ನ್ಯೂಸ್

ಪಾದಾಚಾರಿಯ ಸುಲಿಗೆ

ಮಂಜುನಾಥ.ಕೆ

ಬೆಂಗಳೂರು: ಪಾದಾಚಾರಿಯೊಬ್ಬರನ್ನು ಹಿಂಬಾಲಿಸಿರುವ ಇಬ್ಬರು ದುಷ್ಕರ್ಮಿಗಳು ಆತನನ್ನು ಅಡ್ಡಗಟ್ಟಿ ಬೆದರಿಸಿ ಆನ್‌ಲೈನ್ ಮುಖಾಂತರ ಐದು ಸಾವಿರ ರೂ. ವರ್ಗಾಯಿಸಿಕೊಂಡು ಸುಲಿಗೆ ಮಾಡಿ ಪರಾರಿಯಾಗಿದ್ದಾರೆ.
ಮಾರತ್ತಹಳ್ಳಿ ನಿವಾಸಿ ಚಿಣ್ಣಪೀರಯ್ಯ ಸುಲಿಗೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಶೋಧ ನಡೆಸಲಾಗಿದೆ.
ಸೋಮವಾರ ಮುಂಜಾನೆ ೩.೩೦ಕ್ಕೆ ಚಿಣ್ಣಪೀರಯ್ಯ ಕೆ.ಆರ್.ಪುರದ ಬನಶಂಕರಿ ಲೇಔಟ್‌ನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಹಿಂದಿನಿಂದ ಹಿಂಬಾಲಿಸಿಕೊಂಡು ಬಂದ ಇಬ್ಬರು ದುಷ್ಕರ್ಮಿಗಳು, ಚಿಣ್ಣಪೀರಯ್ಯನನ್ನು ಅಡ್ಡಗಟ್ಟಿ ಬೆದರಿಸಿ, ಹಣ ಕೇಳಿದ್ದಾರೆ. ಹಣ ಇಲ್ಲ ಎಂದಾಗ, ಮೊಬೈಲ್‌ನಲ್ಲಿ ಯುಪಿಐ ಮುಖಾಂತರ ೫ ಸಾವಿರ ರೂ. ಹಣ ವರ್ಗಾಯಿಸಿಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಚಿಣ್ಣಪೀರಯ್ಯ ನೀಡಿದ ದೂರಿನ ಮೇರೆಗೆ ಕೆ.ಆರ್.ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಬಂಧನಕ್ಕೆ ಶೋಧಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.