ಒಡಿಶಾ : (Parents sell Baby )ವ್ಯಕ್ತಿಯೊಬ್ಬ ಬೈಕ್ ಖರೀದಿಸಲು ಹಣದಾಸೆಗೆ ತನ್ನದೇ 9 ದಿನದ ಕಂದಮ್ಮನನ್ನು 60 ಸಾವಿರ ರೂಪಾಯಿಗೆ ಮಾರಿಕೊಂಡಿದ್ದಾನೆ. ಈ ಘಟನೆ ಬಾಲಸೋರ್ ಜಿಲ್ಲೆಯ ಬಸ್ತಾ ಪ್ರದೇಶದಲ್ಲಿ ನಡೆದಿದೆ.
ಇತ್ತೀಚೆಗೆ ಶಾಂತಿ ಬೆಹೆರಾ ಎಂಬುವವರು ಪಿಆರ್ಎಂ ಮೆಡಿಕಲ್ ಕಾಲೇಜ್ ಬರೀಪಾದದಲ್ಲಿ ಡಿಸೆಂಬರ್ 9 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ದಂಪತಿ ಬೈಕ್ ಖರೀದಿಸಲು ತಮ್ಮ ಒಂಬತ್ತು ದಿನದ ನವಜಾತ ಶಿಶುವನ್ನು 60 ಸಾವಿರಕ್ಕೆ ಮಾರಾಟ ಮಾಡಿದ್ದಾರೆ. ಬೈಕ್ ತೆಗೆದುಕೊಂಡು ಏಕಾಏಕಿ ಸುತ್ತಾಡುತ್ತಿರುವುದನ್ನು ಕಂಡು ಅನುಮಾನಗೊಂಡ ಸ್ಥಳೀಯರು, ಈತನ ವಿರುದ್ಧ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದಾರೆ.
ಈ ಅಕ್ರಮದ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಮಗುವನ್ನು ಸಾಕಲು ಸಾಧ್ಯವಾಗದ ಕಾರಣ ಮಗುವನ್ನು ದಾನ ಮಾಡಿರುವುದಾಗಿ ಆರೋಪಿ ದಂಪತಿ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಪೋಷಕರು ತಮ್ಮ ಮಗುವನ್ನು ಮಯೂರ್‌ಭಂಜ್ ಜಿಲ್ಲೆಯ ಉಡಾಲಾದ ಸಂಕುಲ ಗ್ರಾಮದ ಮಕ್ಕಳಿಲ್ಲದ ದಂಪತಿಗೆ 60,000 ರೂ.ಗೆ ಮಾರಾಟ ಮಾಡಿದ್ದಾರೆ. ಆ ಹಣದಲ್ಲಿ ಬೈಕ್ ಖರೀದಿಗೆ ಬಳಸಲಾಗಿದೆ. ಆದರೆ, ಈ ಆರೋಪಗಳನ್ನು ತಳ್ಳಿಹಾಕಿದ ದಂಪತಿ ಬಡತನದಿಂದ ಮಗುವನ್ನು ಸಾಕಲು ಸಾಧ್ಯವಿಲ್ಲ ಎಂದು ಹೇಳಿ ಮಗುವನ್ನು ದಾನ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.
ಮಗುವನು ಮಾರಾಟ ಮಾಡಿರುವ ಮಾಹಿತಿ ಮೇರೆಗೆಮಗುವನ್ನು ಖರೀದಿಸಿದ ದಂಪತಿಯ ಮನೆಗೆ ಹೋಗಿದ್ದೆವು. ನಾವು ಅಲ್ಲಿ ನವಜಾತ ಶಿಶುವನ್ನು ಕಂಡುಕೊಂಡೆವು. ಮಗು ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ.
ತನಿಖೆಯನ್ನು ಕೈಗೆತ್ತಿಕೊಂಡ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಸ್ತಾ ಪೊಲೀಸರು ಮಗುವನ್ನು ಖರೀದಿ ಮಾಡಿದವರ ಕೈಯಿಂದ ರಕ್ಷಿಸಿದ್ದಾರೆ. ಜೊತೆಗ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್ ಕೂಡ ನೀಡಿದ್ದಾರೆ.