ನ್ಯೂಸ್

Pawan Singh | ನಟ ಪವನ್ ಸಿಂಗ್ ಗರ್ಭಪಾತ ಮಾತ್ರೆಗಳನ್ನು ನೀಡುತಿದ್ದಾರೆ ಎಂದ ಪತ್ನಿ ಜ್ಯೋತಿ; ಆರೋಪ ತಳ್ಳಿಹಾಕಿದ ಪತಿ!

Pawan Singh: ಭೋಜ್‌ಪುರಿ ನಟ ಪವನ್ ಸಿಂಗ್ ಮತ್ತು ಪತ್ನಿ ಜ್ಯೋತಿ ಸಿಂಗ್ ನಡುವಿನ ವಿವಾದ ಕೈ ಮೀರಿದ್ದು, ಬುಧವಾರ ಇಬ್ಬರೂ ಪ್ರತ್ಯೇಕ ಪತ್ರಿಕಾಗೋಷ್ಠಿಗಳನ್ನು ನಡೆಸಿ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಅನೇಕ ದಿನಗಳಿಂದ ನಟ ಪವನ್​ ಸಿಂಗ್​ ದಂಪತಿಗಳು ಅನೇಕ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದು, ಸದ್ಯ ತಮ್ಮ ವೈಯಕ್ತಿಕ ಜೀವನದಲ್ಲಿನ ಅಸಮಧಾನವನ್ನು ಸಾರ್ವಜನಿಕವಾಗಿ ಚರ್ಚೆಯಾಗುವಂತೆ ಮಾಡಿದ್ದಾರೆ.

ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜ್ಯೋತಿ ಸಿಂಗ್, ಗಂಭೀರ ಆರೋಪಗಳನ್ನು ತಮ್ಮ ಪತಿಯ ಮೇಲೆ ಹೊರಿಸಿದರು. ತಮ್ಮ ಮದುವೆಯ ಸಮಯದಲ್ಲಿ ಕಿರುಕುಳವನ್ನು ಎದುರಿಸಿರುವುದಾಗಿ ಎಂದು ಹೇಳಿಕೊಂಡಿದ್ದಾರೆ. ಪವನ್ ಸಿಂಗ್ ಮಗು ಬೇಕು ಹೊರ ಪ್ರಪಂಚದ ಮುಂದೆ ತೋರಿಸಿಕೊಳ್ಳುತ್ತಾರೆ, ಆದರೆ, ಪದೇ ಪದೇ ಗರ್ಭಪಾತ ಮಾತ್ರೆಗಳನ್ನು ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ನಿಜವಾಗಿಯೂ ಮಗುವನ್ನು ಬಯಸುವವರು ತಮ್ಮ ಹೆಂಡತಿಯ ಜೊತೆ ಈ ರೀತಿಯಾಗಿ ನಡೆದುಕೊಳ್ಳುವುದಿಲ್ಲ. ತುಂಬಾ ದಿನಗಳಿಂದ ನನಗೆ ಅವರು ಮಾತ್ರೆಗಳನ್ನು ನೀಡುತಿದ್ದರೂ ನಾನು ಈ ವಿಷಯಗಳನ್ನು ಬಹಿರಂಗಪಡಿಸಿರಲಿಲ್ಲ, ಆದರೆ, ಪವನ್ ಇಂದು ನನ್ನನ್ನು ಹಿಂಸಿಸುತ್ತಿದ್ದಾರೆ, ಅದನ್ನು ತಡೆದುಕೊಳ್ಳಲಾಗದೆ ಬೆಳಿಗ್ಗೆ 2 ಗಂಟೆಗೆ 25 ನಿದ್ರೆ ಮಾತ್ರೆಗಳನ್ನು ಸೇವಿಸಿದೆ, ಅಸ್ವಸ್ತಗೊಂಡಿದ್ದರಿಂದ ಸಹೋದರ ರಾನು ಭೈಯಾ ಮತ್ತು ಅವರ ಸ್ನೇಹಿತರು ತಡರಾತ್ರಿ ಆಸ್ಪತ್ರೆಗೆ ಕರೆದೊಯ್ದರು ಎಂದು ಜ್ಯೋತಿ ಹೇಳಿಕೊಂಡಿದ್ದಾರೆ.

ಪವನ್ ಸಿಂಗ್ ತಿರುಗೇಟು...

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪವನ್ ಸಿಂಗ್, ಪತ್ನಿ ಜ್ಯೋತಿ ಆರೋಪಗಳನ್ನು ತಳ್ಳಿಹಾಕಿದರು. ನನಗೆ ತೊಂದರೆ ನೀಡಲು ಈಗ ಪ್ರೀತಿಯ ನಾಟಕವಾಡುತ್ತಿದ್ದು, ಇದು ರಾಜಕೀಯ ಪ್ರೇರಿತವಾಗಿದೆ ಎಂದರು. ದಂಪತಿಗಳಿಬ್ಬರು ಈಗಾಗಲೇ ವಿಚ್ಛೇಧನಕ್ಕೆ ಅರ್ಜೀ ಸಲ್ಲಿಸಿದ್ದು, ಹೀಗಿದ್ದಾಗ ಒಂದೇ ಸೂರಿನಡಿ ವಾಸಿಸುತ್ತಾ ಪ್ರಕರಣವನ್ನು ಎದುರಿಸುವುದು ಹೇಗೆ ಎಂದು ಪ್ರಶ್ನಿಸಿದರು. ತಾವು ಎದುರಿಸುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಪವನ್, ತನ್ನನ್ನು ಬೆಂಬಲಿಸಿದ ಪ್ರೇಕ್ಷಕರ ಬಗ್ಗೆ ತನಗೆ ಆಳವಾದ ಗೌರವವಿದೆ ಎಂದು ಹೇಳಿದರು. ಸಾರ್ವಜನಿಕರೇ ನನಗೆ ದೇವರು. ನಾನು ಈ ಮಟ್ಟವನ್ನು ತಲುಪಲು ಸಹಾಯ ಮಾಡಿದವರ ಭಾವನೆಗಳಿಗೆ ನಾನು ನೋವು ಮಾಡುವುದಿಲ್ಲ, ಜ್ಯೋತಿ ಸಿಂಗ್ ಜೀ ನಿಮ್ಮ ಏಕೈಕ ಬೇಡಿಕೆಯೆಂದರೆ ನೀವು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡುವುದು, ಅದು ನನ್ನ ನಿಯಂತ್ರಣಕ್ಕೆ ಮೀರಿದ್ದು ಎಂದು ಹೇಳಿದರು.

ಪೊಲೀಸರು ತಮ್ಮ ನಿವಾಸದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಇದ್ದಾರೆಯೇ ಹೊರತು ತಾವು ಕರೆದ ಕಾರಣಕ್ಕೆ ಅಲ್ಲ ಎಂದು ಪವನ್ ಸ್ಪಷ್ಟಪಡಿಸಿದರು. ಪೊಲೀಸರನ್ನು ಕರೆಸಿದ್ದಾರೆಂದು ಸೂಚಿಸುವ ಮೂಲಕ ಸುಳ್ಳು ಸುದ್ದಿ ಹರಡಲಾಗಿದೆ, ಜ್ಯೋತಿ ತಮ್ಮ ಮಹತ್ವಾಕಾಂಕ್ಷೆಗಳಿಗಾಗಿ ಸಾರ್ವಜನಿಕ ವಿವಾದವನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.(ಏಜೆನ್ಸೀಸ್​)