ಬೆಂಗಳೂರು: ಸೆಪ್ಟೆಂಬರ್ 21ರಿಂದ ಅನ್ವಯವಾಗುವಂತೆ 9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯುವುದಕ್ಕಾಗಿ ಸ್ವ ಇಚ್ಛೆಯ ಆಧಾರದ ಮೇಲೆ ತಮ್ಮ ಶಾಲೆಗಳಿಗೆ ಭೇಟಿ ನೀಡಲು ಅನುಮತಿಸಿದೆ.
ಈ ಸಂಬಂಧ ಪ್ರಮಾಣಿತ ಕಾರ್ಯವಿಧಾನ (ಎಸ್ ಒಪಿ) ಬಿಡುಗಡೆ ಮಾಡಿದ್ದು, ಮಕ್ಕಳ ತಂದೆ-ತಾಯಿ ಮತ್ತು ಪೋಷಕರ ಲಿಖಿತ ಅನುಮತಿಗೆ ಒಳಪಟ್ಟಿರುತ್ತದೆ.
ಇದಕ್ಕೆ ಸೆಪ್ಟೆಂಬರ್ 21ರಿಂದ ಜಾರಿಗೆ ಬರುವಂತೆ ಅನುಮತಿ ನೀಡಲಾಗುತ್ತದೆ. ಇದಕ್ಕಾಗಿ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗೆ ಮಾದರಿ ಕಾರ್ಯವಿಧಾನ ಹೊರಡಿಸಲಿದೆ.
- ಕ್ರೀಡೆ, ಗುಂಪು ಗೂಡುವುದು, ಇತರ ಚಟುವಟಿಕೆಗೆ ಕಡ್ಡಾಯ ನಿಷೇಧ.
- ಶಾಲೆ ಸ್ಯಾನಿಟೈಸ್ ಮಾಡಿರಬೇಕು
- ಕ್ವಾರಂಟೈನ್ ಕೇಂದ್ರಗಳಾಗಿದ್ದ ಶಾಲೆಗಳನ್ನು ಮಾರ್ಗಸೂಚಿ ಅನ್ವಯ ಸ್ವಚ್ಛಗೊಳಿಸುವುದು
- ಶೇಕಡ ಐವತ್ತರಷ್ಟು ಸಿಬ್ಬಂದಿ ಮಾತ್ರ ಬಳಸಬೇಕು
- ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಬಂದರೆ ಮಾತ್ರ ಮಾರ್ಗದರ್ಶನ ಪಡೆಯಬಹುದು.
- ಬಯೋಮೆಟ್ರಿಕ್ ಬಳಸುವಂತಿಲ್ಲ.
- ಶಾಲೆಯಲ್ಲಿ ವೈಯಕ್ತಿಕ ಅಂತರ ಕಾಯ್ದುಕೊಳ್ಳುವುದು.
- ಶಾಲೆಗಳು ಸ್ಥಳೀಯ ಆರೋಗ್ಯ ಕೇಂದ್ರದ ಹೆಲ್ಪ್ ಲೈನ್ ಪ್ರಕಟಿಸಬೇಕು
- ಗರ್ಭಿಣಿಯರು, ಹಿರಿಯ ಸಿಬ್ಬಂದಿಯನ್ನು ಶಾಲೆಯಲ್ಲಿ ವಿದ್ಯಾರ್ಥಿಗಳನೇರ ಸಂಪರ್ಕದ ಚಟುವಟಿಕೆಗೆ ಬಳಸಿಕೊಳ್ಳುವಂತಿಲ್ಲ.
- ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಕಡ್ಡಾಯ
- ಶಾಲಾ ಆಡಳಿತ ಮಂಡಳಿಗಳೇ ವಾಹನ ವ್ಯವಸ್ಥೆ ಮಾಡಿರಬೇಕು