ಲಖನೌ: ಚಲಿಸುತ್ತಿದ್ದ ಬಸ್ಸಿನ ಬಾಗಿಲು ತೆಗೆದು ಪಾನ್ (Paan) ಉಗಿಯಲು ಹೋಗಿ ವ್ಯಕ್ತಿಯೊಬ್ಬರು ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಸುಲ್ತಾನ್ಪುರದಲ್ಲಿ ನಡೆದಿದೆ.
ಘಟನೆಯು ಎಕ್ಸ್‌ಪ್ರೆಸ್‌ವೇಯ 93-ಕಿಮೀ ಮೈಲಿಗಲ್ಲಿನಲ್ಲಿ ನಡೆದಿದ್ದು, ಅಜಂಗಢದಿಂದ ಲಖನೌಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದ್ದು, ಸುಲ್ತಾನ್ಪುರದ ಬಾಲ್ದಿರೈ ಪೊಲೀಸ್ ಠಾಣೆ ವ್ಯಾಪ್ತಿಯ ಬಿಹಿ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಈ ಬಗ್ಗೆ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಮೃತರನ್ನು ಲಖನೌನ ಚಿನ್ಹಾಟ್ ಪ್ರದೇಶದ ನಿವಾಸಿ ರಾಮ್ ಜಿವಾನ್ ಎಂದು ಗುರುತಿಸಲಾಗಿದ್ದು, ಉತ್ತರ ಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದ ಎಸಿ ಬಸ್ಸಿನಲ್ಲಿ ಅವರ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದರು. ಪಾನ್ ಉಗುಳಲು ಬಾಗಿಲನ್ನು ತೆಗೆಸಿದ್ಧಾರೆ. ಪಾನ್ ಉಗಿಯುವ ವೇಳೆ ಸಮತೋಲನವನ್ನು ಕಳೆದುಕೊಂಡ ವ್ಯಕ್ತಿ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.