ಮುಂಬೈ: ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಸೆಪ್ಟೆಂಬರ್ 24 ರಂದು ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಪರಿಣೀತಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ಮುದವೆಯ ಲುಕ್ ನೋಡಲು ಕಾಯುತ್ತಿದ್ದರು. ಏತನ್ಮಧ್ಯೆ, ಜನರ ಕಾಯುವಿಕೆಯನ್ನು ಕೊನೆಗೊಳಿಸಿದ ನಟಿ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮದುವೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.
ರಾಘವ್ ಮತ್ತು ಪರಿಣೀತಿ ಅವರ ಮದುವೆಯ ಚಿತ್ರಗಳು ಹೊರಬಂದ ತಕ್ಷಣ, ಎಲ್ಲರೂ ನಟಿಯ ಮದುವೆಯ ಲುಕ್ ಬಗ್ಗೆ ಮಾತನಾಡುತ್ತಿದ್ದಾರೆ. ನಟಿಯ ಮದುವೆಯ ಲುಕ್ ಸುಂದರವಾಗಿರುವುದಲ್ಲದೆ, ಸಾಕಷ್ಟು ವಿಶೇಷವಾಗಿದೆ. ಅಂದಹಾಗೆ ಪರಿಣೀತಿಯ ಮದುವೆ ಸಮಯದಲ್ಲಿ ಧರಿಸಿದ್ದ ಲೆಹೆಂಗಾದ ವಿಶೇಷತೆ ಏನು ಎಂದು ತಿಳಿಯೋಣ...
ಪರಿಣೀತಿ ಅವರ ದಂತ ಬಣ್ಣದ ಗೋಲ್ಡ್ ಶೇಡ್ ಲೆಹೆಂಗಾ ಅವರಿಗೆ ತುಂಬಾ ಸರಳವಾಗಿ ಕ್ಲಾಸಿಯಾಗಿ ಕಾಣುತ್ತಿತ್ತು. ಮನೀಶ್ ಮಲ್ಹೋತ್ರಾ ಅವರ ಈ ಡಿಸೈನರ್ ಲೆಹೆಂಗಾದಲ್ಲಿ ಪರಿ ನಿಜವಾಗಿಯೂ ಸುಂದರವಾಗಿ ಕಾಣುತ್ತಿದ್ದರು. ವಿಶೇಷವೆಂದರೆ ಈ ಲೆಹೆಂಗಾ ತಯಾರಿಸಲು ಸುಮಾರು 104 ದಿನಗಳು ಬೇಕಾಯಿತು. ಟೋನಲ್ ಎಕ್ರು ಬೇಸ್‌ನಿಂದ ತಯಾರಿಸಲಾದ ಈ ಲೆಹೆಂಗಾ ಹ್ಯಾಂಡ್ ವರ್ಕ್ ಕೆಲಸ ಹೆಚ್ಚಿತ್ತು. ದುಪ್ಪಟ್ಟಾ ಕೆಳ ಭಾಗ ಟ್ಯೂಲ್ ಫ್ಯಾಬ್ರಿಕ್‌ನಿಂದ ಕೂಡಿದ್ದರೆ, ಅಂಚಿನಲ್ಲಿ ಮಿನುಗು ಮತ್ತು ಮುತ್ತುಗಳಿವೆ.
ಪರಿಣೀತಿ ಚೋಪ್ರಾ ಅವರ ಆಭರಣಗಳನ್ನು ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ್ದಾರೆ. ಆಕೆಯ ಮದುವೆಗೆ, ಅವರು ಜಾಂಬಿಯನ್ ಮತ್ತು ರಷ್ಯನ್ ಪಚ್ಚೆಗಳಿಂದ ಕೂಡಿದ ಬಹುಪದರದ ಕತ್ತರಿಸದ ವಜ್ರದ ನೆಕ್ಲೇಸ್ ಅನ್ನು ಆಯ್ಕೆ ಮಾಡಿದರು. ಇದರೊಂದಿಗೆ, ಪರಿಣೀತಿ ಮಾಂಗ್ ಟಿಕ್ಕಾ, ಹಾತ್ ಫೂಲ್ ಮತ್ತು ಕಿವಿಯೋಲೆಗಳನ್ನು ಧರಿಸಿದ್ದರು, ಅದು ಅವರ ವಧುವಿನ ನೋಟವನ್ನು ಪೂರ್ಣಗೊಳಿಸಿದೆ. ಸಾಂಪ್ರದಾಯಿಕ ಪಂಜಾಬಿ ವಧುವಿನಂತೆ ಕಂಗೊಳಿಸುತ್ತಿದ್ದ ಪರಿಣೀತಿ ಕಸ್ಟಮೈಸ್ ಮಾಡಿದ ಕಲಿರೆಯನ್ನು ಧರಿಸಿದ್ದರು.
ಹೀಗಿತ್ತು ಮೇಕಪ್...
ಪರಿಣೀತಿ ಗ್ಲಾಮ್ ಲುಕ್‌ಗಾಗಿ ನ್ಯೂಡ್ ಶೇಡ್ ಐಶ್ಯಾಡೋ ಮತ್ತು ಲಿಪ್‌ಸ್ಟಿಕ್ ಹಚ್ಚಿದ್ದು, ಉದ್ದನೆಯ ಕಣ್ರೆಪ್ಪೆಗಳು ಮತ್ತು ಪೀಚ್ ಬ್ಲಶ್ ಮೇಕಪ್ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ನೀವೂ ವಿಶೇಷ ದಿನದಂದು ಹೆಚ್ಚು ಮೇಕಪ್ ಮಾಡಲು ಬಯಸದಿದ್ದರೆ, ಈ ನ್ಯೂಡ್ ಮೇಕಪ್ ಉತ್ತಮ ಆಯ್ಕೆಯಾಗಿದೆ.
ಪರಿಣೀತಿ ತನ್ನ ಕೈ ಮತ್ತು ಪಾದಗಳಿಗೆ ಸಿಂಪಲ್ ಮೆಹೆಂದಿ ವಿನ್ಯಾಸಗಳನ್ನು ಆರಿಸಿಕೊಂಡರು. ಇದಕ್ಕೂ ಮೊದಲು, ಆಲಿಯಾ ಮತ್ತು ಕಿಯಾರಾ ತಮ್ಮ ಮದುವೆಗೆ ಸಿಂಪಲ್ ಮೆಹೆಂದಿಯನ್ನು ಹಾಕಿದ್ದರು.
ಪರಿಣೀತಿ ಅಲೆಅಲೆಯಾದ ಓಪನ್ ಕೂದಲಿನೊಂದಿಗೆ ಸರಳವಾಗಿ ಕಾಣುತ್ತಿದ್ದರು. ಯಾವುದೇ ಕೂದಲ ಪರಿಕರಗಳನ್ನು ಬಳಸಿರಲಿಲ್ಲ.