ಕಾರವಾರ: ಬಿಜೆಪಿ ವಿರುದ್ಧ ಪೋಸ್ಟರ್ ಅಭಿಯಾನ ಮುಂದುವರೆದಿದೆ. ಬನವಾಸಿ ಕದಂಬೋತ್ಸವಕ್ಕೆ ಮಂಗಳವಾರ ಸಿಎಂ ಬಸವಾಜ ಬೊಮ್ಮಾಯಿ ಆಗಮಿಸುತ್ತಿದ್ದು, ಅವರಿಗೆ "ಪೇ ಸಿಎಂ" ಪೋಸ್ಟರ್ ಸ್ವಾಗತಿಸುತ್ತಿದೆ.
ಸಚಿವ ಶಿವರಾಮ ಹೆಬ್ಬಾರ ಮೊಬೈಲ್ ಹಿಡಿದು "ಪೇ ಸಿಎಂ" ಎಂದು ಬರೆದಿರುವ ಚಿತ್ರ ಪ್ರದರ್ಶಿಸುತ್ತಿರುವ ಪೋಸ್ಟರ್ ಗಳನ್ನು ಬನವಾಸಿಯ ಬೀದಿಗಳಲ್ಲಿ ಹಚ್ಚಲಾಗಿದೆ. ಸಿಎಂ ಬೊಮ್ಮಾಯಿ ಸಂಚರಿಸುವ ರಸ್ತೆ ಬದಿಯ ಮರ ಹಾಗೂ ಕಟ್ಟಡಗಳಿಗೆ ಪೊಸ್ಟರ್ ಅಳವಡಿಕೆ ಮಾಡಿದ್ದಾರೆ. "ಆಹಾರದ ಕಿಟ್ ಸ್ಕ್ಯಾಮ್ಗೆ pay ಮಾಡಿ, ಡೀಲ್ ನಿಮ್ದು ಕಮೀಷನ್ ನಮ್ದು" ಎಂದು ಪೊಸ್ಟರ್ನಲ್ಲಿ ಬರೆಯಲಾಗಿದೆ.
ಫೆ.28 ರಂದು ಸಾಯಂಕಾಲ 5 ಗಂಟೆಗೆ ಸಿಎಂ ಕದಂಬೋತ್ಸವ ಉದ್ಘಾಟಿಸುವರು. ಅದಕ್ಕೂ ಮೊದಲು ಸಿದ್ದಾಪುರದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ನಂತರ ಗಣೇಶ ಹೆಗಡೆ ದೊಡ್ಮನೆ ಶತಮಾನೋತ್ಸವ ಆಚರಣೆಯಲ್ಲಿ ಪಾಲ್ಗೋಳ್ಳುವರು.