ನ್ಯೂಸ್

ಈ 3 ರಾಶಿಯವರು ತಮಗೆ ದ್ರೋಹ ಮಾಡಿದವರನ್ನು ಎಂದಿಗೂ ಕ್ಷಮಿಸುವುದಿಲ್ಲ! ನಿಮ್ಮ ರಾಶಿ ಯಾವುದು? Zodiac Signs

Zodiac Signs : ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಕೆಲವರು ಜೋತಿಷ್ಯದ ಮೊರೆ ಹೋಗುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಚಲನೆಯು ಎಲ್ಲ 12 ರಾಶಿಚಕ್ರದ ಚಿಹ್ನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.

ಮನುಷ್ಯನ ಒಳಿತು-ಕೆಡುಕು, ನಡೆ-ನುಡಿ ಎಲ್ಲದರ ಮೇಲೂ ಗ್ರಹಗಳು ಪ್ರಭಾವ ಬೀರುತ್ತವೆ. ಒಬ್ಬ ವ್ಯಕ್ತಿಯ ಭವಿಷ್ಯದ ಜೀವನ ಹೇಗಿರುತ್ತದೆ? ಆತನ ವಿಶಿಷ್ಟ ಗುಣಗಳು ಏನೆಂಬುದನ್ನು ಗ್ರಹಗತಿಗಳ ಆಧಾರದ ಮೇಲೆ ಸುಲಭ ಊಹಿಸಬಹುದಾಗಿದೆ. ಅದಕ್ಕೆ ಅಲ್ಲವೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ.

ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಕೆಲ ಜನರು ಮಾತ್ರ ಹಿಂದಿನ ನೋವುಗಳನ್ನು ಅಷ್ಟು ಸುಲಭವಾಗಿ ಮರೆಯುವುದಿಲ್ಲ. ಆ ನೋವುಗಳು ಅವರನ್ನು ಕಾಡುತ್ತಲೇ ಇರುತ್ತವೆ. ವಿಶೇಷವಾಗಿ ಯಾರಾದರೂ ಅವರಿಗೆ ದ್ರೋಹ ಮಾಡಿದರೆ, ಅವರು ಯಾವುದೇ ಕಾರಣಕ್ಕೂ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಒಂದು ವೇಳೆ ನೋವನ್ನು ಮರೆತು ತಮ್ಮ ಕೆಲಸದ ಕಡೆ ಗಮನ ಹರಿಸಿದರೂ ಸಹ ನೋವು ಕೊಟ್ಟ ವ್ಯಕ್ತಿಯನ್ನು ನೋಡಿದಾಗ ಮತ್ತೆ ಎಲ್ಲವನ್ನು ನೆನಪಿಸಿಕೊಳ್ಳುತ್ತಾರೆ.

ಈ ಗುಣವು ಈ ರಾಶಿಯವರಿಗೆ ಆಶೀರ್ವಾದ ಮತ್ತು ಶಾಪ ಎರಡೂ ಆಗಿರಬಹುದು, ಏಕೆಂದರೆ ಇದು ಅವರ ಬಲವಾದ ಸ್ಮರಣೆಯ ಕಾರಣದಿಂದಾಗಿರಬಹುದು. ಆ ರೀತಿಯಲ್ಲಿ, ತಮ್ಮ ದ್ರೋಹಿಗಳನ್ನು ಕ್ಷಮಿಸದ ಜನರು ಯಾವ ರಾಶಿಯಲ್ಲಿ ಜನಿಸುತ್ತಾರೆ ಎಂಬುದನ್ನು ನಾವೀಗ ತಿಳಿಯೋಣ.

