Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವೂ ಒಂದು. ಸಂಖ್ಯೆಗಳು ನಮ್ಮ ಜೀವನದ ಎಲ್ಲ ವಿಷಯಗಳೊಂದಿಗೆ ಆಳವಾದ ಸಂಬಂಧವನ್ನು ಹೊಂದಿವೆ. ಅಲ್ಲದೆ, ಈ ಸಂಖ್ಯೆಗಳು ನೈಸರ್ಗಿಕವಾಗಿ ವಿಶ್ವದಲ್ಲಿ ವಿಶಿಷ್ಟ ಶಕ್ತಿಯನ್ನು ಹೊಂದಿದ್ದು, ಯಾರನ್ನಾದರೂ ಮೇಲಕ್ಕೇರಿಸಬಹುದು ಮತ್ತು ಕೆಳಗಿಳಿಸಬಹುದು. ಸಂಖ್ಯಾಶಾಸ್ತ್ರವು ವ್ಯಕ್ತಿಯ ಹೆಸರು, ಆತನ ಹುಟ್ಟಿದ ದಿನಾಂಕ, ತಿಂಗಳು, ವರ್ಷದ ಆಧಾರದ ಮೇಲೆ ಅವರ ಭವಿಷ್ಯದ ಜೀವನ ಹೇಗಿರುತ್ತದೆ ಎಂದು ಊಹಿಸುವ ವಿಜ್ಞಾನವಾಗಿದೆ.
ಅಂದಹಾಗೆ ಸಂಖ್ಯಾಶಾಸ್ತ್ರವನ್ನು ರಾಡಿಕ್ಸ್ ಸಂಖ್ಯೆಗಳ ಆಧಾರದ ಮೇಲೆ ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವನ್ನು ರಾಡಿಕ್ಸ್ ಸಂಖ್ಯೆ ಅಥವಾ ಮೂಲಾಂಕ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಒಬ್ಬ 24ನೇ ತಾರೀಖಿನಂದು ಜನಿಸಿದರೆ ಆತನ ರಾಡಿಕ್ಸ್ ಸಂಖ್ಯೆ 2+4= 6 ಆಗಿರುತ್ತದೆ.
ರಾಶಿಗಳಂತೆ ರಾಡಿಕ್ಸ್ ಸಂಖ್ಯೆಗಳು ಕೂಡ ಗ್ರಹಗಳೊಂದಿಗೆ ಸಂಬಂಧ ಹೊಂದಿವೆ. ಸಂಖ್ಯಾಶಾಸ್ತ್ರದಲ್ಲಿ 01 ರಿಂದ 09ರವರೆಗಿನ ಸಂಖ್ಯೆಗಳನ್ನು ರಾಡಿಕ್ಸ್ ಸಂಖ್ಯೆಗಳು ಎಂದು ಹೇಳಲಾಗುತ್ತದೆ. ಈ ಒಂಬತ್ತು ರಾಡಿಕ್ಸ್ ಸಂಖ್ಯೆಗಳು ಕೂಡ ನವಗ್ರಹಗಳಲ್ಲಿ ಒಂದೊಂದು ಗ್ರಹಗಳಿಗೆ ಸೀಮಿತವಾಗಿವೆ.
ಕೆಲವು ದಿನಾಂಕಗಳಲ್ಲಿ ಜನಿಸಿದ ಜನರು ಜೀವನದಲ್ಲಿ ಏನಾದರೂ ಸಾಧಿಸಲೆಂದೇ ಹುಟ್ಟುತ್ತಾರೆ. ಅಂತಹ ಅದೃಷ್ಟದ ದಿನಾಂಕಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಸಂಖ್ಯೆ 7 ರಂದು ಜನಿಸಿದವರು ಮಹತ್ವಾಕಾಂಕ್ಷೆ ಉಳ್ಳವರು. ಅವರು ತಮ್ಮ ಮನಸ್ಸು ಹೇಳುವುದನ್ನು ಮಾತ್ರ ಕೇಳುತ್ತಾರೆ. ಇವರು ಅದೃಷ್ಟವಂತರಾಗಿ ಜನಿಸುತ್ತಾರೆ ಮತ್ತು ಯಾವಾಗಲೂ ಮುಕ್ತವಾಗಿ ಹಾಗೂ ಸಂತೋಷವಾಗಿರಲು ನಿರ್ಧರಿಸುತ್ತಾರೆ. ಇವರೆಂದಿಗೂ ಇತರರ ಮುಂದೆ ತಲೆಬಾಗುವುದಿಲ್ಲ. ಇವರಲ್ಲಿ ಸ್ವಲ್ಪ ಹೆಚ್ಚು ನಾಯಕತ್ವದ ಗುಣ ಇರುತ್ತದೆ. ಸೃಜನಶೀಲತೆ ಮತ್ತು ಕಲ್ಪನೆಯಂತ ವಿಶಿಷ್ಟ ಗುಣಗಳೊಂದಿಗೆ ಖಂಡಿತವಾಗಿಯೂ ಜೀವನದಲ್ಲಿ ದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ.
