಇರುವ ಕಟೌಟ್ ನೀಡಲಾಗಿದೆ. ಉಚಿತವಾಗಿ ವಿತರಣೆಯಾಗುತ್ತಿರುವ ಟೀಶ-ರ್ಟ್ ಪಡೆದುಕೊಳ್ಳಲು ಜನರು ಮುಗಿಬಿದ್ದಿರುವ ಘಟನೆ ನಡೆದಿದೆ. ಧಾರವಾಡ ಐಐಟಿ ಕ್ಯಾಂಪಸ್​ನ ಹೊರಭಾಗದಲ್ಲಿ ಜನರು ಮುಗಿಬಿದ್ದಿದ್ದಾರೆ. ಟೀ-ಶರ್ಟ್ ಪಡೆದುಕೊಳ್ಳಲು ಜನರು ಹಂಚಿಕೆ ಮಾಡುತ್ತಿದ್ದ ಲಾರಿಗೆ ಮುತ್ತಿಗೆ ಹಾಕಿದ್ದಾರೆ.