ಸುಂಟಿಕೊಪ್ಪ ಪಟ್ಟಣದ ಅಂಗಡಿ ಹೋಟೆಲ್‌ಗಳಿಗೆ ಸುಂಟಿಕೊಪ್ಪ ಪೊಲೀಸ್ ಅಧಿಕಾರಿಯೊಂದಿಗೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞ, ತಂಡ ಭೇಟಿ ನೀಡಿ ದಂಡ ವಿಧಿಸಿದರು. 
ನ್ಯೂಸ್

ಕೋಟ್ಪಾ ಉಲ್ಲಂಘಿಸಿದವರಿಗೆ ದಂಡ

ಶಿವಶಂಕರ್ ಎಂ. ಹೆಬ್ಬಳ್ಳ

ಸುಂಟಿಕೊಪ್ಪ: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಕೋಟ್ಪಾ ಕಾಯ್ದೆ ಉಲ್ಲಂಘನೆ ಮಾಡಿದ ಪಟ್ಟಣದ ಅಂಗಡಿ ಹೋಟೆಲುಗಳಿಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಅಧಿಕಾರಿಗಳ ತಂಡ 16 ಪ್ರಕರಣಗಳು ಪತ್ತೆ ಮಾಡಿ 1950 ರೂ. ದಂಡ ವಿಧಿಸಿದರು.

ಮುಂದಿನ ದಿನಗಳಲ್ಲಿ ಇಂತಹ ಪ್ರಕರಣ ಕಂಡು ಬಂದಲ್ಲಿ ಕಾನೂನು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುಂಟಿಕೊಪ್ಪ ಠಾಣೆಯ ಎಎಸ್‌ಐ ಸೈಮನ್ ಡಿ. ಕುನ್ಹಾ, ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞ, ಆರೋಗ್ಯ ನಿರೀಕ್ಷಾಧಿಕಾರಿ ಲೋಕೇಶ್, ಜಿಲ್ಲಾ ತಂಬಾಕು ಸಂಯೋಜಕರಾದ ಪುನಿತ್, ಜಿಲ್ಲಾ ತಂಬಾಕು ಕೋಶದ ಮಂಜುನಾಥ್, ಹಾಜರಿದ್ದರು.