ನ್ಯೂಸ್

6 ತಿಂಗಳ ಮಗುವಿನ ತಲೆ ಮತ್ತು ಮುಖಕ್ಕೆ 50ಕ್ಕೂ ಹೆಚ್ಚು ಬಾರಿ ಕಚ್ಚಿದ ಇಲಿ; ಮಗುವಿನ ನಾಲ್ಕು ಬೆರಳು, ಹೆಬ್ಬೆರಳು ಮಾಯ..!

ಅಮೆರಿಕ: 6 ತಿಂಗಳ ಮಗುವಿಗೆ 50ಕ್ಕೂ ಹೆಚ್ಚು ಇಲಿಗಳು ಕಚ್ಚಿ ಪುಟ್ಟ ಮಗು ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಜೀವಂತವಾಗಿದ್ದ 6 ತಿಂಗಳ ಮಗು ಮನೆಯಲ್ಲಿ ಆಟವಾಡಿಕೊಂಡಿತ್ತು. ಸೆಪ್ಟೆಂಬರ್ 13 ರಂದು ಅಮೆರಿಕಾದ ಇಂಡಿಯಾನಾದಲ್ಲಿ ಘಟನೆ ನಡೆದಿದೆ.


ಯುಎಸ್​ಎ ಟುಡೇ ವರದಿ ಪ್ರಕಾರ, ಮಗುವಿನ ತಂದೆ ಪೊಲೀಸರಿಗೆ ಕರೆ ಮಾಡಿದ ಬಳಿಕ ವಿಚಾರ ಬೆಳಕಿಗೆ ಬಂದಿದೆ, ತಕ್ಷಣ ಪೊಲೀಸರ ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಪುಟ್ಟ ಮಗುವಾಗಿದ್ದರಿಂದ ಇಲಿಗಳಿಂದ ತಪ್ಪಿಸಿಕೊಂಡು ಹೋಗಲು ಮಗುವಿಗೆ ಅಸಾಧ್ಯವಾಗಿದೆ.


ಪುಟ್ಟ ಮಗುವನ್ನ 50ಕ್ಕೂ ಇಲಿಗಳು ಕಚ್ಚಿ ಗಾಯಗೊಳಿಸಿ ಕೊನೆಗೇ ಕೊಂದೇ ಬಿಟ್ಟಿದೆ. ಮಗುವಿನ ತಂದೆ ತಾಯಿಯಾದ ಡೇವಿಡ್ ಮತ್ತು ಏಂಜೆಲ್ ಸ್ಕೋನಾಬೌಮ್ ಅವರನ್ನು ನಿರ್ಲಕ್ಷ್ಯ ಮತ್ತು ಇತರ ಕ್ರಿಮಿನಲ್ ಆರೋಪಗಳನ್ನು ಹೊರಿಸಿ ಈಗಾಗಲೇ ಬಂಧಿಸಲಾಗಿದೆ.


ಇನ್ನು ಆಶ್ಚರ್ಯಕರ ಸಂಗತಿ ಅಂದ್ರೆ ಅದೇ ಮನೆಯಲ್ಲೇ ವಾಸಿಸುತ್ತಿದ್ದ ಮಗುವಿನ ಚಿಕ್ಕಮ್ಮ ಡೆಲಾನಿಯಾ ಥರ್ಮನ್ ಈ ಬಗ್ಗಡೆ ಗಮನ ವಹಿಸಿಲ್ಲ. ಆದ್ದರಿಂದ ಆಕೆಯನ್ನೂ ವಂಧಿಸಿರೋದಾಗಿ ಯುಎಸ್​​​ ಟುಡೇ ವರದಿ ಮಾಡಿದೆ. ಪುಟ್ಟ ಮಗುವಿನ ನಾಲ್ಕು ಬೆರಳುಗಳು ಮತ್ತು ಹೆಬ್ಬೆರಳು ಮೇಲಿನಿಂದ ಮಾಂಸವನ್ನು ಕಾಣೆಯಾ ಮೂಳೆಗಳು ಮಾತ್ರ ಕಾಣಿಸುತ್ತಿತ್ತು.


ಮಗುವನ್ನು ಇಂಡಿಯಾನಾಪೊಲಿಸ್‌ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗುವಿನ ದೇಹದ ತಾಪಮಾನ 93.5 ಡಿಗ್ರಿಗಳಿಗೆ ಇಳಿದಿದೆ. ತದನಂತರದಲ್ಲಿ ವೈದ್ಯರು ಮಗುವಿಗೆ ರಕ್ತವನ್ನು ನೀಡಿದ್ದಾರೆ.


ಮನೆಯಲ್ಲಿ ಗಲೀಜು, ಕಸ ಮತ್ತು ಇಲಿಗಳ ಮಲದಿಂದ ತುಂಬಿತ್ತು. ಮನೆಯಲ್ಲಿದ್ದ ಇಬ್ಬರು ಮಕ್ಕಳು ತಮಗೆ ಇಲಿಗಳು ಕಚ್ಚಿವೆ ಎಂದು ಶಿಕ್ಷರ ಬಳಿ ಹೇಳಿಕೊಂಡಿದ್ದರು. ಎಲ್ಲಾ ಮಕ್ಕಳನ್ನು ಪೋಷಕರ ಆರೈಕೆಯಿಂದ ಹೊರಗಿಡಲಾಗಿದೆ. ಮಗುವಿನ ತಂದೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಇನ್ನು ಪೋಷಕರು ಯಾವ ಕಾರಣಕ್ಕಾಗಿ ಇಷ್ಟೊಂದು ನಿರ್ಲಕ್ಷ್ಯ ವಹಿದ್ರು ಎಂಬ ಪ್ರಶ್ನೆಗೆ ಈವರೆಗೂ ಉತ್ತರ ದೊರೆತಿಲ್ಲ.