ನ್ಯೂಸ್

ಚೀನಾ ಬೇರು ಅಗೆದಷ್ಟೂ ಆಳ: ಭಾರತೀಯ ಕಂಪನಿಗಳಲ್ಲಿ ಪಿಬಿಒಸಿ ಪಾರುಪತ್ಯ

ನವದೆಹಲಿ: ಡ್ರ್ಯಾಗನ್ ಚೀನಾದ 59ಕ್ಕೂ ಹೆಚ್ಚು ಆಪ್​ಗಳನ್ನು ನಿರ್ಬಂಧಿಸುವ ಮೂಲಕ ಮೇಕ್ ಇನ್ ಇಂಡಿಯಾ ಸಂಕಲ್ಪ ಈಡೇರಿಸುವ ಪಣ ತೊಟ್ಟಿರುವ ಕೇಂದ್ರ ಸರ್ಕಾರ ದೇಶದ ವಿವಿಧ ಕಂಪನಿಗಳಲ್ಲಿ ಚೀನಾದ ಕೇಂದ್ರೀಯ ಬ್ಯಾಂಕ್ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ(ಪಿಬಿಒಸಿ)ವಿಸ್ತರಿಸಿರುವ ಹೂಡಿಕೆಯ ಬೇರು ಕಂಡು ದಂಗಾಗಿದೆ.

ಎರಡು ವರ್ಷಗಳ ಹಿಂದಷ್ಟೇ ಆರ್​ಬಿಐ ಭಾರತದಲ್ಲಿ ಶಾಖೆ ಆರಂಭಿಸಲು ಪಿಬಿಒಸಿಗೆ ಅನುಮತಿ ಕೊಟ್ಟಿತ್ತು. ಈ ಬ್ಯಾಂಕ್​ನ ಮೂಲಕ ಚೀನಾದ ಹಲವು ಕಂಪನಿಗಳು ತಮ್ಮ ಸರ್ಕಾರದ ನಿಯಂತ್ರಣದಲ್ಲಿರುವ ಅಥವಾ ಪರೋಕ್ಷವಾಗಿ ನಿಯಂತ್ರಿಸಲ್ಪಟ್ಟಿರುವ ಕಂಪನಿಗಳಲ್ಲಿ , ಭಾರತೀಯ ಆರ್ಥಿಕತೆಯಲ್ಲಿ ವ್ಯೂಹಾತ್ಮಕವಾಗಿ ಮಹತ್ವ ಪಡೆದುಕೊಂಡಿರುವ ವಲಯಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಒಲವು ತೋರಿದ್ದವು ಎನ್ನಲಾಗಿದೆ. ಕೇಂದ್ರ ಸರ್ಕಾರ ತನ್ನ ವಿದೇಶಿ ಹೂಡಿಕೆ ನಿಯಮಗಳಿಗೆ ತಿದ್ದುಪಡಿ ತಂದ ಬಳಿಕ ಈ ಹೂಡಿಕೆಗಳ ಮಾಹಿತಿ ಬಹಿರಂಗವಾಗಿದೆ.

ಎಲ್ಲೆಲ್ಲಿ ಪಿಬಿಒಸಿ ಹೂಡಿಕೆ?: ಎಚ್​ಡಿಎಫ್​ಸಿ- ಶೇ.1, ಇತರ ಹಲವು ಸಂಸ್ಥೆಗಳಲ್ಲಿ ಶೇ.1 ಅಥವಾ ಅದಕ್ಕಿಂತ ಕಡಿಮೆ ಹೂಡಿಕೆ ಇರುವುದರಿಂದ ಗಮನಕ್ಕೆ ಬರುತ್ತಿಲ್ಲ ಪಿರಾಮಲ್ ಎಂಟರ್​ಪ್ರೖೆಸಸ್-ಶೇ.0.43(137 ಕೋಟಿ ರೂಪಾಯಿ), ಅಂಬುಜಾ ಸಿಮೆಂಟ್-ಶೇ.32(122 ಕೋಟಿ ರೂಪಾಯಿ), ಎಚ್​ಡಿಎಫ್​ಸಿ-ಶೇ.1.0 (13,100 ಕೋಟಿ ರೂಪಾಯಿ)

ಹೂಡಿಕೆಯ ಹೊಳೆ: 2019ರಲ್ಲಿ ಸಣ್ಣ ಪಾಲುದಾರ ಕಂಪನಿಯಾಗಿ ಭಾರತಕ್ಕೆಕಾಲಿಟ್ಟ ಪಿಬಿಒಸಿ ಅತಿ ಕಡಿಮೆ ಸಮಯದಲ್ಲಿ ಹಲವಾರು ಕಂಪನಿಗಳ ಪಾಲುದಾರಿಕೆ ಪಡೆಯಿತು. ಆದರೆ ಒಟ್ಟಾರೆ ಎಷ್ಟೆಷ್ಟು ಹೂಡಿಕೆ ಮಾಡಿದೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಇಂದು ಚೀನಾ ಕಂಪನಿಗಳು ಪ್ರಮುಖ ಹೂಡಿಕೆದಾರರಾಗಿ ಹೊರಹೊಮ್ಮಿರುವ ಹಿಂದೆ ಚೀನಾದ ಈ ಕೇಂದ್ರೀಯ ಬ್ಯಾಂಕ್​ನ ಪ್ರಭಾವ ಸಾಕಷ್ಟು ಕೆಲಸ ಮಾಡಿದೆ. ತಾಂತ್ರಿಕತೆಯ ಸ್ಟಾರ್ಟಪ್​ಗಳು,ರಿಯಲ್ ಎಸ್ಟೇಟ್ ಸೆಕ್ಟೇರ್​ನಲ್ಲೂ ತನ್ನ ಹೂಡಿಕೆ ಬೇರನ್ನು ವಿಸ್ತರಿಸಿಕೊಂಡಿದೆ. ಅಲಿಬಾಬಾ, ಪೇಟಿಎಂ ಗ್ರೂಪ್, ಝೋಮ್ಯಾಟೋ, ಬಿಜೂಸ್​ನಂಹ ಕಂಪನಿಗಳ ಮೂಲಕ ಭಾರತದಲ್ಲಿ ಹೂಡಿಕೆಯ ಹೊಳೆ ಹರಿಸುತ್ತಿದೆ.