filter: 0; fileterIntensity: 0.0; filterMask: 0; module: photo; hw-remosaic: false; touch: (-1.0, -1.0); modeInfo: ; sceneMode: 8; cct_value: 0; AI_Scene: (-1, -1); aec_lux: 308.21713; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: -1; weatherinfo: null; temperature: 42; 
ನ್ಯೂಸ್

ವಿಧಾನಪರಿಷತ್ತಿನ ಚುನಾವಣೆಗೆ ಮತಯಾಚನೆ

ಎ. ಆರ್. ರಘುರಾಮ


ಎಚ್.ಡಿ. ಕೋಟೆ: ಮಕ್ಕಳ ಸಮಗ್ರ ವಿಕಸನಕ್ಕೆ ಶಿಕ್ಷಣ ನೀಡುತ್ತಿರುವ ಶಿಕ್ಷಕರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ಪಟ್ಟಣದ ವಿವಿಧ ಕಾಲೇಜುಗಳಲ್ಲಿ ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮರಿತಿಬ್ಬೇಗೌಡರ ಪರವಾಗಿ ಶನಿವಾರ ಮತಯಾಚನೆ ಮಾಡಿ ಅವರು ಮಾತನಾಡಿದರು.
ನನ್ನ ಕ್ಷೇತ್ರದಲ್ಲಿ ಯಾವ ಶಿಕ್ಷಕರಿಗೂ ಅನ್ಯಾಯವಾಗದಂತೆ ನಾನು ನಡೆದುಕೊಂಡಿದ್ದೇನೆ. 4 ಕೋಟಿ ರೂ. ಅನುದಾನ ತಂದು ಈ ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮುಂದಿನ ದಿನಗಳಲ್ಲೂ ಕಾಲೇಜಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಲು ಪ್ರಯತ್ನಿಸಲಾಗುವುದು ಎಂದರು.
ಶಿಕ್ಷಕರಿಗೆ ತೊಂದರೆಯಾದಾಗ ಸದನದಲ್ಲಿ ಮರಿತಿಬ್ಬೇಗೌಡ ದನಿ ಎತ್ತಿದ್ದಾರೆ. ಶಿಕ್ಷಕರು ಸಮಸ್ಯೆ ಪರಿಹಾರವಾಗುವವರೆಗೂ ಹೋರಾಟ ನಡೆಸಿದ್ದಾರೆ. ಹಾಗಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಎಂದು ವಿನಂತಿಸಿದರು.
ಇದೇ ವೇಳೆ ಪಟ್ಟಣದ ಸರ್ಕಾರಿ ಪದವಿ ಕಾಲೇಜು, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ, ಸೇಂಟ್ ಮೇರಿಸ್ ಪ್ರೌಢಶಾಲೆ, ವಿಶ್ವಭಾರತಿ ಶಾಲೆ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಅವರು ಮತಯಾಚನೆ ಮಾಡಿದರು.
ಪುರಸಭಾ ಸದಸ್ಯರಾದ ಎಚ್.ಸಿ. ನರಸಿಂಹಮೂರ್ತಿ, ನರಸೀಪುರ ರವಿ, ಮೈಮುಲ್ ನಿರ್ದೇಶಕ ಈರೇಗೌಡ, ಮುಖಂಡರಾದ ಶಿವರಾಜು, ಸಿದ್ದರಾಮು, ಗಣೇಶಾಚಾರ್, ಪದವಿ ಕಾಲೇಜಿನ ಪ್ರಾಂಶುಪಾಲ ಅರುಣ್ ಕುಮಾರ, ಆದಿ ಚುಂಚನಗಿರಿ ಪದವಿ ಪೂರ್ವ ಕಾಲೇಜು ಮುಖ್ಯ ಶಿಕ್ಷಕಿ ನಂದಿನಿ, ಉಪನ್ಯಾಸಕರಾದ ಕೆಂಪರಾಜು, ಪುಟ್ಟರಾಜು, ಪುಷ್ಪಲತಾ, ಗುರುದತ್ತ ಕಾಮತ್, ಪೂರ್ಣಿಮಾ, ಮಾದಮ್ಮ, ಶಿಕ್ಷಕರಾದ ಕೈಸರ್ ಪಾಷ, ರಾಜೇಗೌಡ, ಸಂತೋಷ ಕುಮಾರ, ಎ.ಸಿ. ಭೈರಪ್ಪ, ಸ್ವಾಮಿನಾಯಕ ಇದ್ದರು.