ನ್ಯೂಸ್

ಜಾರಿ ನಿರ್ದೇಶನಾಲಯದ ಉಪನಿರ್ದೇಶಕರಾಗಿ ಪೆಮ್ಮಯ್ಯ ನೇಮಕ

ಸುನಿಲ್ ಪೊನ್ನೇಟಿ

ಮಡಿಕೇರಿ:

ಗೋಣಿಕೊಪ್ಪದ ಡಾ. ಕೊಟ್ಟಂಗಡ ಪೆಮ್ಮಯ್ಯ ಜಾರಿ ನಿರ್ದೇಶನಾಲಯದ ಉಪನಿರ್ದೇಶಕರಾಗಿ ನೇಮಕವಾಗಿದ್ದಾರೆ. ಇಲ್ಲಿನ ವಿಜುದೇವಯ್ಯ ಅವರ ಪುತ್ರ ಆಗಿರುವ ಪೆಮ್ಮಯ್ಯ ೨೦೧೫ರ ಬ್ಯಾಚ್ ಐಆರ್‌ಎಸ್ ಅಧಿಕಾರಿ ಆಗಿದ್ದಾರೆ. ಸೂರತ್‌ನಲ್ಲಿ ಆದಾಯ ತೆರಿಗೆ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಮುಂದಿನ ೩ ವರ್ಷಗಳ ಅವಧಿಗೆ ಜಾರಿ ನಿರ್ದೇಶನಾಲಯದಲ್ಲಿ ಕೆಲಸ ಮಾಡಲಿದ್ದಾರೆ. ಇವರೊಂದಿದೆ ಇನ್ನೂ ೧೬ ಮಂದಿಯನ್ನು ಜಾರಿ ನಿರ್ದೇಶನಾಲಯ ಉಪನಿರ್ದೇಶಕರಾಗಿ ಸರ್ಕಾರ ನೇಮಿಸಿದೆ.