ಛತ್ತಿಸ್ಗಢ: ಪ್ರಯಾಣಿಕರ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 5 ಜನರು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾದ ಘಟನೆ ಛತ್ತಿಸ್ಘಡದ ಬಿಲಾಸ್ಪುರ ಜಿಲ್ಲೆಯಲ್ಲಿ ಮಂಗಳವಾರ(ನ.04) ನಡೆದಿದೆ.
ಬಿಸ್ಲಾಪುರ-ಕಟ್ನಿ ವಿಭಾಗದಲ್ಲಿ ಕೊರ್ಬಾ ಪ್ಯಾಸೆಂಜರ್ ರೈಲು, ಲಾಲ್ ಕದನ್ ಪ್ರದೇಶದ ಬಳಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಇನ್ನು‘ ಡಿಕ್ಕಿಯ ಪರಿಣಾಮ ಎಷ್ಟು ಪ್ರಬಲವಾಗಿತ್ತೆಂದರೆ ಕೆಲವು ಬೋಗಿಗಳು ಒಂದರ ಮೇಲೊಂದು ಹತ್ತಿವೆ. ಪ್ರಯಾಣಿಕರು ಮತ್ತು ಹತ್ತಿರದ ಸ್ಥಳೀಯರಲ್ಲಿ ಭಯಭೀತರಾಗಿದ್ದರು ಎಂದು ವರದಿ ಆಗಿದೆ.
ಈ ಆಡಚರಣೆಯಿಂದ ಹಲವು ರೈಲುಗಳು ರದ್ದುಗೊಳಿಸಲಾಗಿದೆ. ಎನ್ಡಿಆರ್ಎಫ್ ತಂಡ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗಳುಗಳನ್ನು ಆಸ್ಪತ್ರೆ ದಾಖಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘರ್ಷಣೆಗೆ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಮತ್ತು ಹಾನಿಗೊಳಗಾದ ಭಾಗವನ್ನು ತೆರವುಗೊಳಿಸಿ ಸಂಚಾರವನ್ನು ಪುನರಾರಂಭಿಸಲು ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)