ನ್ಯೂಸ್

Metroದಲ್ಲಿ ಹಿಗ್ಗಾಮುಗ್ಗಾ ಹೊಡೆದಾಡಿಕೊಂಡ ಪ್ರಯಾಣಿಕರು! ವಿಡಿಯೋ ವೈರಲ್​

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಒಂದಲ್ಲ ಒಂದು ವಿಷಯ ವೈರಲ್ ಆಗುತ್ತದೆ.  ಹೀಗೆ ಮೆಟ್ರೋಗೆ ( Metro ) ಸಂಬಂಧಿಸಿದ ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಈಗ ಮೆಟ್ರೋದಲ್ಲಿ ಇಬ್ಬರು ಪ್ರಯಾಣಿಕರು  ಹಿಗ್ಗಾಮುಗ್ಗಾ ಹೊಡೆದಾಡಿಕೊಂಡ  ವಿಡಿಯೋ ವೈರಲ್​​ ಆಗುತ್ತಿದೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಗೇಟ್ ಬಳಿ ನಿಂತಿರುವುದು ಕಂಡು ಬಂದಿದೆ. ಅವನ ಮುಂದೆ ನಿಂತಿರುವ ವ್ಯಕ್ತಿ ತನ್ನ ಚಪ್ಪಲಿಯನ್ನು ತೆಗೆದು ಅವನ ಮುಂದೆ ನಿಂತಿರುವ ವ್ಯಕ್ತಿಯ ಕೆನ್ನೆಯ ಮೇಲೆ ಬಾರಿಸುತ್ತಾನೆ. ಇದಾದ ಬಳಿಕ ಆತನೂ ಬಲವಾಗಿ ಹೊಡೆದು ಕೆಳಗೆ ಬೀಳುವಂತೆ ಮಾಡಿದ್ದಾನೆ. ಇದಾದ ಬಳಿಕ ಅಲ್ಲಿಂದ ದೂರ ಹೋಗುತ್ತಾನೆ ಎಂಬುದು ವಿಡಿಯೋ ನೋಡಿದರೆ ತಿಳಿಯುತ್ತದೆ.

ವೈರಲ್_ಫ್ಲಿರ್ಟಿಂಗ್ ಹೆಸರಿನ ಖಾತೆಯಿಂದ ಈ ವೀಡಿಯೊವನ್ನು Instagram ನಲ್ಲಿ ಪೋಸ್ಟ್ ಮಾಡಲಾಗಿದೆ. ವೀಡಿಯೋ ನೋಡಿದ ಜನರು ಕೂಡ ಕಮೆಂಟ್ ಮಾಡಿದ್ದಾರೆ.

ಚಪ್ಪಲಿ ಹೊಡೆಯುವವರೆಗೂ ಅವನು ಏಕೆ ಕಾಯುತ್ತಿದ್ದನು? ಏನು ಸ್ವಾಗತ...! ಮೆಟ್ರೋದಲ್ಲಿಯೇ ಯಾಕೆ ಹೀಗೆ ಆಗ್ತಿದೆ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.