ವೃಷಭ ರಾಶಿ

ವೃಷಭ ರಾಶಿಯಲ್ಲಿ ಜನಿಸಿದ ಜನರು ಹಠಮಾರಿ ಮತ್ತು ದೃಢನಿಶ್ಚಯ ಹೊಂದಿರುತ್ತಾರೆ. ಯಾರಾದರೂ ಅವರಿಗೆ ದ್ರೋಹ ಮಾಡಿದರೆ, ಅವರು, ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಅವರು ದೀರ್ಘಕಾಲದವರೆಗೆ ದ್ವೇಷವನ್ನು ಇಟ್ಟುಕೊಳ್ಳುತ್ತಾರೆ. ಅದೇ ರೀತಿ ನಿಷ್ಠೆ ಮತ್ತು ನಂಬಿಕೆ ಇದ್ದರೆ, ಅವರನ್ನು ಗೌರವಿಸುತ್ತಾರೆ. ಒಮ್ಮೆ ತಮ್ಮ ನಂಬಿಕೆಯನ್ನು ಮುರಿಯುವ ರೀತಿಯಲ್ಲಿ ವರ್ತಿಸಿದರೆ, ಅವರು ಅದನ್ನು ತಮ್ಮ ಜೀವನದ ಕೊನೆಯವರೆಗೂ ನೆನಪಿಸಿಕೊಳ್ಳುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿಯಲ್ಲಿ ಜನಿಸಿದ ಜನರು ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ಕೂಡಿರುತ್ತಾರೆ. ಅವರು ದ್ರೋಹ ಅಥವಾ ನೋವನ್ನು ಸಹಿಸುವುದಿಲ್ಲ. ಅವರಲ್ಲಿವ ಈಗೋ ಕ್ಷಮಿಸಲು ಮತ್ತು ಮರೆಯಲು ಕಷ್ಟವಾಗಿಸುತ್ತದೆ. ಹೀಗಾಗಿ ಅವರ ದ್ವೇಷಗಳು ದೀರ್ಘಕಾಲ ಉಳಿಯುತ್ತವೆ. ಆದ್ದರಿಂದ, ಅವರ ವಿಶ್ವಾಸವನ್ನು ಗಳಿಸುವುದು ಸುಲಭದ ಕೆಲಸವಲ್ಲ.

ಮಕರ ರಾಶಿ

ಮಕರ ರಾಶಿಯಲ್ಲಿ ಜನಿಸಿದ ಜನರು ಮಹತ್ವಾಕಾಂಕ್ಷೆಯುಳ್ಳವರು ಮತ್ತು ಪ್ರಾಯೋಗಿಕರು. ಅವರು ನಿಷ್ಠಾವಂತ ಮತ್ತು ವಿಶ್ವಾಸಾರ್ಹ ಜನರನ್ನು ಗೌರವಿಸುತ್ತಾರೆ. ಯಾರಾದರೂ ತಮಗೆ ದ್ರೋಹ ಮಾಡಿದರೆ ಅವರು ತುಂಬಾ ಕೋಪಗೊಳ್ಳುತ್ತಾರೆ. ಅವರು ದೀರ್ಘಕಾಲದವರೆಗೆ ದ್ವೇಷ ಸಾಧಿಸುತ್ತಾರೆ. ಈ ರಾಶಿಚಕ್ರ ಚಿಹ್ನೆಗಳ ಬಲವಾದ ಜವಾಬ್ದಾರಿ ಮತ್ತು ಕರ್ತವ್ಯ ಪ್ರಜ್ಞೆಯು ಅವರನ್ನು ಕ್ಷಮಿಸಲು ಅಥವಾ ಮರೆಯಲು ಅನುಮತಿಸುವುದಿಲ್ಲ. ಇದಲ್ಲದೆ, ಅವರ ದ್ವೇಷಗಳು ತೀವ್ರ ಮತ್ತು ದೀರ್ಘಕಾಲೀನವಾಗಿರುತ್ತವೆ. ಇದು ಅವರ ವಿಶ್ವಾಸವನ್ನು ಗಳಿಸುವುದು ತುಂಬಾ ಕಷ್ಟಕರವಾಗಿಸುತ್ತದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.