ಬೆಂಗಳೂರು: ರೇಣುಕಸ್ವಾಮಿಯನ್ನು ಚಿತ್ರಹಿಂಸೆ ಕೊಟ್ಟು ಮರ್ಡರ್ ಮಾಡಿದ ಆರೋಪದ ಮೇಲೆ ದರ್ಶನ್ ಹಾಗೂ ಪವಿತ್ರಾ ಗೌಡ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ಹಾಗೂ ಪವಿತ್ರಾ ಗೌಡರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸುದ್ದಿ ಬೆನ್ನಲ್ಲೇ ಪವಿತ್ರಾಗೌಡ ಮಾಜಿ ಪತಿ ಸಂಜಯ್ ಸಿಂಗ್ ಅವರು ವಿಚ್ಛೇದಿತ ಪತ್ನಿ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ಖಾಸಗಿವಾಹಿನಿ ಜತೆ ಮಾತನಾಡಿ, ನಾನು ಉತ್ತರಪ್ರದೇಶದ ಹುಡುಗ. ನಾನು ಬೆಂಗಳೂರಿಗೆ 2002ರಲ್ಲಿ ಬಂದಿದ್ದೇನು. ಆಗ ನನಗೆ ಪವಿತ್ರ ಗೌಡ ಪರಿಚಯ ಆಗಿತ್ತು. ಆಗ ಮದುವೆ ಆಗಿದ್ದೇವು. ಮಗಳ ಜತೆ ನಾನು ಒಂದು ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಗಳಿಗೆ ಒಂದು ಸಾರಿ ಫೋನ್ನಲ್ಲಿ ಮಾತನಾಡುತ್ತೇನೆ. ಆದರೆ ಡೈರೆಕ್ಟ್ ಆಗಿ ಮಾತನಾಡೋಕೆ ಆಗಲ್ಲ. ಅವಳ ಫೋನ್ ನಂಬರ್ ನನ್ನ ಬಳಿ ಇಲ್ಲ. ಪವಿತ್ರಾಳನ್ನು ನಾನು ಮಾತನಾಡಿಸಿಲ್ಲ. ನಮ್ಮ ಅತ್ತೆ ಮಾವರಿಗೆ ಫೋನ್ ಮಾಡಿದ್ರೆ ಮಾತ್ರ ಮಗಳ ಬಳಿ ಮಾತನಾಡಬಹುದಾಗಿತ್ತು. ಇಲ್ಲ ಅಂದ್ರೆ ಅವಳ ಬಳಿ ನಾನು ಮಾತನಾಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಈ ಘಟನೆ ನಂತರ ನಾನು ಮಗಳನ್ನು ಕಾಂಟೆಕ್ಟ್ ಮಾಡಿಲ್ಲ. ನನಗೆ ಅವಳ ಪರಿಸ್ಥಿತೆ ಗೊತ್ತಿದೆ. ಕೋಪ ಬಂದ್ರೆ ಏನ್ ಮಾಡಿಕೊಳ್ಳುತ್ತಾಳೋ ಗೊತ್ತಿಲ್ಲ. ಇಂತಹ ಟೈಮ್ನಲ್ಲಿ ನಾನು ಅವಳಿಗೆ ಯಾವುದೇ ತೊಂದರೆ ಮಾಡಲ್ಲ ಎಂದಿದ್ದಾರೆ.
ನಾನು ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನು. ಆಗ ನನಗೆ ಅವರ ಪರಿಯಚ ಆಗಿತ್ತು. ಆಗ ಪ್ರೀತಿ ಮಾಡಿ ಮದುವೆ ಮಾಡಿಕೊಂಡಿದ್ದೇವು. ಮದುವೆ ಆಗಿ ಮೂರೇ ವರ್ಷಕ್ಕೆ ನನ್ನ ಮಗಳು ಹುಟ್ಟಿದ್ದಳು. ಪವಿತ್ರಾ ಸಿನಿಮಾ ಇಂಡಸ್ಟ್ರಿಗೆ ಸೇರಿದಳು. ನಂತರ ನಮ್ಮ ಮಧ್ಯೆ ಬಿರುಕು ಉಂಟಾಗಿತ್ತು. ಅವಳು ನನ್ನ ಮೇಲೆ ಡಿವೋರ್ಸ್ ಕೇಸ್ ಹಾಕಿದ್ದಳು. 2013ರಲ್ಲಿ ಡಿವೋರ್ಸ್ ಆಯ್ತು. ಈ ಮೊದಲೇ ನಾವು ಬೇರೆಯಾಗಿದ್ದೇವು. ಎಲ್ಲ ಸರಿಯಾಗಿ ಹೋಗುತ್ತಿತ್ತು. ಆದರೆ ಜಗಳ ಕಾಮನ್ ಆಗಿತ್ತು. ನಂತರ ವಿಚ್ಛೇದನ ಆಯ್ತು ಎಂದಿದ್ದಾರೆ.
