ನ್ಯೂಸ್

ಪಟ್ಲ ನೇತೃತ್ವದಲ್ಲಿ ಪಾವಂಜೆ ಮೇಳ ತಿರುಗಾಟ ನ.೨೭ರಿಂದ ಶುರು

ಮಂಗಳೂರು: ಭಾಗವತ ಪಟ್ಲ ಸತೀಶ್‌ ಶೆಟ್ಟಿ ನೇತೃತ್ವದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೇಳ ಪ್ರಾರಂಭ ನಿಶ್ಚಿತಗೊಂಡಿದೆ.

ಇದೇ ನವೆಂಬರ್‌ ೨೭ರಿಂದ ಮೇಳದ ತಿರುಗಾಟ ಪ್ರಾರಂಭಗೊಳ್ಳಲಿದ್ದು, ಮೇಳದ ಉದ್ಘಾಟನೆ ಅಕ್ಟೋಬರ್‌ ೨೬ರಂದು ವಿಜಯದಶಮಿಯ ಶುಭಮುಹೂರ್ತದಲ್ಲಿ ಯಕ್ಷಗಾನ ಪ್ರದರ್ಶನದೊಂದಿಗೆ ಉದ್ಘಾಟನೆಗೊಳ್ಳಲಿದೆ ಎಂದು ಪಾವಂಜೆ ಕ್ಷೇತ್ರದ ಧರ್ಮದರ್ಶಿ ಡಾ.ಯಾಜಿ ನಿರಂಜನ ಭಟ್‌, ಆಡಳಿತ ಮೊಕ್ತೇಸರ ಎಂ.ಶಶೀಂದ್ರ ಕುಮಾರ್‌ ಹಾಗೂ ಭಾಗವತ ಪಟ್ಲ ಸತೀಶ್‌ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾಲಮಿತಿ ಯಕ್ಷಗಾನ ಪ್ರದರ್ಶಿಸಲಾಗುವುದು. ಯಕ್ಷಗಾನ ಮಂಡಳಿಯಲ್ಲಿ ಹಿಮ್ಮೇಳದಲ್ಲಿ ಕಲಾವಿದರಾಗಿ ಪ್ರಫುಲ್ಲ ಚಂದ್ರ ನೆಲ್ಯಾಡಿ, ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ್‌ ಬೊಳಿಂಜಡ್ಕ, ಪ್ರಶಾಂತ್‌ ವಗೆನಾಡು, ಪೂರ್ಣೇಶ್‌ ಆಚಾರ್ಯ, ಹಾಸ್ಯಗಾರರಾಗಿ ಉಜಿರೆ ನಾರಾಯಣ, ಸಂದೇಶ ಮಂದಾರ, ಸ್ತ್ರೀವೇಷಧಾರಿಗಳಾಗಿ ಅಕ್ಷಯ್‌ ಕುಮಾರ್‌, ರಾಜೇಶ್‌ ನಿಟ್ಟೆ, ಯೋಗೇಶ್‌ ಕಡಬ, ವಿಶ್ವಾಸ್‌ ಕಾವೂರು, ಪ್ರಧಾನ ಪಾತ್ರದಲ್ಲಿ ರಾಧಾಕೃಷ್ಣ ನಾವಡ, ದಿವಾಣ ಶಿವಶಂಕರ ಭಟ್‌, ಸಂತೋಷ್‌ ಮಾನ್ಯ, ರಾಕೇಶ್‌ ರೈ ಅಡ್ಕ, ಸತೀಶ ನೈನಾಡು, ಮಾಧವ ಕೊಳ್ತಮಜಲು, ಮೋಹನ ಬೆಳ್ಳಿಪ್ಪಾಡಿ, ಮನೀಶ್‌ ಪಾಟಾಳಿ, ಲೋಕೇಶ ಮುಚ್ಚೂರು, ಹರಿರಾಜ್‌ ಕಿನ್ನಿಗೋಳಿ, ರೋಹಿತ್‌, ದಿವಾಕರ, ಲಕ್ಷ್ಮಣ, ಮಧುರಾಜ್‌, ಭುವನ್‌ ಮತ್ತಿತರರಿರುತ್ತಾರೆ.