ನ್ಯೂಸ್

ಕೇತುಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಸತ್ ಚುನಾವಣೆ

ತಿ.ನರಸೀಪುರ: ಶಾಲೆಗಳಲ್ಲಿಯೂ ಶೈಕ್ಷಣಿಕ ಕಾರ್ಯಕಲಾಪಗಳ ಚುರುಕುಗೊಳಿಸುವ ನಿಟ್ಟಿನಲ್ಲಿ ತಾಲೂಕಿನ ಕೇತುಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಶಾಲಾ ಸಂಸತ್ ಚುನಾವಣೆ ನಡೆಯಿತು.

ಪಠ್ಯೇತರ ಚಟುವಟಿಕೆಗಳ ಜತೆಗೆ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಚಯಿಸುವ ಉದ್ದೇಶದಿಂದ ಚುನಾವಣೆ ನಡೆಸಲಾಗಿ, ತರಗತಿವಾರು ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಒಟ್ಟು 14 ಮಂತ್ರಿ ಸ್ಥಾನಗಳಿಗೆ ಚುನಾವಣೆ ನಡೆಸಲಾಗಿ ವಿದ್ಯಾರ್ಥಿಗಳು ತರಗತಿವಾರು ಮತಯಾಚನೆ ನಡೆಸಿದರು.
ಒಟ್ಟು 118 ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಹಕ್ಕು ಚಲಾಯಿಸಿದರು. ಮತ ಎಣಿಕೆ ಪ್ರಕ್ರಿಯೆಯಲ್ಲಿ 113ಮತಗಳು ಸ್ವೀಕಾರಗೊಂಡು, 1 ನೋಟಾ ಮತ್ತು 4 ಕುಲಗೆಟ್ಟ ಮತಗಳು ಚಲಾವಣೆಗೊಂಡಿದ್ದವು.

ಆಯ್ಕೆಯಾದ ವಿದ್ಯಾರ್ಥಿಗಳ ಮತಗಳ ವಿವರ: ಎಂಟನೇ ತರಗತಿಯಿಂದ ಎಸ್.ಜಯಂತ್, 9ನೇ ತರಗತಿಯಿಂದ ಮನೋಜ್ ಗೌಡ, ಹತ್ತನೇ ತರಗತಿಯಿಂದ ಯಶೋದಾ 74 ಮತ ಪಡೆದು ಮಂತ್ರಿಮಂಡಲಕ್ಕೆ ಆಯ್ಕೆಯಾದರು. ಮುಖ್ಯ ಚುನಾವಣಾಧಿಕಾರಿಯಾಗಿ ಶಿಕ್ಷಕಿ ಸುಮಾ, ಮತಗಟ್ಟೆಯ ಅಧಿಕಾರಿಯಾಗಿ ಮುಖ್ಯಶಿಕ್ಷಕ ಹೇಮಚಂದ್ರ ಕಾರ್ಯನಿರ್ವಹಿಸಿದರು. ಶಿಕ್ಷಕರಾದ ಜಿ.ಗಿರೀಶ್ ಕುಮಾರ್, ಜೆ.ರೂಪಾ, ಸತೀಶ್ ಕುಮಾರ್, ಎಂ.ಸಿ.ಮಂಜುಳಾ, ಎಸ್.ನಾಗರಾಜು, ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವಕುಮಾರ್ ಕೇತುಪುರ, ಎಸ್‌ಡಿಎಂಸಿ ಸದಸ್ಯರು ಭಾಗವಹಿಸಿದ್ದರು.