ಇದೀಗ ಈ ಪ್ರಕರಣದಲ್ಲಿ ದರ್ಶನ್ ಹಾಗೂ ಪವಿತ್ರಾಗೌಡ ಹೆಸರು ಕೇಳಿ ಬಂದಿದೆ. ಆದರೆ ನನಗೆ ಈ ಪ್ರಕರಣ ಕುರಿತಾಗಿ ಸರಿಯಾಗಿ ಗೊತ್ತಿಲ್ಲ. ಠಾಣೆಗೆ ಹೋದರೆ ದರ್ಶನ್ ಅವರ ಹೆಸರು ಹಾಳಾಗುತ್ತದೆ ಎಂದು ಪತಿ ದರ್ಶನ್ ಅವರ ಬಳಿ ಪವಿತ್ರಾ ಹೇಳಿಕೊಂಡಿರಬಹುದು. ದರ್ಶನ್ ಬಳಿ ಹೇಳಿಕೊಂಡಿದ್ದು ತಪ್ಪು ಅಲ್ಲ. ಆದರೆ ದರ್ಶನ್ ಅವರು ತೆಗೆದುಕೊಂಡಿರುವ ನಿರ್ಧಾರ ತಪ್ಪಾಗಿದೆ ಎಂದಿದ್ದಾರೆ.
ಮತ್ತೆ..ಮತ್ತೆ ಅಶ್ಲೀಲ ಸಂದೇಶ ಕಳಿಸಿದರೆ ಯಾವ ಹೆಣ್ಣಿಗೆ ನೋವಾಗಲ್ಲ ಹೇಳಿ. ಹೀಗಾಗಿ ದರ್ಶನ್ ಕ್ರಮ ಕೈಗೊಂಡಿದ್ದಾರೆ. ಆದರೆ ಪವಿತ್ರಾ ಅವರದ್ದು, ತಪ್ಪಿಲ್ಲ. ಆದರೆ ಅವರ ಗಂಡನ ಬಳಿ ಹೇಳಿಕೊಂಡಿದ್ದಾರೆ. ಅವಳು ಮಾಡಿದ್ದು ಸರಿಯಾಗೆ ಇದೆ. ಅವಳಿಗೆ ಆಗಿರುವ ಸಮಸ್ಯೆ ಹೇಳಿಕೊಂಡಿದ್ದಾಳೆ. ಆದರೆ ದರ್ಶನ್ ಅವರು ಸರಿಯಾಗಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎಂದಿದ್ದಾರೆ. ನಾನು ಅವಳ ಬಗ್ಗೆ ಚೆನ್ನಾಗಿ ಗೊತ್ತು. ಅವಳು ಯಾವಾಗಲೂ ತಪ್ಪು ನಿರ್ಧಾರ ತೆಗೆದೆಕೊಳ್ಳಲ್ಲ. ನಾನು ನೋಡಿದ ಪವಿತ್ರಾ ಗೌಡ ಅವಳು ಜೀವನ, ಯಶಸ್ಸು ಮುಖ್ಯವಾಗಿತ್ತು. ಅವಳು ಕೈ ಎತ್ತಿ ಹೊಡೆಯುವ ಮಹಿಳೆ ಅಂತೂ ಅಲ್ಲ. ನಾನು ಅವಳ ಜತೆ ಐದು ವರ್ಷ ಸಂಸಾರ ಮಾಡಿದ್ದೇನೆ. ನಾನೆ ಗಲಾಟೆ ಮಾಡಿದ್ದರು ಅವಳು ಮಾತ್ರ ತಾಳ್ಮೆಯಿಂದ ಕೇಳಿತ್ತಿದ್ದಳು. ನಾವಿಬ್ಬರು ಸಂಪೂರ್ಣ ಒಪ್ಪಿಗೆಯಿಂದ ವಿಚ್ಛೇದನ ಪಡೆದುಕೊಂಡಿದ್ದೇವೆ ಎಂದಿದ್ದಾರೆ.