ಅಮರಾವತಿ: ಆಂಧ್ರದ ಡೆಪ್ಯೂಟಿ ಸಿಎಂ ಪವನ್ ಕಲ್ಯಾಣ್ ನಿಜ ಜೀವನದಲ್ಲೂ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಅವರ ವಕೀಲ್ ಸಾಬ್ ಚಿತ್ರದ ಒಂದು ದೃಶ್ಯ ನಿಮಗೆ ನೆನಪಿದೆಯೇ? ಕೋರ್ಟಿನಲ್ಲಿ ಮಹಿಳಾ ಪೊಲೀಸ್ ಪೇದೆ ಜೊತೆ ಹಸ್ತಲಾಘವ ಮಾಡಿ ಗಮನಸೆಳೆಯುತ್ತಾರೆ. ಇಲ್ಲಿ ಕೋರ್ಟ್ ಪಿಸಿಗೂ ಗೌರವ ಕೊಡುವ ಉದ್ದೇಶ ಹೊಂದಿರುತ್ತಾರೆ. ಶುಕ್ರವಾರ ಆಂಧ್ರ ವಿಧಾನಸಭೆಯಲ್ಲಿ ಇಂತಹುದೇ ಒಂದು ಮಾನವೀಯ ದೃಶ್ಯ ಬಯಲಾಗಿದೆ. ಇದು ಜನಮೆಚ್ಚುಗೆಗೂ ಪಾತ್ರವಾಗಿದೆ.
ಇದನ್ನೂ ಓದಿ: ಏಳು ಎಕ್ಸ್ಪ್ರೆಸ್ ರೈಲುಗಳ ಸಮಯ ಬದಲಾವಣೆ
ವಿಧಾನ ಸಭೆಯಲ್ಲಿ ಪ್ರಮಾಣ ವಚನ ಸ್ವೀಕಾರ ಸಂದರ್ಭ ಸ್ಪೀಕರ್ ಗೆ ಧನ್ಯವಾದ ಹೇಳಿದ ಬಳಿಕ ಸ್ಪೀಕರ್ ಪಕ್ಕದಲ್ಲಿ ನಿಂತಿದ್ದ ಸಿಬ್ಬಂದಿಗೆ ಹಸ್ತಲಾಘವ ನೀಡಿ ಪವನ್ ಮುಂದೆ ಸಾಗಿದರು.
ಇದು ರಿಯಲ್ ಲೈಫ್ ನಲ್ಲೂ ಪವನ್ ರಿಯಲ್ ಹೀರೋ ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.