Gaza: ಪ್ರಸ್ತುತ ಗಾಜಾದಲ್ಲಿನ ಪರಿಸ್ಥಿತಿ ಯಾರಿಗೂ ಬೇಡ. ರಕ್ತದ ಮಡುವಿನಲ್ಲಿ ಬಿದ್ದ ದೇಹಗಳು ಒಂದೆಡೆಯಾದರೆ, ಬದುಕಿಗಾಗಿ ಹೋರಾಟ ಮಾಡುತ್ತಿರುವ ಜೀವಗಳು ಮತ್ತೊಂದೆಡೆ. ಈ ಮಧ್ಯೆ ಇತ್ತೀಚೆಗಷ್ಟೇ ಜಾಲತಾಣಗಳಲ್ಲಿ ಹರಿದಾಡಿದ ತಂದೆ-ಮಗಳ ದೃಶ್ಯ ನೆಟ್ಟಿಗರ ಹೃದಯ ಹಿಂಡಿತು. ಕಾರಣ, 5 ರೂ. ಪಾರ್ಲೆ-ಜಿ ಬಿಸ್ಕತ್ ಪ್ಯಾಕೆಟ್‌ಗೆ ಬರೋಬ್ಬರಿ 2000 ರೂ. ಕೊಟ್ಟು ಮಗಳಿಗಾಗಿ ಖರೀದಿಸಿದ ತಂದೆ, ಅತ್ಯಂತ ಕಠಿಣ, ಶೋಚನೀಯ ಸ್ಥಿತಿಯಲ್ಲೂ ಪುತ್ರಿಯ ಆಸೆಗೆ ಅಣಿಯಾಗಿದ್ದು ಹಲವರ ಕಣ್ಣೀರಿಗೆ ಕಾರಣವಾಯಿತು.
ಇದನ್ನೂ ಓದಿ: ಈ ಅವಕಾಶದಿಂದಲೇ ದೀಪಿಕಾ, ಕತ್ರಿನಾ ರಾತ್ರೋ ರಾತ್ರಿ ಸ್ಟಾರ್ ಆಗಿದ್ದು! ವಿಜಯ್ ಮಲ್ಯ ಓಪನ್ ಟಾಕ್ | Vijay Mallya
ಭಾರತ ದೇಶದ ಪ್ರಸಿದ್ಧ ಹಾಗೂ ಬಹಳ ಹಳೆಯ ಬಿಸ್ಕತ್ ಸಂಸ್ಥೆ ಪಾರ್ಲೆ ಜಿ. ಶ್ರೀಮಂತರೇ ಇರಲಿ, ಬಡವರ ಇರಲಿ, ಈ ಬಿಸ್ಕತ್ತಿಗಾಗಿ ಆಸೆ ಪಡದವರಿಲ್ಲ. ಬಹುತೇಕ ಮಂದಿ ಇಂದಿಗೂ ಇದೊಂದು ಬಿಸ್ಕತ್ಗೆ ಹೆಚ್ಚು ಒಲವು ತೋರಿದ್ದಾರೆ. 5 ರೂ.ಗೆ ಕೈಗೆಟುಕುವ ದರದಲ್ಲಿ ಸಿಗುವ ಪಾರ್ಲೆ ಜಿ ಇಂದು ಬಹುತೇಕ ಮಧ್ಯಮ ವರ್ಗದ ಜನರ ಮನೆಯಲ್ಲಿ ಕಾಣಸಿಗುತ್ತವೆ. ಪಾರ್ಲೆ ಜಿ ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುವ ಬಿಸ್ಕತ್ತು ಬ್ರಾಂಡ್‌ಗಳಲ್ಲಿ ಒಂದು ಎಂಬುದು ಗಮನಾರ್ಹ. ಆದ್ರೆ, ಈ ಬಿಸ್ಕತ್ತಿಗೂ ಸಹ ಇಷ್ಟೊಂದು ಬೇಡಿಕೆ ಹಾಗೂ ದುಬಾರಿ ಏಕೆ ಎಂಬ ಪ್ರಶ್ನೆ ಜನರಲ್ಲಿ ಕಾಡತೊಡಗಿದೆ.
ಭಾರತದಲ್ಲಿ ಕೇವಲ 5 ರೂ.ಗೆ ಲಭ್ಯವಿರುವ ಈ ಬಿಸ್ಕತ್ ಯುದ್ಧಪೀಡಿತ ಗಾಜಾದಲ್ಲಿ ದುಬಾರಿ ವಸ್ತುವಾಗಿ ಮಾರ್ಪಟ್ಟಿದೆ. 5 ರೂ. ಬಿಸ್ಕತ್ ಪ್ಯಾಕ್ ಗಾಜಾದಲ್ಲಿ ಈಗ 2,300 ರೂ.ಗೂ ಅಧಿಕ ಬೆಲೆಗೆ ಮಾರಾಟವಾಗುತ್ತಿದೆ. ಅಸಲಿಗೆ ಇದು ಸಹಾಯದ ಹೆಸರಿನಲ್ಲಿ ಬಂದಿರುವ ಆಹಾರ ಪೂರೈಕೆಯಾದರೂ ಅಲ್ಲಿನ ಕಿರಾತಕರು ತಿನ್ನುವ ಆಹಾರವನ್ನೂ ಸಹ ಹಣದ ದಾಹಕ್ಕೆ ಮಾರಿಕೊಂಡಿರುವುದು ತೀರ ದುಃಖಕರ.
