ನ್ಯೂಸ್

ವಿಳಾಸ ಕೇಳುವ ನೆಪದಲ್ಲಿ ಮಾಂಗಲ್ಯ ಸರ ದರೋಡೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ವೃದ್ಧೆಯೊಬ್ಬರು ಮನೆಯ ಅಂಗಳದಲ್ಲಿ ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ವಿಳಾಸ ಕೇಳುವ ನೆಪದಲ್ಲಿ ಗೇಟು ತೆರೆದು ಒಳಗೆ ಬಂದ ವ್ಯಕ್ತಿ 3 ಲಕ್ಷ ಮೌಲ್ಯದ ಚಿನ್ನದ ಸರ ಸೆಳೆದುಕೊಂಡು ಪರಾರಿಯಾಗಿದ್ದಾನೆ.

ಪರ್ಕಳ ಹೆರ್ಗ ಶೆಟ್ಟಿಬೆಟ್ಟು ನಿವಾಸಿ ಶಾರಾದಾ ಪಾಟೀಲ್(80 ವರ್ಷ) ಶನಿವಾರ ಮುಸ್ಸಂಜೆ ವೇಳೆಗೆ ಮನೆಯಂಗಳದಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಇಬ್ಬರು ಅಪರಿಚಿತ ಗಂಡರು ಬೈಕ್‌ನಲ್ಲಿ ಬಂದು, ಹಿಂಬದಿಯಲ್ಲಿ ಕುಳಿತ್ತಿದ್ದ ವ್ಯಕ್ತಿ ಮನೆಯ ಗೇಟನ್ನು ತೆರೆದು ಒಳಗೆ ಬಂದು ಸದಾನಂದ ಮೇಸ್ತ್ರಿಯವರ ಮನೆಯ ವಿಳಾಸವನ್ನು ಕೇಳಿದ್ದರು. ಈ ಬಗ್ಗೆ ಗೊತ್ತಿಲ್ಲ ಎಂದು ಹೇಳಿ ಹಿಂತಿರುಗಿ ಮನೆ ಕಡೆ ಹೋಗುವಾಗ ಅದೇ ವ್ಯಕ್ತಿ ಹಿಂದಿನಿಂದ ಬಂದು ಶಾರದಾ ಅವರ ಬಾಯಿಯನ್ನು ಕೈಯಿಂದ ಒತ್ತಿ ಹಿಡಿದ್ದು ಕೊರಳಲ್ಲಿದ್ದ ಸುಮಾರು 6 ಪವನ್ ತೂಕದ ಚಿನ್ನ ಸರವನ್ನು ತೆಗೆದುಕೊಂಡು ಪಕ್ಕದಲ್ಲಿ ನಿಲ್ಲಿಸಿದ್ದ ಬೈಕಿನಲ್ಲಿ ಪರಾರಿಯಾಗಿದ್ದಾನೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.