ಕೋಲಾರ: ಜಿಲ್ಲೆಯ ನಗರ, ಪುರಸಭೆ ಹಾಗೂ ಪಟ್ಟಣ ಭಾಗದಲ್ಲಿರುವ ಉದ್ಯಾವನಗಳು ನಿರ್ವಹಣೆಯಿಲ್ಲದೆ ಸೊರಗುತ್ತಿವೆ. ಆಟೋಪಕರಣಗಳು ಹದಗೆಟ್ಟು ಅಪಾಯದ ಸೂಚನೆ ನೀಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಮೌನಕ್ಕೆ ಜಾರಿದ್ದಾರೆ.
ನಗರ, ಪುರಸಭೆ ಹಾಗೂ ಗ್ರಾಮೀಣ ಭಾಗದ ಉದ್ಯಾನವಗಳು ಅವ್ಯವಸ್ಥೆಗಳ ಆಗರವಾಗಿ ರೂಪುಗೊಂಡಿವೆ. ವಿವಿಧ ಯೋಜನೆಯ ಅನುದಾನದಡಿ ಅಳವಡಿಸಿರುವ ಆಟೋಪಕರಣಗಳು ಹಾನಿಯಾಗಿದ್ದು, ಮಕ್ಕಳು ಆಟವಾಡಲು ಯೋಗ್ಯವಲ್ಲದ ರೀತಿಯಲ್ಲಿವೆ. ಇದಕ್ಕೆ ಸ್ಥಳಿಯಾಡಳಿತದ ರ್ನಿಲಕ್ಷ$್ಯವೇ ಉದ್ಯಾನವನಗಳು ಹಾಳಾಗಲು ಕಾರಣ ಎನ್ನಲಾಗಿದೆ.
ಜಿಲ್ಲೆಯಲ್ಲಿ ಕೋಲಾರ, ಮುಳಬಾಗಿಲು, ಕೆಜಿಎ್ ನಗರಸಭೆ, ಮಾಲೂರು, ಶ್ರೀನಿವಾಸಪುರ, ಬಂಗಾರಪೇಟೆ ಪುರಸಭೆ ಹಾಗೂ ಕುರಗಲ್&ವೇಮಗಲ್ ಪಟ್ಟಣ ಪಂಚಾಯಿತಿಗಳು ಇವೆ. ಜಿಲ್ಲಾ ಕೇಂದ್ರ ಕೋಲಾರ ಸೇರಿ ತಾಲೂಕು ಕೇಂದ್ರಗಳಲ್ಲಿರುವ ಬಹುತೇಕ ಉದ್ಯಾನವನಗಳು ಉಪಯೋಗಕ್ಕೆ ಯೋಗ್ಯವಲ್ಲದಂತಾಗಿವೆ. ಇದರ ಪರಿಣಾಮ ಜನತೆ ಪಾರ್ಕ್ಗಳಿಗೆ ಹೋಗಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಸೌಂದರ್ಯ ಹೆಚ್ಚಿಸಲು ಉದ್ಯಾನವನಗಳು ಪ್ರಮುಖ ಪಾತ್ರವಹಿಸುತ್ತವೆ. ಅಂತೆಯೇ, ಪಾರ್ಕ್ಗಳಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಸಿ ಸಾರ್ವಜನಿಕರಿಗೆ ವಿಶ್ರಾಂತಿ, ಮಕ್ಕಳಿಗಾಗಿ ಆಟೋಪಕರಣ, ವಾಯು ವಿಹಾರಕ್ಕೆ ಬರುವವರಿಗೆ ಮಲ್ಟಿ ಜಿಮ್ ಉಪಕರಣ ಅಳವಡಿಸಲಾಗಿದೆ. ಆದರೆ ಸ್ಥಳಿಯ ಸಂಸ್ಥೆಗಳ ರ್ನಿಲಕ್ಷ$್ಯಕ್ಕೆ ಒಳಗಾಗಿ ಎಲ್ಲವೂ ಹಾನಿಗೀಡಾಗಿದ್ದು, ಈಗ ಪುಂಡ ಪೋಕರಿಗಳಿಗೆ ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ.
ಉದ್ಯಾನವನಗಳ ನಿರ್ವಹಣೆಗಾಗಿ ಸ್ಥಳಿಯ ಸಂಸ್ಥೆಗಳಿಂದ ಪ್ರತ್ಯೇಕ ಗಾರ್ಡನ್, ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಆದರೆ ಸಂಬಳ ನೀಡದ ಕಾರಣ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇನ್ನು ಪೌರಕಾರ್ಮಿಕರು ವಾರಕ್ಕೆ ಒಂದೆರಡು ದಿನ ಸ್ವಚ್ಛತೆ ಮಾಡುವುದು ಬಿಟ್ಟರೆ ನಿರ್ವಹಣೆ ಮಾಡುವವರೇ ಇಲ್ಲ. ಸುತ್ತಮುತ್ತಲಿನ ನಿವಾಸಿಗಳು ಪಾರ್ಕ್ಗಳ ಸಮೀಪವೇ ಕಸದ ರಾಶಿ ಹಾಕುತ್ತಾರೆ. ನಾಯಿಗಳು ತ್ಯಾಜ್ಯವನ್ನು ತಂದು ಪಾರ್ಕ್ನಲ್ಲಿ ಹಾಕುವ ಪರಿಣಾಮ ಅನೈರ್ಮಲ್ಯ ಸೃಷ್ಟಿಯಾಗಿದೆ.
ಕೋಟ್…
ಕೋಲಾರ ನಗರ ವ್ಯಾಪ್ತಿ ದಿನೇದಿನೆ ಬೆಳೆಯುತ್ತಿದ್ದು, ಪ್ರಮುಖ ಪಾರ್ಕ್ಗಳನ್ನು ಇರುವ ಸಿಬ್ಬಂದಿಯಿಂದಲೇ ಸ್ವಚ್ಛ ಮಾಡಿಸಲಾಗುತ್ತಿದೆ. ಹಾಳಾಗಿರುವ ಆಟೋಪಕರಣ ದುರಸ್ತಿ ಮಾಡಿಸಲು ಕ್ರಮವಹಿಸಲಾಗುವುದು.- ಶಿವಾನಂದ, ಕೋಲಾರ ನಗರಸಭೆ ಪೌರಾಯುಕ್ತ
ಕೋಟ್….
ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳಿಗೆ ಉದ್ಯಾನವನಗಳ ಬಗ್ಗೆ ಕಾಳಜಿಯಿಲ್ಲದಂತೆ ಕಾಣುತ್ತಿದೆ. ಮಳೆಗಾಲ ಶುರುವಾಗಿದ್ದು, ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಸಾಂಕ್ರಾಮಿಕ ರೋಗ ತಡೆಗಟ್ಟಬಹುದು. ಪಾರ್ಕ್ಗೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚ ವ್ಯವಸ್ಥೆ ಮಾಡಬೇಕು. - ನಾಗೇಶ್, ಕೋಲಾರ.