ಯಾವುದೇ ತಿಂಗಳ 16 (1+6=7) ನೇ ತಾರೀಖಿನಂದು ಜನಿಸಿದವರು ಸ್ವಾಭಾವಿಕವಾಗಿ ಶಾಂತವಾಗಿರುತ್ತಾರೆ. ಇವರು ಅತ್ಯುತ್ತಮ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಇವರು ಕಲಿಕೆಯಲ್ಲಿ ಬಲವಾದ ಆಸಕ್ತಿಯನ್ನು ಹೊಂದಿರುತ್ತಾರೆ. ಅಲ್ಲದೆ, ತಮ್ಮ ಗಮನಕ್ಕೆ ಬರುವ ಎಲ್ಲವನ್ನೂ ಅನ್ವೇಷಿಸುವ ಬಯಕೆಯನ್ನು ಹೊಂದಿರುತ್ತಾರೆ. ಈ ದಿನಾಂಕದಲ್ಲಿ ಜನಿಸಿದವರು ಖಂಡಿತವಾಗಿಯೂ ತಮ್ಮ ಸಂಶೋಧನೆ, ಸೃಜನಶೀಲ ಕೆಲಸ ಅಥವಾ ಕಲಾತ್ಮಕ ಆಸಕ್ತಿಯಿಂದಾಗಿ ಜೀವನದಲ್ಲಿ ಏನನ್ನಾದರೂ ಸಾಧಿಸುತ್ತಾರೆ. ಜೀವನದಲ್ಲಿ ಖ್ಯಾತಿಯನ್ನು ಗಳಿಸುವ ಹೆಚ್ಚಿನ ಅವಕಾಶವನ್ನು ಈ ದಿನಾಂಕದಲ್ಲಿ ಜನಿಸಿದವರು ಹೊಂದಿರುತ್ತಾರೆ. ಅಲ್ಲದೆ, ತಮ್ಮ ಭಾವನೆಗಳನ್ನು ನಿಕಟ ಸ್ನೇಹಿತರು ಅಥವಾ ಸಂಬಂಧಿಕರೊಂದಿಗೆ ಮಾತ್ರ ಹಂಚಿಕೊಳ್ಳಲು ಬಯಸುತ್ತಾರೆ.
ಯಾವುದೇ ತಿಂಗಳ 25 (2+5= 7) ರಂದು ಜನಿಸಿದ ಜನರು ತಮ್ಮ ಆತ್ಮ ವಿಶ್ವಾಸ ಮತ್ತು ಮಾನಸಿಕ ಶಕ್ತಿಗೆ ಹೆಸರುವಾಸಿಯಾಗಿದ್ದಾರೆ. ಅವರು ಸ್ವಾಭಾವಿಕವಾಗಿ ಬುದ್ಧಿವಂತರು ಮತ್ತು ಹೊಸ ವಿಷಯಗಳನ್ನು ಕಲಿಯಲು ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಯಾವುದೇ ಪರಿಸರದಲ್ಲಿ ಸ್ವತಂತ್ರರಾಗಿರಲು ಶ್ರಮಿಸುತ್ತಾರೆ ಮತ್ತು ಜೀವನದಲ್ಲಿ ಅನೇಕ ಹೋರಾಟಗಳನ್ನು ಎದುರಿಸುತ್ತಿದ್ದರೂ, ಅವರು ಎಂದಿಗೂ ತಮ್ಮ ಗುರಿಯಿಂದ ಹಿಂದೆ ಸರಿಯುವುದಿಲ್ಲ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.