ಇದನ್ನೂ ಓದಿ: ಹಾಲು ಒಕ್ಕೂಟದ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ / ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತುಗಳು / ಜೂ.೨೫ ರಂದು ಚುನಾವಣೆ
ಜಾವೇದ್ ತಮ್ಮ ಕಿರಿಯ ಮಗಳು ಪಾರ್ಲೆ-ಜಿ ಬಿಸ್ಕತ್ಗಳ ಪ್ಯಾಕೆಟ್ ಹಿಡಿದಿರುವ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. "ನನ್ನ ಕಿರಿಯ ಮಗಳು ಈ ಬಿಸ್ಕತ್ತುಗಳನ್ನು ಬಹಳ ಇಷ್ಟಪಡುತ್ತಾಳೆ. ಅದಕ್ಕಾಗಿಯೇ ನಾನು ಈ ಸಣ್ಣ ಪ್ಯಾಕೆಟ್‌ಗೆ ಬರೋಬ್ಬರಿ 2,342 ರೂ.ಗೂ ಹೆಚ್ಚು ಹಣವನ್ನು ಕೊಟ್ಟು ಖರೀದಿಸಿದ್ದೇನೆ. ಬೆಲೆ ಏರಿಕೆಯ ಹೊರತಾಗಿಯೂ, ನನ್ನ ಮಗಳ ನೆಚ್ಚಿನ ಬಿಸ್ಕತ್ ಅನ್ನು ಕೊಡಿಸದಿರಲು ನನ್ನಿಂದ ಸಾಧ್ಯವಾಗಲಿಲ್ಲ" ಎಂದು ಮಗುವಿನ ತಂದೆ ಜಾವೇದ್ ಹೇಳಿರುವುದು ಕಣ್ಣಂಚಲಿ ನೀರು ತರಿಸುತ್ತದೆ. ಇದು ಗಾಜಾದಲ್ಲಿನ ತೀವ್ರ ಆಹಾರ ಬಿಕ್ಕಟ್ಟಿನ ಪ್ರತಿಬಿಂಬವಾಗಿದ್ದೇ ಆದರೂ ಕೆಲವರು ದುಬಾರಿ ಹಣಕ್ಕೆ ಮಾರಾಟ ಮಾಡುತ್ತಿರುವುದು ರಕ್ತ ಕುದಿಯುವಂತೆ ಮಾಡುತ್ತಿದೆ.
ವಾಸ್ತವವಾಗಿ, ಮಾನವೀಯತೆಯ ಸೂಚಕವಾಗಿ ಭಾರತವು ಪಾರ್ಲೆ ಜಿ ಬಿಸ್ಕತ್ತುಗಳನ್ನು ಪ್ಯಾಲೆಸ್ಟೀನಿಯನ್ನರಿಗೆ ಉಚಿತವಾಗಿ ಕಳುಹಿಸಿಕೊಟ್ಟಿದೆ. ಆದರೆ, ನೆರವಿನ ಟ್ರಕ್‌ಗಳನ್ನು ಹಮಾಸ್ ವಶಪಡಿಸಿಕೊಂಡಿದ್ದು, ಹಸಿದ ಪ್ಯಾಲೆಸ್ಟೀನಿಯನ್ನರಿಗೆ ಆಹಾರ ಮತ್ತು ಔಷಧಿಗಳನ್ನು ಬ್ಲ್ಯಾಕ್ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಬಂದಿರುವ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿರುವುದಾಗಿ ಒಂದಷ್ಟು ವರದಿಗಳು ತಿಳಿಸಿವೆ. ಈ ಕುರಿತು ಸ್ವತಃ ಜಾವೇದ್ ಕೂಡ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ವಿಶ್ವಸಂಸ್ಥೆಯ ವರದಿಯ ಪ್ರಕಾರ, ಗಾಜಾದಲ್ಲಿ ಐದು ವರ್ಷದೊಳಗಿನ ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆಯ ಪ್ರಮಾಣ ಕಾಡುತ್ತಿದೆ. ಇದು ಈ ವರ್ಷದ ಫೆಬ್ರವರಿಯಿಂದ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಮೇ ಅಂತ್ಯದಲ್ಲಿ, ಸುಮಾರು 50,000 ಮಕ್ಕಳಲ್ಲಿ 5.8 ಪ್ರತಿಶತ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆಹಾರದ ಹುಡುಕಾಟದಲ್ಲೇ ಹೆಚ್ಚಿನ ಸಂಖ್ಯೆಯ ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಗಾಜಾದಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಲು ತಮ್ಮದೇ ಆದ ರಕ್ತವನ್ನು ದಾನ ಮಾಡುತ್ತಿದ್ದಾರೆ ಎಂದು ಅಂತರರಾಷ್ಟ್ರೀಯ ವೈದ್ಯಕೀಯ ದತ್ತಿ ಸಂಸ್ಥೆ ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ (MSF) ಹೇಳಿದೆ,(ಏಜೆನ್ಸೀಸ್).