ನ್ಯೂಸ್

ಕಲಬುರಗಿಯಲ್ಲಿ ಬಸವರಾಜ ಬೊಮ್ಮಾಯಿಗೆ 'ಪೇ ಸಿಎಂ' ಪೋಸ್ಟರ್ ಸ್ವಾಗತ

ಕಲಬುರಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತೊಗರಿನಾಡು ಕಲಬುರಗಿಯಲ್ಲಿ 'ಪೇ ಸಿಎಂ' ಪೋಸ್ಟರ್ ಮೂಲಕ ಕಾಂಗ್ರೆಸ್​ ಸ್ಚಾಗತಿಸಿದ್ದು, ಬಿಜೆಪಿ ಮತ್ತು ಸರ್ಕಾರ ಮುಜುಗರ ಅನುಭವಿಸುವಂತಾಗಿದೆ.

ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭದ ಹಿನ್ನೆಲೆ ಇಂದು(ಸೋಮವಾರ) ಕಲಬುರಗಿಗೆ ಸಿಎಂ ಆಗಮಿಸಿದ್ದಾರೆ. ಸಿಎಂ ಬರುವ ಕೆಲ ಸಮಯದ ಮುನ್ನವೇ ಕಲಬುರಗಿ ನಗರದ ಪ್ರಮುಖ ಬೀದಿಗಳಲ್ಲಿ 'ಪೇ ಸಿಎಂ' ಪೋಸ್ಟರ್​ಗಳನ್ನು ಎಲ್ಲಡೆ ಅಂಟಿಸಲಾಗಿದೆ.

ಸಂಗಮೇಶ್ವರ ಕಾಲನಿ, ಜೇವರ್ಗಿ ಕಾಲನಿ, ಜಗತ್ ಸರ್ಕಲ್ ವೃತ್ತ... ಸೇರಿ ಇನ್ನಿತರ ಕಡೆಗಳಲ್ಲಿ ಪೋಸ್ಟರ್​ಗಳನ್ನು ಅಂಟಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ನಿರಾಕರಿಸಿದರು.