ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ 
ನ್ಯೂಸ್

ಪಿಂಚಣಿ ಕಡಿತ ನಿರ್ಧಾರ ಅಮಾನವೀಯ: ಸಿ.ಟಿ.ರವಿ | Decision be reconsider

ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ಇದ್ದಕ್ಕಿದ್ದಂತೆ ಅನರ್ಹರ ನೆನಪಾಗಿದೆ. ಅಂತಹವರ ಹೆಸರಿನಲ್ಲಿ ಮಾಸಾಶನ ರದ್ದುಪಡಿಸುವುದು ಅಮಾನವೀಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ಷೇಪಿಸಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಔಷಧಿ, ಮಾತ್ರೆ ಸೇರಿ ತುರ್ತು ಅಗತ್ಯಗಳಿಗೆ ಪಿಂಚಣಿ ಅವಲಂಬಿತ ಬಡವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಆದರೆ ಲಕ್ಷಾಂತರ ಲಾನುಭವಿಗಳ ಪಿಂಚಣಿಗೆ ರಾಜ್ಯ ಸರ್ಕಾರ ಕತ್ತರಿ ಹಾಕಲು ಹೊರಟಿದ್ದು, ದುರದೃಷ್ಟಕರವಾಗಿದೆ. ಮಾನವೀಯ ನೆಲೆಯಲ್ಲಿ ಈ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಮಾಹಿತಿಯಿಲ್ಲ

ದೇಶದೊಳಗೆ ಪಕ್ಷ ರಾಜಕಾರಣದ ಮಾತು ಬರುತ್ತದೆ. ಬೇರೆ ದೇಶಗಳಿಗೆ ಹೋದಾಗ ಭಾರತೀಯ ಪ್ರಜೆಗಳಾಗುತ್ತವೆ. ಭಾರತದ ಪ್ರಜೆಗಳ ಸುರಕ್ಷತೆ ಬಗ್ಗೆ ಕೇಂದ್ರ ಸರ್ಕಾರ ಕಾಳಜಿವಹಿಸಬೇಕಾಗಿದ್ದು, ಲಭ್ಯ ಮಾಹಿತಿ ಪ್ರಕಾರ ಕೆಲವು ಕ್ರಮಗಳನ್ನು ಕೈಗೊಳ್ಳುತ್ತದೆ.

ಸಚಿವ ಪ್ರಿಯಾಂಕ್ ಖರ್ಗೆಗೆ ಅಮೆರಿಕಕ್ಕೆ ತೆರಳಲು ಅನುಮತಿ ನಿರಾಕರಿಸಿದ್ದರೆ ಸಹಜವಾದ ಭದ್ರತಾ ಕಾರಣಗಳಿರಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲದೆ ವಿವರಿಸುವುದು ತಪ್ಪಾಗುತ್ತದೆ ಎಂದು ಸಿ.ಟಿ.ರವಿ ಹೇಳಿದರು.

ಅಗತ್ಯಬಿದ್ದಾಗ ಚರ್ಚೆ

ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಸಮನ್ವಯಕ್ಕೇನೂ ಸಮಸ್ಯೆಯಾಗಿಲ್ಲ. ಸಂದರ್ಭ, ಅಗತ್ಯಕ್ಕೆ ತಕ್ಕಂತೆ ಒಟ್ಟಾಗಿ ಹೋರಾಟ, ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೇವೆ. ಪಕ್ಷದ ಸಂಘಟನೆ ದೃಷ್ಟಿಯಿಂದ ಪ್ರತ್ಯೇಕವಾಗಿ ಕೆಲಸ ಮಾಡುತ್ತೇವೆ ಎಂದು ಸಮಜಾಯಿಷಿ ನೀಡಿದರು.

ಬಿಜೆಪಿ, ಜೆಡಿಎಸ್ ಸೇರಿ ಇನ್ನೂ ಪಕ್ಷಗಳು ಎನ್‌ಡಿಎನಲ್ಲಿವೆ. ಕಾಲ ಕಾಲಕ್ಕೆ ಎನ್‌ಡಿಎ ನಾಯಕರು ಸಭೆ ಸೇರಿ ಅಗತ್ಯ ಹಾಗೂ ಸಂದರ್ಭಕ್ಕೆ ಅನುಗುವಾದ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸಿ.ಟಿ.ರವಿ ಹೇಳಿದರು.