ಮುಂಬೈ: ಪರಿಣೀತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಉದಯಪುರದ 'ದಿ ಲೀಲಾ ಪ್ಯಾಲೇಸ್'ನಲ್ಲಿ ಸೆ.24 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪರಿಣೀತಿ ಮದುವೆಯ ನಂತರ, ಅವರ ಮದುವೆ ಕಾರ್ಯಕ್ರಮದ ಅನೇಕ ವಿಡಿಯೋಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ರಾಘವ್ ಚಡ್ಡಾ ಅವರ ನೃತ್ಯದಿಂದ ಹಿಡಿದು ಪರಿಣೀತಿ ಅವರ ತಂದೆ ಮಾಡಿದ ಆಚರಣೆಗಳವರೆಗೆ ಅನೇಕ ಸುಂದರವಾದ ವಿಡಿಯೋಗಳು ವೈರಲ್ ಆಗಿವೆ. ಏತನ್ಮಧ್ಯೆ, ಮದುವೆಯ ಸಮಯದಲ್ಲಿ ಪರಿಣೀತಿ ತನ್ನ ಪತಿ ರಾಘವ್ ಚಡ್ಡಾಗೆ ಅನೇಕ ಸರ್ಪ್ರೈಸ್ ನೀಡಿದ್ದಾರೆ. ಇದನ್ನು ಕೇಳಿದ ನಂತರ ಅಭಿಮಾನಿಗಳು ಕೂಡ ನಟಿಯ ಮೇಲೆ ಸಾಕಷ್ಟು ಪ್ರೀತಿ ವ್ಯಕ್ತಪಡಿಸಿದ್ದಾರೆ.
ಪರಿಣೀತಿ ಅವರು ತಮ್ಮ ಮದುವೆಯ ಉಂಗುರದ ಮೇಲೆ ಪತಿ ರಾಘವ್ ಚಡ್ಡಾ ಅವರ ಹೆಸರನ್ನು ಹಾಕಿಸಿಕೊಂಡಿದ್ದಾರೆ. ಇದಲ್ಲದೇ ತಮ್ಮ ಮತ್ತು ರಾಘವ್ ಚಡ್ಡಾ ಅವರ ಪ್ರೇಮದ ಕಥೆಯನ್ನೂ ಅವರು ಹಾಡಿನ ರೂಪದಲ್ಲಿ ಹೇಳಿದ್ದಾರೆ. ಪರಿಣೀತಿ ಉತ್ತಮ ನಟಿ ಮಾತ್ರವಲ್ಲದೆ, ಅತ್ಯುತ್ತಮ ಗಾಯಕಿ ಕೂಡ ಆಗಿದ್ದಾರೆ. ಅವರು ತಮ್ಮ ಮದುವೆಯಲ್ಲೂ ತಮ್ಮ ಗಾಯನ ಕೌಶಲ ತೋರಿಸಿದ್ದಾರೆ.
ವರದಿಗಳ ಪ್ರಕಾರ, ರಾಘವ್-ಪರಿಣೀತಿ ಅವರ ಮದುವೆಯಲ್ಲಿ ಬ್ಯಾಕ್ಗ್ರೌಂಡ್ನಲ್ಲಿ ಪ್ಲೇ ಮಾಡಿದ 'ಓ ಪಿಯಾ' ಹಾಡನ್ನು ಪರಿಣೀತಿ ಅವರದೇ ಧ್ವನಿಯಲ್ಲಿ ಹಾಡಿದ್ದಾರೆ. ಪರಿಣೀತಿ ತಮ್ಮ ಮದುವೆಗಾಗಿ ವಿಶೇಷವಾಗಿ ಈ ಹಾಡನ್ನು ಸಿದ್ಧಪಡಿಸಿದ್ದರು.
ಈ ಹಾಡನ್ನು ಗೌರವ್ ದತ್ತಾ ಸಂಯೋಜಿಸಿದ್ದಾರೆ, ಅದರ ಸಾಹಿತ್ಯವನ್ನು ಸನ್ನಿ ಎಂಆರ್, ಹರ್ಜೋತ್ ಸಿಂಗ್ ಮತ್ತು ಗೌರವ್ ಬರೆದಿದ್ದಾರೆ. ಈ ಹಾಡು ಹಿಂದಿ ಮತ್ತು ಪಂಜಾಬಿ ಸಾಹಿತ್ಯವನ್ನು ಹೊಂದಿದ್ದು, ಅದರ ಮೂಲಕ ಪರಿಣೀತಿ ರಾಘವ್ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಪರಿಣೀತಿ-ರಾಘವ್ ಆರತಕ್ಷತೆ ಈ ಹಾಡು ಕೇಳಿ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ನಟಿಯ ಧ್ವನಿಯನ್ನು ಹೊಗಳಿ ಹೊಗಳಿ ಸುಸ್ತಾಗಿದ್ದಾರೆ. ಪರಿಣೀತಿ ಅವರ ಸುಂದರ ಧ್ವನಿಯಿಂದ ಪ್ರಭಾವಿತರಾಗಿದ್ದಾರೆ. ಪರಿಣೀತಿ ಮತ್ತು ರಾಘವ್ ಚಡ್ಡಾ ಅವರ ಮದುವೆಯ ನಂತರ, ಅವರ ಆರತಕ್ಷತೆ ಪಾರ್ಟಿಯು ಚಂಡೀಗಢದಲ್ಲಿ ನಡೆಯಲಿದೆ. ಅಷ್ಟೇ ಅಲ್ಲ, ಅವರು ದೆಹಲಿಯಲ್ಲಿ ರಾಜಕಾರಣಿಗಳಿಗೆ ಮತ್ತು ಮುಂಬೈನಲ್ಲಿ ಮನರಂಜನಾ ಉದ್ಯಮದ ಸ್ನೇಹಿತರಿಗಾಗಿ ಆರತಕ್ಷತೆಯನ್ನು ಆಯೋಜಿಸಲಿದ್ದಾರೆ.