ನ್ಯೂಯಾರ್ಕ್/ನವದೆಹಲಿ: ಪೆಗಾಸಸ್ ಸ್ಪೈವೇರ್ ಮತ್ತು ಮಿಸೈಲ್ ಸಿಸ್ಟಮ್ಳನ್ನು ಇಸ್ರೇಲ್ನಿಂದ 200 ಕೋಟಿ ಡಾಲರ್ ಮೌಲ್ಯದ 2017ರ ಡಿಫೆನ್ಸ್ ಡೀಲ್ ಮೂಲಕ ಭಾರತ ಪಡೆದುಕೊಂಡಿದೆ ಎಂದು ದ ನ್ಯೂಯಾರ್ಕ್ ಟೈಮ್್ಸ ವರದಿ ಮಾಡಿದೆ. ‘ದ ಬ್ಯಾಟಲ್ ಫಾರ್ ದ ವರ್ಲ್ಡ್’ಸ್ ಮೋಸ್ಟ್ ಪವರ್ಫುಲ್ ಸೈಬರ್ವೆಪನ್’ ಎಂಬ ಶೀರ್ಷಿಕೆಯ ವರದಿಯಲ್ಲಿ, ಇಸ್ರೇಲ್ನ ಎನ್ಎಸ್ಒ ಗ್ರೂಪ್ ಜಗತ್ತಿನ ವಿವಿಧ ದೇಶಗಳ ಗುಪ್ತಚರ ಸಂಸ್ಥೆಗಳು ಮತ್ತು ಕಾನೂನು ಜಾರಿ ಏಜೆನ್ಸಿಗಳಿಗೆ ಚಂದಾ ಆಧಾರದಲ್ಲಿ ಗೂಢಾಚಾರಿಕೆ ಸಾಫ್ಟ್ವೇರ್ ಮಾರಾಟ ಮಾಡುತ್ತ ಬಂದಿದೆ. ಇವರ ಹೊರತಾಗಿ ಖಾಸಗಿಯವರಿಗೆ ಅಥವಾ ರಾಜ್ಯ ಗುಪ್ತಚರ ಸಂಸ್ಥೆಗಳಿಗೂ ಇದನ್ನು ಮಾರಾಟ ಮಾಡುವ ಅವಕಾಶ ಇದ್ದರೂ ಮಾಡಿಲ್ಲ. ಈ ತಂತ್ರಾಂಶ ಯಾವುದೇ ಐಫೋನ್ ಅಥವಾ ಆಂಡ್ರಾಯ್್ಡ ಫೋನ್ಗಳನ್ನು ಸುಲಭವಾಗಿ ಹ್ಯಾಕ್ ಮಾಡುವ ಸಾಮರ್ಥ್ಯ ಹೊಂದಿದೆ’ ಎಂಬ ಅಂಶ ಉಲ್ಲೇಖವಾಗಿದೆ. ಪಂಚರಾಜ್ಯ ಚುನಾವಣೆ ವೇಳೆಯೇ ಈ ವರದಿ ಪ್ರಕಟವಾಗಿರುವುದು ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ 2017ರ ಜುಲೈನಲ್ಲಿ ಇಸ್ರೇಲ್ಗೆ ಭೇಟಿ ನೀಡಿದ್ದರು. ಅಂದಾಜು 2 ಶತಕೋಟಿ ಡಾಲರ್ ಮೌಲ್ಯದ ಪೆಗಾಸಸ್ ಮತ್ತು ಕ್ಷಿಪಣಿ ವ್ಯವಸ್ಥೆಯ ಖರೀದಿ ಒಪ್ಪಂದವನ್ನು ಇಸ್ರೇಲ್ ಜತೆಗೆ ಭಾರತ ಮಾಡಿಕೊಂಡಿತ್ತು. ಇದಾಗಿ 2019ರ ಜೂನ್ ತಿಂಗಳಲ್ಲಿ ನೆತಾನ್ಯಾಹು ಭಾರತಕ್ಕೆ ಭೇಟಿ ನೀಡಿದ್ದರು. ವಿಶ್ವಸಂಸ್ಥೆಯ ಸಭೆಯಲ್ಲಿ ಪ್ಯಾಲೆಸೆôನ್ ಮಾನವ ಹಕ್ಕುಗಳ ಸಂಘಟನೆಗೆ ವೀಕ್ಷಕ ಸ್ಥಾನಮಾನ ನೀಡುವ ವಿಚಾರದಲ್ಲಿ ಇಸ್ರೇಲ್ ಪರವಾಗಿ ಭಾರತ ಮತಚಲಾಯಿಸಿತ್ತು.
