ನ್ಯೂಸ್

ದೇಶ ವಿಭಜನೆ ಒಂದು ದುರಂತ ಅಧ್ಯಾಯ: ಪ್ರಧಾನಿ ಮೋದಿ| Narendra Modi

Narendra Modi: 1947 ಆಗಸ್ಟ್​ 14 ರಂದು ನಡೆದ ದೇಶ ವಿಭಜನೆಯು, ಇತಿಹಾಸದ ದುರಂತ ಅಧ್ಯಾಯ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ (ಆಗಸ್ಟ್​ 14) ಹೇಳಿದ್ದಾರೆ.

ದೇಶ ವಿಭಜನೆಯ ಸ್ಮರಣಾರ್ಥ ದಿನದ ಆಂಗವಾಗಿ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಪ್ರಧಾನಿ, ನಮ್ಮ ಇತಿಹಾಸದ ಆ ದುರಂತ ಅಧ್ಯಾಯದಲ್ಲಿ ಅಸಂಖ್ಯಾತ ಜನರು ಅನುಭವಿಸಿದ ದಂಗೆ ಮತ್ತು ನೋವನ್ನು ನೆನಪಿಸಿಕೊಳ್ಳುತ್ತಾ, ಭಾರತವು ವಿಭಜನೆಯ ಭಯಾನಕ ನೆನಪಿನ ದಿನವನ್ನು ಆಚರಿಸುತ್ತದೆ. ಇದು ಅವರ ಧೈರ್ಯವನ್ನು ಗೌರವಿಸುವ ದಿನವಾಗಿದೆ. ವಿಭಜನೆಯ ಸಂದರ್ಭದಲ್ಲಿ ಊಹಿಸಲಾಗದ ನಷ್ಟವನ್ನು ಅನುಭಾವಿಸಿದ ಅವರ ಸಾಮರ್ಥ್ಯವನ್ನು ಸ್ಮರಿಸಬೇಕು ಎಂದು ತಿಳಿಸಿದ್ದಾರೆ.

ದೇಶಕ್ಕೆ ಏಕತೆಯ ಸಂದೇಶವನ್ನು ನೀಡಿದ ಮೋದಿಯೂ, ದೇಶದಲ್ಲಿ ಸಾಮರಸ್ಯವನ್ನು ಬಲಪಡಿಸುವಂತೆ ಸಾರ್ವಜನಿಕರನ್ನು ಒತ್ತಾಯಿಸಿದರು. ವಿಭಜನೆಯು ನಮ್ಮ ದೇಶದ ಒಗಟ್ಟನ್ನು ಹಿಡಿದಿಟ್ಟುಕೊಳ್ಳಲು ಹಾಗೂ ಸಾಮರಸ್ಯದ ಸಂಬಂಧಗಳನ್ನು ಬಲಪಡಿಸುವ ನಿರಂತರ ಜವಾಬ್ದಾರಿ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂನಿಂದ ಜಾಮೀನು ರದ್ದು: ನಟ ದರ್ಶನ್ ಈಗ ಎಲ್ಲಿದ್ದಾರೆ? ಯಾವಾಗ ಶರಣಾಗ್ತಾರೆ? Darshan Bail Cancel ​

ದೇಶ ವಿಭಜನೆಯ ಸ್ಮರಣಾರ್ಥ ದಿನ

1947ರ ದೇಶ ವಿಭಜನೆಯ ಸಮಯದಲ್ಲಿ ಸ್ಥಳಾಂತರಗೊಂಡವರುಹಾಗೂ ಪ್ರಾಣ ಕಳೆದುಕೊಂಡ ಲಕ್ಷಾಂತರ ಜನರ ಹೋರಾಟಗಳು ಮತ್ತು ತ್ಯಾಗಗಳನ್ನು ಸ್ಮರಿಸಲು ಆಗಸ್ಟ್ 14 ರಂದು ಭಾರತವು ವಿಭಜನಾ ಭಯಾನಕ ನೆನಪಿನ ದಿನವನ್ನು ಆಚರಿಸುತ್ತದೆ.

ವಿಭಜನೆ ಸಂದರ್ಭದಲ್ಲಿ ನಡೆದ ಜನರ ಹೋರಾಟಗಳು ಮತ್ತು ತ್ಯಾಗಗಳ ಸ್ಮರಣಾರ್ಥ ಆಗಸ್ಟ್ 14 ಅನ್ನು ವಿಭಜನಾ ಭಯಾನಕ ಸ್ಮರಣ ದಿನ ಎಂದು ಆಚರಿಸಲಾಗುವುದು ಎಂದು 2021 ರಲ್ಲಿ ಪ್ರಧಾನಿ ಮೋದಿ ಘೋಷಿಸಿದ್ದರು.

1947 ರಲ್ಲಿ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಭಾರತ ವಿಭಜನೆಯಾದ ನಂತರ ಪಾಕಿಸ್ತಾನವು ಮುಸ್ಲಿಂ ರಾಷ್ಟ್ರವಾಗಿ ವಿಭಜನೆಯಾಯಿತು. ಲಕ್ಷಾಂತರ ಜನರು ಸ್ಥಳಾಂತರಗೊಂಡರು ಮತ್ತು ನಂತರದ ಕೋಮು ಹಿಂಸಾಚಾರದಲ್ಲಿ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದರು. (ಏಜೆನ್ಸೀಸ್​)