Passengers: ಉತ್ತರಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ದೇಶದ ನಾನಾ ಭಾಗಗಳಿಂದ ಭಕ್ತರ ದಂಡೇ ಸಾಗುತ್ತಿದ್ದು, ಸಾರಿಗೆ ಸಂಪರ್ಕ ಸೇರಿದಂತೆ ವಿಮಾನ, ರೈಲು ತುಂಬಿ ತುಳುಕುತ್ತಿವೆ.
ಇದರ ನಡುವೆ ಪ್ರಯಾಗ್ ರಾಜ್ಗೆ ತೆರಳುತ್ತಿರುವ ಪ್ರಯಾಣಿಕರು ರೈಲಿನಲ್ಲಿ ಸೀಟ್ ಸಿಗದಿದಕ್ಕೆ ರೈಲಿನ ಎಂಜಿನ್(ರೈಲು ಪೈಲಟ್ ಜಾಗ) ಒಳಗೆ ಏರುತ್ತಿರುವ ವಿಡಿಯೋಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ವಾರಣಿಸಿಯಿಂದ ಪ್ರಾಯಾಗ್ರಾಜ್ಗೆ ತೆರಳುತ್ತಿರುವ ರೈಲು ಎಂದು ಹೇಳಲಾಗಿದೆ.
ನಿಲ್ದಾಣಕ್ಕೆ ಬಂದ ರೈಲಿಗೆ ಹತ್ತಲು ಪ್ರಯಾಣಿಕರು ಹರ ಸಾಹಸ ಪಡುತ್ತಿದ್ದಾರೆ. ಸೀಟ್ ಸಿಗದ ಕಾರಣ ಸಿಟ್ಟಿಗೆದ್ದ ಪ್ರಯಾಣಿಕರು ರೈಲಿನ ಎಂಜಿನ್ ಒಳಗೆ ಹತ್ತಿ ಕೂಳಿತುಕೊಳ್ಳವ ದೃಶ್ಯಗಳು ವಿಡಿಯೋದಲ್ಲಿ ಕಾಣ ಸಿಗುತ್ತಿವೆ.
ಜನದಟ್ಟಣೆಯಿಂದ ಸೀಟ್ ಸಿಗದ ಕೆಲ ಪ್ರಯಾಣಿಕರಿ ಗದ್ದಲ ಮಾಡಿ ರೈಲು ಎಂಜಿನ್ ಒಳಗೆ ಹತ್ತಿ ಕೂತಿದ್ದಾರೆ. ಬಳಿಕ ಪೊಲೀಸರು ಬಂದು ಪ್ರಯಾಣಿಕರನ್ನು ಸಮಾಧಾನ ಮಾಡಿ, ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಇದೀಗ ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.(ಏಜೆನ್ಸೀಸ್)