Hepatitis A: ಯಾವುದೇ ಪಾಲಕರು ತಮ್ಮ ಮಗು ಅನಾರೋಗ್ಯಕ್ಕೆ ತುತ್ತಾಗುವುದನ್ನು ನೋಡಲು ಬಯಸುವುದಿಲ್ಲ. ಹಾಗೆಯೇ ಮಗು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾನಾ ರೀತಿಯ ಆರೋಗ್ಯದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಆದರೂ, ಮಳೆಗಾಲದಲ್ಲಿ ಮಕ್ಕಳಿಗೆ ಸೊಂಕುಗಳು ಬೇಗ ಹರಡುತ್ತವೆ.
ಹೀಗಾಗಿ, ಮಳೆಗಾಲದಲ್ಲಿ ಮಕ್ಕಳನ್ನು ಸೋಂಕುಗಳಿಂದ ದೂರವಿಡಲು ಫಿಲ್ಟರ್ ಮಾಡಿದ ನೀರು ಮತ್ತು ಬೇಯಿಸಿದ ಆಹಾರವನ್ನು ನೀಡುತ್ತಾರೆ. ಆದರೂ, ಈ ಪ್ರಯತ್ನಗಳ ಹೊರತಾಗಿ, ಹೆಪಟೈಟಿಸ್ ಎ ನಂತಹ ಕಾಯಿಲೆಗಳು ಬರುವ ಸಾಧ್ಯತೆ ಅಧಿಕವಾಗಿದೆ.
ಮಕ್ಕಳ ತಜ್ಞರ ಪ್ರಕಾರ, ಹೆಪಟೈಟಿಸ್ ಎ ಒಂದು ವೈರಲ್ ಸೋಂಕಾಗಿದೆ. ಇದು ಯಕೃತ್ತಿನ(ಲಿವರ್) ಮೇಲೆ ಪರಿಣಾಮ ಬೀರುತ್ತದೆ. ಈ ಸೊಂಕಿನಿಂದ ಕೆಲವೊಂದು ಮಕ್ಕಳು ಬೇಗ ಚೇತರಿಸಿಕೊಳ್ಳುತ್ತಾರೆ. ಆದರೆ, ಕೆಲ ಮಕ್ಕಳು ಬೇಗ ಈ ಸೊಂಕಿನಿಂದ ಗುಣಮುಖರಾಗುವುದಿಲ್ಲ.
ಈ ಸೋಂಕು ಸಾಮಾನ್ಯವಾಗಿ ಮಕ್ಕಳಿಗೆ ಅಧಿಕ ಕಾರಣ ಮನೆ ಅಥವಾ ಶಾಲೆಯಲ್ಲಿ ಇನ್ನಿತರ ಸಹಪಾಠಿಗಳಿಗೆ ಹರಡಬಹುದು. ಹೀಗಾಗಿ, ಹೆಚ್ಚಿನ ಮಕ್ಕಳಿಗೆ ವಿಶ್ರಾಂತಿ ಬೇಕಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ಈ ರೋಗ ಲಕ್ಷಣಗಳು 6 ತಿಂಗಳವರೆಗೂ ಮರುಕಳಿಸುತ್ತಲೇ ಇರುತ್ತವೆ.
ಇದನ್ನೂ ಓದಿ: https://www.vijayavani.net/special-sabudana-paratha-for-those-fasting-during-the-month-of-shravan
ರಾಷ್ಟ್ರೀಯ ಕಣ್ಗಾವಲು ದತ್ತಾಂಶದ ಪ್ರಕಾರ 2011 ಮತ್ತು 2013ರ ನಡುವೆ ಶೇ.7 ಕ್ಕಿಂತ ಹೆಚ್ಚು ತೀವ್ರವಾದ ಕಾಮಾಲೆ ಪ್ರಕರಣಗಳಿಗೆ ಇದು ಕಾರಣವಾಗಿದೆ ಎಂದು ವರದಿ ತಿಳಿಸಿದೆ. ಅಂದ ಹಾಗೇ, ಮಳೆಗಾಲದಲ್ಲಿ ಹೆಪಟೈಟಿಸ್ ಎ ಪ್ರಕರಣಗಳು ಹೆಚ್ಚಾಗುತ್ತವೆ.
