ಕಾಬುಲ್: ಅಫ್ಘಾನಿಸ್ತಾನ ಆಪರೇಟ್ ಮಾಡುತ್ತಿದ್ದ ಅರಿಯಾನ ಏರ್ಲೈನ್ಸ್ ವಿಮಾನವು ದೇಶದ ಘಜನಿ ಪ್ರಾಂತ್ಯದಲ್ಲಿ ಪತನವಾಗಿರುವುದಾಗಿ ಆಫ್ಘಾನ್ ಹಿರಿಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಈ ಬಗ್ಗೆ ಘಜನಿ ನಗರದಲ್ಲಿರುವ ಪ್ರಾಂತೀಯ ಗವರ್ನರ್ ಕಚೇರಿಯ ವಕ್ತಾರ ಆರೀಫ್ ನೂರಿ ಮಾತನಾಡಿ, ಬೋಯಿಂಗ್ ವಿಮಾನವು ಅರಿಯಾನ ಆಫ್ಘಾನ್ ಏರ್ಲೈನ್ಗೆ ಸೇರಿದ್ದಾಗಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 1:10ರ ಸುಮಾರಿಗೆ ಘಜನಿ ಪ್ರಾಂತ್ಯದ ದೇಹ್ ಏಕ್ ಜಿಲ್ಲೆಯ ಸಾಡೋ ಖೇಲ್ ಏರಿಯಾದಲ್ಲಿ ಪತನವಾಗಿದೆ ಎಂದು ಹೇಳಿದ್ದಾರೆ.
ವಿಮಾನದಲ್ಲಿ ಒಟ್ಟು 83 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದ್ದು, ಈವರೆಗೂ ಯಾವುದೇ ಸಾವು-ನೋವುಗಳು ಆಗಿರುವ ಬಗ್ಗೆ ವರದಿಯಾಗಿಲ್ಲ. ವಿಮಾನವು ತಾಲಿಬಾನ್ ಏರಿಯಾದಲ್ಲಿ ಪತನವಾಗಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)