ಶೀಘ್ರವೇ ಸಮಿತಿ ವರದಿ: ಕಳೆದ ವರ್ಷ ಅಕ್ಟೋಬರ್ನಲ್ಲಿ ಸಮಿತಿ ರಚನೆ ಯಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಪೆಗಾಸಸ್ ತಂತ್ರಾಂಶದಿಂದ ತೊಂದರೆಗೆ ಒಳಗಾದವರು ಸಮಿತಿಯನ್ನು ಸಂರ್ಪಸಿ ಮಾಹಿತಿ ಒದಗಿಸು ವಂತೆ ಜನವರಿ 2ರಂದು ಪತ್ರಿಕಾ ಜಾಹೀರಾತನ್ನೂ ಪ್ರಕಟಿಸಿದೆ. ಮಾಹಿತಿ ಕಲೆಹಾಕಿ ಶೀಘ್ರವೇ ವರದಿ ಸಲ್ಲಿಸಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಏನಿದು ಪ್ರಕರಣ?: ಪೆಗಾಸಸ್ ಸ್ಪೈವೇರ್ ಮೂಲಕ ಪತ್ರಕರ್ತರು, ವಿಪಕ್ಷ ನಾಯಕರು ಸೇರಿ ದೇಶದ ಗಣ್ಯರ ಮೊಬೈಲ್ಗಳು ಕೇಂದ್ರ ಸರ್ಕಾರದ ಸವೇಕ್ಷಣೆಯಲ್ಲಿದೆ ಎಂದು ಆರೋಪ ಕೆಲ ತಿಂಗಳ ಹಿಂದೆ ಕೇಳಿಬಂದಿತ್ತು. ಈ ವಿಚಾರವಾಗಿ ಕಾಂಗ್ರೆಸ್ ಮತ್ತು ಇತರ ವಿಪಕ್ಷ ಸದಸ್ಯರು ಸಂಸತ್ ಕಲಾಪಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಈಗ ಮತ್ತೆ ಸಂಸತ್ತಿನ ಬಜೆಟ್ ಅಧಿವೇಶನ ಶುರುವಾಗುವುದಕ್ಕೆ ಎರಡು ದಿನ ಮುಂಚಿತವಾಗಿ ಪೆಗಾಸಸ್ ಕುರಿತ ವಿಶ್ಲೇಷಣಾತ್ಮಕ ವರದಿ ನ್ಯೂಯಾರ್ಕ್ ಟೈಮ್ಸ್ನಲ್ಲಿ ಪ್ರಕಟವಾಗಿದೆ.
ವಿಶ್ವಸಂಸ್ಥೆಯಲ್ಲಿ 2019ರಲ್ಲಿ ಇಸ್ರೇಲ್ ಪರವಾಗಿ ಭಾರತ ಮತಚಲಾಯಿಸಿದೆ ಎಂಬ ವರದಿ ‘ಸಂಪೂರ್ಣ ನಿರುಪಯುಕ್ತ’ ಮತ್ತು ‘ಪ್ರಚೋದನಕಾರಿ’. | ಸೈಯದ್ ಅಕ್ಬರುದ್ದೀನ್ ವಿಶ್ವಸಂಸ್ಥೆ ಮಾಜಿ ಕಾಯಂ ಪ್ರತಿನಿಧಿ ನಮ್ಮ ಪ್ರಾಧಮಿಕ ಪ್ರಜಾಸತ್ತಾತ್ಮಕ ಸಂಸ್ಥೆಗಳು, ರಾಜಕಾರಣಿಗಳು, ಸಾರ್ವಜನಿಕರು, ವಿಪಕ್ಷ ನಾಯಕರು, ಸರ್ಕಾರಿ ಅಧಿಕಾರಿಗಳು, ಸಶಸ್ತ್ರ ಪಡೆಗಳು ಮತ್ತು ನ್ಯಾಯಾಂಗದ ಮೇಲೆ ಗೂಢಚರ್ಯು ಮಾಡುವುದಕ್ಕೆ ಫೋನ್ ಟ್ಯಾಪಿಂಗ್ ಮಾಡಲು ಮೋದಿ ಸರ್ಕಾರ ಪೆಗಾಸಸ್ ಖರೀದಿಸಿದೆ. ಮೋದಿ ಸರ್ಕಾರ ದೇಶ ದ್ರೋಹ ಮಾಡಿದೆ. | ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