ಊಟಕ್ಕೆ ಮೊದಲು ಹಾಗೂ ಶೌಚಾಲಯ ಬಳಸಿದ ನಂತರ ಕೈ ತೊಳೆಯಲು ಮರೆಯುತ್ತಾರೆ. ಮಕ್ಕಳು ಶುಚಿತ್ವದಿಂದ ಕೈ ತೊಳೆಯುವುದರಿಂದ ಹೆಪಟ್ಐಟಿಸ್ ಎ ನಂತಹ ರೋಗಗಳನ್ನು ತಡೆಗಟ್ಟಬಹುದು.
ಈ ವೈರಸ್ ಟಾಯ್ಲೆಟ್ ಬಳಸಿದ ನಂತರ ಮಕ್ಕಳು ಸರಿಯಾದ ತೊಳೆಯದ ಕಾರಣ ಕೈಗಳ ಮೇಲೆ ಅಥವಾ ಮೇಲ್ಮೈಗಳಲ್ಲಿರುವ ವೈರಸ್ ಸೋಂಕಿಗೆ ಕಾರಣವಾಗಬಹುದು. ಮಕ್ಕಳಿಗೆ ಸೋಪು ಮತ್ತು ಶುದ್ಧ ನೀರಿನಿಂದ ಸರಿಯಾಗಿ ಕೈ ತೊಳೆಯಲು ಕಲಿಸುವುದರಿಂದ ಅಪಾಯವನ್ನು ಕಡಿಮೆ ಮಾಡಬಹುದು. ಸೋಪು ಮತ್ತು ನೀರು ಸುಲಭವಾಗಿ ಲಭ್ಯವಿಲ್ಲದ ಸ್ಥಳಗಳಲ್ಲಿ, ಸ್ಯಾನಿಟೈಸರ್ ಬಳಸುವುದರಿಂದ ರೋಗವನ್ನು ತಡೆಯಲು ಸಹಾಯ ಮಾಡುತ್ತದೆ.
ಭಾರೀ ಮಳೆಯಿಂದಾಗಿ ನೀರಿನೊಂದಿಗೆ ವಿಷಾಯುಕ್ತ ಅನಿಲಗಳು ಸೇರಿಕೊಳ್ಳಬಹುದು. ಇವುಗಳಿಂದ ಸೋಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗೆಯೇ ಕೊಳಚೆ ಪ್ರದೇಶದಲ್ಲಿರುವ ಕಚ್ಚಾ ಆಹಾರ, ಅಶುದ್ಧ ನೀರಿನಲ್ಲಿ ತೊಳೆದ ಹಣ್ಣುಗಳನ್ನು ತಿನ್ನುವುದರಿಂದ ಸೋಂಕಿಗೆ ತುತ್ತಾಗಬಹುದು.
ಅಪಾಯವನ್ನು ಕಡಿಮೆ ಮಾಡಲು ನೀರನ್ನು ಕುದಿಸಿ ಆರಿಸಿ ಕುಡಿಯಬೇಕು, ಹಾಗೆಯೇ ಹಣ್ಣುಗಳು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆದು ಸೇವಿಸಬೇಕು. ಮಳೆಗಾಲದಲ್ಲಿ ಬೀದಿ ಬದಿಯಲ್ಲಿ ಇರುವಂತಹ ಆಹಾರ ಸೇವಿಸದೇ ಇರುವುದರಿಂದ ಕಾಯಿಲೆಯನ್ನು ತಡೆಗಟ್ಟಬಹುದು.
ಉತ್ತಮ ಪರಿಸರ ಹಾಗೂ ಉತ್ತಮ ಆಹಾರ ಪದ್ಧತಿಗಳು ಅತೀ ಮುಖ್ಯ. ಆದರೆ, ಅದು ಯಾವಾಗಲು ದೊರಕುವುದು ಕಷ್ಟವಾಗಿರುತ್ತದೆ. ಹಾಗಾಗಿ, ಈ ಕಾಯಿಲೆಯಿಂದ ರಕ್ಷಿಸಲು ಹೆಪಟೈಟಸ್ ಎ ಲಸಿಕೆಯನ್ನು ಪಡೆಯುವುದರಿಂದ ರೋಗಗಳನ್ನು ತಡೆಗಟ್ಟಬಹುದು.( ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.